‘ವಿಡಿಯೋ ಗೇಮ್ಸ್ ಬಿಟ್ಟು ಓದಿನತ್ತ ಗಮನಹರಿಸು’ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಾಲಕ
Team Udayavani, Jul 22, 2020, 8:00 AM IST
ಮುಂಬೈ: ವಿಡಿಯೋ ಗೇಮ್ಸ್ ಆಡಬೇಡವೆಂದ ತಾಯಿ ಮಾತಿಗೆ ಮನನೊಂದು 12 ವರ್ಷದ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬಯಿನಲ್ಲಿ ನಡೆದಿದೆ.
ಜುಲೈ 20ರ ಸೋಮವಾರ ಮಧ್ಯಾಹ್ನದ ವೇಳಗೆ ಈ ಬಾಲಕ ಮೊಬೈಲ್ ಮೂಲಕ ವಿಡಿಯೋ ಗೇಮ್ ಆಡುತ್ತಿದ್ದು, ಇದನ್ನು ಗಮನಿಸಿದ ಆತನ ತಾಯಿ ಪೋನ್ ತೆಗೆದಿಟ್ಟು ಓದಿನ ಕಡೆ ಗಮನಹರಿಸು ಎಂದು ಸೂಚನೆ ನೀಡಿದ್ದರು.
ಇದರಿಂದ ಕುಪಿತಗೊಂಡ ಬಾಲಕ ಕೂಡಲೇ ತನ್ನ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾನೆ ಎನ್ನಲಾಗಿದೆ. ಆ ಬಳಿಕ ತುಂಬಾ ಹೊತ್ತಾದರೂ ಬಾಗಿಲು ತೆರೆಯದಿದ್ದನ್ನು ಗಮನಿಸಿದ ಪೋಷಕರು ಗಾಬರಿಗೊಂಡಿದ್ದಾರೆ.
ಬಳಿಕ ಡೋರ್ ಮುರಿದು ಕೋಣೆಗೆ ಪ್ರವೇಶಿಸಿದಾಗ 12 ವರ್ಷದ ಬಾಲಕ ಫ್ಯಾನ್ ಗೆ ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.
ಕೂಡಲೇ ಹಾಸ್ಪತ್ರೆಗೆ ಸಾಗಿಸಲಾಯಿತಾದರು ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದ. ಈ ಬಗ್ಗೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ವರದಿ(ADR) ದಾಖಲಾಗಿದೆ. ಮಾತ್ರವಲ್ಲದೆ ಬಾಲಕ ತಂದೆಯ ಹೇಳಿಕೆಯನ್ನು ಆಧರಿಸಿ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.