118 ನಿಸ್ವಾರ್ಥ ಸಾಧಕರಿಗೆ “ಪದ್ಮಶ್ರೀ’ ಪ್ರಶಸ್ತಿಯ ಗರಿ
ಈ ಬಾರಿಯೂ ಎಲೆಮರೆಕಾಯಿಗಳ ಆಯ್ಕೆ
Team Udayavani, Jan 26, 2020, 12:56 AM IST
ಹೊಸದಿಲ್ಲಿ: ಚಂಡೀಗಡದ ಪಿಜಿಐ ಆಸ್ಪತ್ರೆಯ ಹೊರಗೆ, ಹಸಿದು ಬಂದ ರೋಗಿಗಳು, ಅವರ ಸಂಬಂಧಿಗಳಿಗೆ ಉಚಿತವಾಗಿ ಅನ್ನದಾನ ಮಾಡುವ ಜಗದೀಶ್ ಲಾಲ್ ಅಹುಜಾ…
25 ಸಾವಿರದಷ್ಟು ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸಿ ಧನ್ಯರೆನಿಸಿದ ಫೈಜಾಬಾದ್‌ನ ಮೊಹಮ್ಮದ್ ಶರೀಫ್…
ಮಹಾರಾಷ್ಟ್ರದ ಬರಪೀಡಿತ ಹಿವಾರೆ ಬಜಾರ್ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಸಿ ಕುಡಿಯುವ ನೀರಿನ ಸಮಸ್ಯೆಗೆ ಅಂತ್ಯಹಾಡಿದ ಪೋಪಾrರಾವ್ ಪವಾರ್…
ಹೀಗೆ ಅನ್ನದಾತನಿಂದ ಹಿಡಿದು ಅಕ್ಷರದಾತನವರೆಗೆ, ವೈದ್ಯರಿಂದ ಹಿಡಿದು ಭಜನೆಗಾಯಕನವರೆಗೆ ಒಟ್ಟು 118 ಮಂದಿ ಎಲೆಮರೆಯ ಕಾಯಿಗಳ ಮುಡಿಗೆ ಈ ಬಾರಿಯ “ಪದ್ಮ’ ಪ್ರಶಸ್ತಿಯ ಗೌರವ ಸಂದಿದೆ. ಕಳೆದ ವರ್ಷವೂ ಕೇಂದ್ರ ಸರಕಾರವು ಇದೇ ರೀತಿ ನಿಸ್ವಾರ್ಥ ಸೇವೆಗೆ ಹೆಸರಾದ ಸಾಧಕರಿಗೆ ಪದ್ಮ ಗೌರವ ನೀಡಿತ್ತು.
ಶನಿವಾರ ಕೇಂದ್ರ ಸರಕಾರವು ಪದ್ಮ ಪುರಸ್ಕೃತರ ಪಟ್ಟಿ ಪ್ರಕಟಿಸಿದ್ದು, 7 ಮಂದಿ ಸಾಧಕರಿಗೆ ಪದ್ಮ ವಿಭೂಷಣ, 16 ಮಂದಿಗೆ ಪದ್ಮಭೂಷಣ ಹಾಗೂ 118 ಮಂದಿಗೆ ಪದ್ಮಶ್ರೀ ಗೌರವವನ್ನು ಘೋಷಿಸಿದೆ.
ಸೇವೆಗೆ ಸಂದ ಹಿರಿಮೆ: ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ನಿಟ್ಟಿನಲ್ಲಿ ಮೌನವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನೇ ಪದ್ಮ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಅಸ್ಸಾಂನ ಆನೆಗಳ ವೈದ್ಯ ಕುಶಾಲ್ ಕೊನ್ವಾರ್ ಸರ್ಮಾ, ಜಮ್ಮು-ಕಾಶ್ಮೀರದಲ್ಲಿ ದಿವ್ಯಾಂಗ ಮಕ್ಕಳ ಸೇವೆಯಲ್ಲಿ ತೊಡಗಿರುವ ಸ್ವತಃ ದಿವ್ಯಾಂಗರಾಗಿರುವ ಸಮಾಜ ಸೇವಕ ಜಾವೇದ್ ಅಹ್ಮದ್ ತಕ್, ಕಳೆದ 4 ದಶಕಗಳಿಂದ ಈಶಾನ್ಯ ರಾಜ್ಯಗಳ ಕುಗ್ರಾಮಗಳಲ್ಲಿ ಶಿಕ್ಷಣ ಹಾಗೂ ಓದುವ ಅಭ್ಯಾಸವನ್ನು ಉತ್ತೇಜಿಸುತ್ತಿರುವ ಅರುಣಾಚಲ ಪ್ರದೇಶದ ಸತ್ಯನಾರಾಯಣ ಮುಂಡಾಯೂರ್(ಅಂಕಲ್ ಮೂಸಾ) ಅವರಿಗೆ ಪದ್ಮ ಪ್ರಶಸ್ತಿ ಸಂದಿದೆ.
ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗಾಗಿ ಹೋರಾಡಿದ ಅಬ್ದುಲ್ ಜಬ್ಟಾರ್‌ರಿಗೆ ಮರಣೋತ್ತರವಾಗಿ ಪದ್ಮಶ್ರೀ ನೀಡಲಾಗಿದೆ. ರಾಜಸ್ಥಾನದ ದಲಿತ ಸಮಾಜ ಸೇವಕಿ ಉಷಾ ಚೌಮಾರ್, ಮೇಘಾಲಯದಲ್ಲಿ ಅರಶಿನ ಕೃಷಿ ಕ್ರಾಂತಿ ಮಾಡಿರುವ ರೈತ ಟ್ರಿನಿಟಿ ಸಾಯೂ, ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಚೆನ್ನೈನ ವೈದ್ಯ ರವಿ ಕಣ್ಣನ್, ರಾಜಸ್ಥಾನದ ಮುಸ್ಲಿಂ ಭಜನೆ ಗಾಯಕ ಮುನ್ನಾ ಮಾಸ್ಟರ್, ಉತ್ತರಾಖಂಡದ 81 ವರ್ಷದ ವೈದ್ಯ ಯೋಗಿ ಆರೆನ್ ಸೇರಿದಂತೆ ಅನೇಕ ಸಾಧಕರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
6 ಯೋಧರಿಗೆ ಶೌರ್ಯ ಚಕ್ರ
ಉಗ್ರ ನಿಗ್ರಹ ಹಾಗೂ ಬಂಡುಕೋರ ನಿಗ್ರಹ ಕಾರ್ಯಾಚರಣೆಯಲ್ಲಿ ಶೌರ್ಯ ಮೆರೆದ 6 ಮಂದಿ ಯೋಧರಿಗೆ ಶೌರ್ಯ ಚಕ್ರ ಘೋಷಿಸಲಾಗಿದೆ. ಈ ಪೈಕಿ ನಾಯ್ಕ ಸುಬೇರಾದ್ ಸೊಂಬೀರ್ ಅವರಿಗೆ ಮರಣೋತ್ತರವಾಗಿ ಈ ಗೌರವ ಪಡೆಯಲಿದ್ದಾರೆ. ಇವರು ಕಳೆದ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್ ವೇಳೆ ಹುತಾತ್ಮರಾಗಿದ್ದಾರೆ. ಉಳಿದಂತೆ, ಲೆ.ಕ. ಜ್ಯೋತಿ ಲಾಮಾ, ಮೇಜರ್ ಕೊಂಜೆಂಗ್‌ಭಾಮ್ ಬಿಜೇಂದ್ರ ಸಿಂಗ್, ಸುಬೇದಾರ್ ನರೇಂದ್ರ ಸಿಂಗ್ ಮತ್ತು ನಾಯ್ಕ ನರೇಶ್ ಕುಮಾರ್ ಅವರೇ ಶೌರ್ಯ ಚಕ್ರ ಪುರಸ್ಕೃತರು.
ಲೆ.ಜ. ಧಿಲ್ಲಾನ್‌ಗೆ ಗೌರವ: ಇದೇ ವೇಳೆ, ಸೇನೆಯ ಶ್ರೀನಗರ ಮೂಲದ 15 ಕಾರ್ಪ್Õ ಕಮಾಂಡರ್ ಲೆ.ಜ. ಕೆ.ಜೆ.ಎಸ್.ಧಿಲ್ಲಾನ್ ಅವರಿಗೆ ಉತ್ತಮ ಯುದ್ಧ ಸೇವಾ ಮೆಡಲ್ ಘೋಷಿಸಲಾಗಿದೆ. 370ನೇ ವಿಧಿ ರದ್ದು ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಅವರು ಕೈಗೊಂಡ ಗಣನೀಯ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ.
ಜಾರ್ಖಂಡ್‌ನಲ್ಲಿ ನಕ್ಸಲ್‌ನ ಪ್ರಮುಖ ಕಮಾಂಡರ್ ಸಹದೇವ್ ರಾಯ್ ಅಲಿಯಾಸ್ ತಾಲಾ ಡಾನನ್ನು ಹತ್ಯೆಗೈಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದ ನಾಲ್ವರು ಸಿಬ್ಬಂದಿಗೆ ಪೊಲೀಸ್ ಶೌರ್ಯ ಪದಕ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.