11,000 ಕಿ.ಮೀ. ಮಾನವ ಸರಪಳಿ; ಗಿನ್ನೆಸ್ ದಾಖಲೆ
Team Udayavani, Jan 22, 2017, 9:09 AM IST
ಪಟ್ನಾ: ಈ ಸಾಲಿನ ಮುಂದೆ ಎಟಿಎಂ ಎದುರು ಚಾಚಿಕೊಂಡಿದ್ದ ಕ್ಯೂ ಏನೂ ಅಲ್ಲ! ಇದು ಸುಮಾರು 11 ಸಾವಿರ ಕಿ.ಮೀ. ಉದ್ದದ ಸಾಲು! ಬಿಹಾರದಲ್ಲಿ ಪಾನ ನಿಷೇಧಕ್ಕೆ ಬೆಂಬಲ ಸೂಚಿಸಿ ರಸ್ತೆಯ ಎರಡೂ ಬದಿಯಲ್ಲಿ ಹಮ್ಮಿ ಕೊಂಡಿದ್ದ ಬೃಹತ್ ಮಾನವ ಸರಪಳಿ! ಸರಿ ಸುಮಾರು 3 ಕೋಟಿಗೂ ಅಧಿಕ ಮಂದಿ ರಚಿಸಿದ್ದ ಮಾನವ ಸರಪಳಿ ಈಗ ಗಿನ್ನೆಸ್ ಪುಟಕ್ಕೆ ದಾಖಲಾಗಿದೆ.
2004ರಲ್ಲಿ ಬಾಂಗ್ಲಾದೇಶ ದಲ್ಲಿ ರಚನೆಗೊಂಡ 2.30 ಕೋಟಿ ಮಂದಿಯ ಮಾನವ ಸರಪಳಿ 10 ಸಾವಿರ ಕಿ.ಮೀ. ಉದ್ದ ಚಾಚಿಕೊಂಡಿತ್ತು. ಆ ದಾಖಲೆಯನ್ನು ಬಿಹಾರದ ಜನತೆ ಶನಿವಾರ ಸರಿಗಟ್ಟಿದರು. ಕಳೆದ ವರ್ಷ ಎಪ್ರಿಲ್ 5ರಂದು ರಾಜ್ಯದಲ್ಲಿ ಜೆಡಿಯು- ಆರ್ಜೆಡಿ ಸಮ್ಮಿಶ್ರ ಸರಕಾರ ಪಾನ ನಿಷೇಧ ಜಾರಿಗೊಳಿಸಿತ್ತು. ಇದಕ್ಕೆ ಪೂರಕವಾಗಿ ಸರಕಾರವೇ ಹಮ್ಮಿಕೊಂಡಿದ್ದ ಬೃಹತ್ ಮಾನವ ಸರಪಳಿ ಕಾರ್ಯಕ್ರಮಕ್ಕೆ ಅಭೂತಪೂರ್ವ ಹಾಗೂ ಪಕ್ಷಾ ತೀತ ಬೆಂಬಲ ವ್ಯಕ್ತವಾಯಿತು. ಪಟ್ನಾದ ಗಾಂಧಿಮೈದಾನದಲ್ಲಿ ಬಲೂನ್ ಹಾರಿಸುವ ಮೂಲಕ ಸಿಎಂ ನಿತೀಶ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
38 ಜಿಲ್ಲೆಯ ಹಾದಿ: ಬಿಹಾರದ ಎಲ್ಲ 38 ಜಿಲ್ಲೆ ಗಳಲ್ಲಿ ಈ ಮಾನವ ಸರಪಳಿ ಹಾದುಹೋಗಿದ್ದು ವಿಶೇಷ. 3 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ, 8,285 ಕಿ.ಮೀ. ರಾಜ್ಯ ಹೆದ್ದಾರಿ ಸಹಿತ ಸಣ್ಣಪುಟ್ಟ ರಸ್ತೆಗಳಲ್ಲೂ ಜನ ಕೈ ಕೈ ಹಿಡಿದು ಮದ್ಯಪಾನದ ವಿರುದ್ಧ ಜಾಗೃತಿ ಮೂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್ ನಿಲ್ದಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.