Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!
Team Udayavani, Nov 29, 2024, 6:53 AM IST
ಮುಂಬೈ: ಹಡಗಿನ ನಿವೃತ್ತ, 75 ವರ್ಷದ ಕ್ಯಾಪ್ಟನ್ ಒಬ್ಬರು ಸೈಬರ್ ವಂಚನೆಗೆ 11.16 ಕೋಟಿ ರೂ. ಕಳೆದುಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಷೇರು ಪೇಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚು ಹಣ ಬರಲಿದೆ ಎಂದು ನಂಬಿ ಮೋಸ ಹೋಗಿದ್ದಾರೆಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಫ್ ಇಬ್ರಾಹಿಂ ಮನ್ಸೂರಿ ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ 33 ಡೆಬಿಟ್ ಕಾರ್ಡ್ ಮತ್ತು ವಿವಿಧ ಬ್ಯಾಂಕುಗಳ 12 ಚೆಕ್ಬುಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಸೆನ್ಸೆಕ್ಸ್ 1190, ನಿಫ್ಟಿ 360 ಅಂಕ ಪತನ: ಹೂಡಿಕೆದಾರರಿಗೆ ನಷ್ಟ
ದಿನದಾರಂಭದ ಏರಿಕೆಯ ಹೊರತಾಗಿಯೂ ಭಾರತೀಯ ಷೇರುಪೇಟೆ ಗುರುವಾರ( ನ28) ಕುಸಿತವನ್ನು ದಾಖಲಿಸಿದೆ. ಸೆನ್ಸೆಕ್ಸ್ 1190.34 ಅಂಕ ಕುಸಿದು 79043.74ರಲ್ಲಿ ವ್ಯವಹಾರ ಮುಗಿಸಿತು. ಅದೇ ರೀತಿ, ನಿಫ್ಟಿ ಕೂಡ 360.75 ಅಂಕ ಕುಸಿದು 23914.15ರಲ್ಲಿ ತನ್ನ ದಿನದ ವಹಿವಾಟು ಪೂರ್ಣಗೊಳಿಸಿತು. ಜಾಗತಿಕ ಷೇರುಪೇಟೆಗಳ ಕುಸಿತದ ಪರಿಣಾಮ ರಿಲಯನ್ಸ್ ಇಂಡ್ಸ್ಟ್ರೀಸ್, ಎಚ್ಡಿಎಫ್ಸಿ ಬ್ಯಾಂಕ್ ಸೇರಿ ಕೆಲವು ಪ್ರಮುಖ ಷೇರುಗಳಲ್ಲಿ ಕುಸಿತವಾಗಿದ್ದೇ ಷೇರುಪೇಟೆ ತಲ್ಲಣಕ್ಕೆ ಕಾರಣವಾಗಿದೆ. ಹೀಗಾಗಿ, ಹೂಡಿಕೆದಾರರ ಸಂಪತ್ತು 1.50 ಲಕ್ಷ ಕೋಟಿ ರೂ. ನಷ್ಟವಾಗಿದೆ. ಅದಾನಿ ಗ್ರೂಪ್ನ 11 ಕಂಪನಿಗಳ ಷೇರುಗಳ ಪೈಕಿ 5 ಕಂಪನಿಗಳ ಷೇರುಗಳು ಭಾರೀ ಏರಿಕೆಯನ್ನು ದಾಖಲಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.