ಗಗನಸಖಿ ಕನಸು ನನಸು ಮಾಡಿಕೊಂಡ ಬುಡಕಟ್ಟು ಯುವತಿ
Team Udayavani, Sep 3, 2022, 7:20 AM IST
ತಿರುವನಂತಪುರಂ: ಕೇರಳದ ಆ ಯುವತಿ 12 ವರ್ಷದವಳಿದ್ದಾಗಲೇ ಗಗನಸಖಿ ಆಗಬೇಕೆಂದು ಕನಸು ಕಂಡಿದ್ದರು. ಪರಿಶಿಷ್ಟ ಪಂಗಡದವರಿಗೆ ಸಾಧ್ಯವಿಲ್ಲ ಎಂದೆನಿಸಿಕೊಂಡಿದ್ದ ಕನಸನ್ನು ಇದೀಗ ನನಸು ಮಾಡಿ ತೋರಿಸಿದ್ದಾರೆ ಗೋಪಿಕಾ ಗೋವಿಂದ್.
ಕಣ್ಣೂರು ಜಿಲ್ಲೆಯ ಕವುಂಕುಡಿ ಎಸ್‌ಟಿ ಕಾಲೋನಿಯ ಗೋಪಿಕಾ(24) ಇನ್ನು ಕೆಲ ದಿನಗಳಲ್ಲಿ “ಏರ್ ಇಂಡಿಯಾ ಎಕ್ಸ್‌ಪ್ರೆಸ್’ ಸಂಸ್ಥೆಯ ಗಗನಸಖಿಯಾಗಲಿದ್ದಾರೆ. ರಾಜ್ಯದಲ್ಲಿ ಗಗನಸಖಿಯಾದ ಮೊದಲ ಎಸ್‌ಟಿ ಮಹಿಳೆಯಾಗಿ ಹೊರಹೊಮ್ಮಲಿದ್ದಾರೆ.
ಗಗನಸಖಿ ಕನಸು ಕಂಡಿದ್ದ ಗೋಪಿಕಾಗೆ ಅದರ ಕೋರ್ಸಿನ ಖರ್ಚು ವೆಚ್ಚದ ಮಾಹಿತಿ ತಿಳಿದು ನಿರಾಸೆಯಾಗಿತ್ತು. ಅದೇ ಕಾರಣಕ್ಕೆ ಅವರು ಬಿಎಸ್ಸಿ ವಿದ್ಯಾಭ್ಯಾಸ ಮಾಡಲಾರಂಭಿಸಿದ್ದಾರೆ.
ಆ ವೇಳೆ ಅವರಿಗೆ ರಾಜ್ಯ ಸರ್ಕಾರವು ಎಸ್‌ಟಿ ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಖರ್ಚು ಭರಿಸುವ ಯೋಜನೆ ಬಗ್ಗೆ ಮಾಹಿತಿ ಸಿಕ್ಕಿದೆ. ಅದನ್ನು ಬಳಸಿಕೊಂಡ ಅವರು ವಯನಾಡಿನ ಡ್ರೀಮ್ ಸ್ಕೈ ಏವಿಯೇಷನ್ ತರಬೇತಿ ಅಕಾಡೆಮಿಯಲ್ಲಿ ಐಎಟಿಎ ಗ್ರಾಹಕ ಸೇವಾ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ನಂತರ ಮುಂಬೈನಲ್ಲಿ ಏರ್ ಇಂಡಿಯಾದಿಂದ ತರಬೇತಿ ಪಡೆದಿದ್ದಾರೆ. ತರಬೇತಿ ಪೂರ್ಣಗೊಳಿಸಿರುವ ಅವರು ಶೀಘ್ರವೇ ಗಗನಸಖಿಯಾಗಿ ಹಾರಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.