ಹುಲಿ ಸಾವಿನಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ
Team Udayavani, Jan 2, 2018, 7:00 AM IST
ಹೊಸದಿಲ್ಲಿ: ಹುಲಿ ಸಂರಕ್ಷಣೆಗೆ ಕೇಂದ್ರ ಸರಕಾರ ಯಾವುದೇ ಕಾರ್ಯಕ್ರಮ ಜಾರಿ ಮಾಡಿದರೂ ಅದು ಯಶಸ್ವಿಯಾಗಿ ಜಾರಿಯಾಗುತ್ತಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ. 2017ರಲ್ಲಿ ಹುಲಿಗಳ ಸಾವಿನ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ಸಿಕ್ಕಿದೆ. ಒಟ್ಟು 15 ಹುಲಿಗಳು ಅಸುನೀಗಿವೆ. ಈ ಪಟ್ಟಿಯಲ್ಲಿ 25 ಹುಲಿಗಳು ಅಸುನೀಗಿರುವಂಥ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. 17 ಹುಲಿಗಳು ಸತ್ತಿರುವಂಥ ಮಹಾರಾಷ್ಟ್ರಕ್ಕೆ 2ನೇ ಸ್ಥಾನ ಸಿಕ್ಕಿದೆ.
ದೇಶಾದ್ಯಂತ ಕಳೆದ ವರ್ಷ ಒಟ್ಟು 95 ಹುಲಿಗಳು ಕೊನೆಯುಸಿರೆಳೆದಿವೆ. ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರ (ಎನ್‌ಟಿಸಿಎ) ಸಿದ್ಧಪಡಿಸಿದ ಅಂಕಿ ಅಂಶಗಳಿಂದ ಈ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ‘ದ ಹಿಂದುಸ್ಥಾನ್ ಟೈಮ್ಸ್’ ವರದಿ ಮಾಡಿದೆ. ಉತ್ತರಾಖಂಡದಲ್ಲಿ 15, ಅಸ್ಸಾಂನಲ್ಲಿ 8 ಮತ್ತು ಉತ್ತರ ಪ್ರದೇಶದಲ್ಲಿ 7 ಹುಲಿಗಳು ಅಸುನೀಗಿವೆ.
ಅತ್ಯಂತ ಆಘಾತಕಾರಿ ವಿಚಾರವೆಂದರೆ 2016ರಲ್ಲಿ ಮಧ್ಯಪ್ರದೇಶದಲ್ಲಿಯೂ 30 ವ್ಯಾಘ್ರಗಳು ಸಾವನ್ನಪ್ಪಿ ದ್ದವು. ಆ ವರ್ಷ ದೇಶಾದ್ಯಂತ ಒಟ್ಟು 97 ಹುಲಿಗಳು ಸಾವನ್ನಪ್ಪಿದ್ದವು. ಆ ರಾಜ್ಯದ ಅರಣ್ಯಾಧಿಕಾರಿಗಳು, ರೈಲಿಗೆ ಸಿಲುಕಿ, ಹುಲಿಗಳ ನಡುವೆಯೇ ಜಗಳ, ಕಳ್ಳಬೇಟೆಗಳ ಕಾರಣದಿಂದಾಗಿ ಜೀವ ಹಾನಿಯಾಗಿದೆ ಎಂಬ ಅಭಿಪ್ರಾಯ ಮುಂದಿಡುತ್ತಾರೆ. ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಇರುವ ರಾಜ್ಯ ಎಂಬ ಹೆಗ್ಗಳಿಕೆಯನ್ನು ಮಧ್ಯಪ್ರದೇಶ ಹೊಂದಿತ್ತು. ಆದರೆ, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳ ಸಾವು ಉಂಟಾಗುತ್ತಿದ್ದುದರಿಂದ, 2010ರಲ್ಲಿ ಹೆಚ್ಚು ಹುಲಿ ಗಳಿರುವ ರಾಜ್ಯ ಎಂಬ ಸ್ಥಾನ ಕರ್ನಾಟಕಕ್ಕೆ ಒಲಿದಿತ್ತು.
2015ರಲ್ಲಿ ನಡೆದಿದ್ದ ಸಮೀಕ್ಷೆ ಪ್ರಕಾರ, ಆ ರಾಜ್ಯದಲ್ಲಿ 257 ಹುಲಿಗಳು ಇದ್ದವು. ಸಮೀಕ್ಷೆ ಬಳಿಕ ಸಂಖ್ಯೆ 208ಕ್ಕೆ ಇಳಿಕೆಯಾಗಿತ್ತು. 2016ರ ಜನವರಿಯಿಂದ ಮಧ್ಯಪ್ರದೇಶದಲ್ಲಿ 55 ಹುಲಿಗಳು ಪ್ರಾಣ ಕಳೆದುಕೊಂಡಿವೆ. ಕಳ್ಳಬೇಟೆಗಾರರ ವಿರುದ್ಧ ಸರಕಾರ ಕಠಿನ ಕ್ರಮಕ್ಕೆ ಮುಂದಾಗಿದೆ ಎನ್ನುತ್ತಾರೆ ಮಧ್ಯಪ್ರದೇಶ ವನ್ಯಜೀವಿಗಳ ವಿರುದ್ಧದ ಅಪರಾಧ ತಡೆ ವಿಶೇಷ ಕಾರ್ಯಪಡೆಯ ಪ್ರಭಾರ ಮುಖ್ಯಸ್ಥ ರಿತೇಶ್ ಸಿರೋತಿಯಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.