ಕೊಲೆ ಪ್ರಕರಣ ದಾಖಲಿಸಿದ ಪೊಲೀಸರು
Team Udayavani, Jul 2, 2018, 11:24 AM IST
ಹೊಸದಿಲ್ಲಿ: ಆಘಾತಕಾರಿ ಬೆಳವಣಿಗೆಯಲ್ಲಿ ಹೊಸದಿಲ್ಲಿಯ ಒಂದೇ ಕುಟುಂಬದ 11 ಮಂದಿಯ ಶವಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಎಲ್ಲರ ಕೈಗಳನ್ನೂ ಹಿಂದಕ್ಕೆ ಕಟ್ಟಿರುವುದಲ್ಲದೇ, ಕಣ್ಣಿಗೂ ಬಟ್ಟೆ ಕಟ್ಟಲಾಗಿದೆ. ಮೊದಲಿಗೆ ಆತ್ಮಹತ್ಯೆ ಎಂದು ಹೇಳಿದ್ದ ದಿಲ್ಲಿ ಪೊಲೀಸರು, ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೃತರಲ್ಲಿ ನಾಲ್ವರು ಪುರುಷರು, ಮೂವರು ಮಹಿಳೆಯರು, ನಾಲ್ವರು ಬಾಲಕಿಯರು ಸೇರಿದ್ದಾರೆ. ಒಂಬತ್ತು ಮಂದಿ ಕಿಟಕಿ ಸರಳಿಗೆ ನೇಣು ಹಾಕಿ ಕೊಂಡಿರುವ ಸ್ಥಿತಿಯಲ್ಲಿ, ಒಬ್ಬ ಮಹಿಳೆ ಬಾಗಿಲಿನ ಚಿಲಕಕ್ಕೆ ನೇಣು ಬಿಗಿದು ಕೊಂಡಂತೆ ಹಾಗೂ ಒಬ್ಬ ಮಹಿಳೆಯ ಶವ ನೆಲದ ಮೇಲೆ ಪತ್ತೆಯಾಗಿದೆ.
ಇದು ಉತ್ತರ ದಿಲ್ಲಿಯ ಸಂತ್ ನಗರದಲ್ಲಿನ ರಾಜಸ್ಥಾನಿ ಕುಟುಂಬವಾಗಿದ್ದು, ಕಿರಾಣಿ ಮತ್ತು ಪ್ಲೆವುಡ್ ಅಂಗಡಿ ನಡೆಸುತ್ತಿದೆ. ಜತೆಗೆ ಮನೆಯಲ್ಲಿ ಸದ್ಯದಲ್ಲೇ ವಿವಾಹ ಕಾರ್ಯಕ್ರಮವೊಂದನ್ನು ಆಯೋಜಿಸಲು ತಯಾರಿ ನಡೆದಿತ್ತು ಎಂದೂ ಮೂಲಗಳು ತಿಳಿಸಿವೆ.
ರವಿವಾರ ಬೆಳಗ್ಗೆ 7.30ರ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ. ಬೆಳಗ್ಗೆ ಯಾರೂ ಮನೆಯಿಂದ ಹೊರಗೆ ಬರದ ಕಾರಣ ನೆರೆಮನೆಯವರು ಕಿಟಕಿ ಮೂಲಕ ನೋಡಿದಾಗ ವಿಚಾರ ಗೊತ್ತಾಗಿದೆ. ಸದ್ಯಕ್ಕೆ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಬಗ್ಗೆ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಸಿಎಂಅರವಿಂದ್ ಕೇಜ್ರಿವಾಲ್, ಬಿಜೆಪಿ ನಾಯಕ ಮನೋಜ್ ತಿವಾರಿ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ.
ಮಾಟ-ಮಂತ್ರದ ನೆರಳು
ಮೃತರ ಮನೆಯಲ್ಲಿ ಕೆಲವೊಂದು ಪತ್ರಗಳು ಸಿಕ್ಕಿದ್ದು, ಅವುಗಳಲ್ಲಿರುವ ಅಂಶಗಳನ್ನು ನೋಡಿದರೆ, ಈ ಪ್ರಕರಣಕ್ಕೆ ಮಾಟ-ಮಂತ್ರದ ನಂಟಿದೆಯೇ ಎಂಬ ಶಂಕೆ ಮೂಡುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ರಗಳಲ್ಲಿ ಬರೆದಿರುವ ಅಂಶಗಳಿಗೂ, ಮೃತದೇಹಗಳ ಕಣ್ಣು, ಬಾಯಿಗಳನ್ನು ಕಟ್ಟಿರುವ ರೀತಿಗೂ ಸಾಮ್ಯತೆ ಇದೆ. ಮೃತರಲ್ಲೇ ಒಬ್ಬ ಉಳಿದ 10 ಮಂದಿಯನ್ನು ಕೊಂದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೊದಲಿಗೆ ಆಹಾರದಲ್ಲಿ ಮತ್ತು ಬರಿಸುವ ವಸ್ತು ಬೆರೆಸಿ, ಎಲ್ಲರ ಪ್ರಜ್ಞೆ ತಪ್ಪಿಸಲಾಗಿದೆ. ಈ ವೇಳೆ ಒಬ್ಟಾಕೆಗೆ ಎಚ್ಚರವಾಗಿದ್ದು, ಆಕೆ ಬೊಬ್ಬಿಡಬಾರದು ಎಂಬ ಕಾರಣಕ್ಕೆ ಅವಳ ಕತ್ತು ಸೀಳಿ ಕೊಲೆಗೈದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.