ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ 1,261 ಕಲ್ಲೆಸೆತ ಪ್ರಕರಣ
Team Udayavani, Mar 9, 2018, 5:17 PM IST
ಜಮ್ಮು : ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ 1,261 ಕಲ್ಲೆಸೆತದ ಪ್ರಕರಣಗಳು ನಡೆದಿವೆ.
ಈ ಪೈಕಿ ಅತ್ಯಧಿಕ ಕಲ್ಲೆಸೆತದ ಪ್ರಕರಣಗಳು ನಡೆದದ್ದು ಹತ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿಯ ಹುಟ್ಟೂರಾದ ಪುಲ್ವಾಮಾದಲ್ಲಿ. ಇದರ ಬಳಿಕ ಅತ್ಯಧಿಕ ಕಲ್ಲೆಸೆತದ ಪ್ರಕರಣಗಳು ನಡೆದಿರುವುದು ಸೋಪೋರ್ ನಲ್ಲಿ. ಇದು ಹುರಿಯತ್ ನಾಯಕ ಸೈಯ್ಯದ್ ಗೀಲಾನಿ ಅವರ ಭದ್ರ ಕೋಟೆಯಾಗಿದೆ.
2017ರಲ್ಲಿ ಪುಲ್ವಾಮಾದಲ್ಲಿ 91 ಕಲ್ಲೆಸೆತದ ಪ್ರಕರಣಗಳು ನಡೆದಿವೆ. ಸೋಪೋರ್‌ನಲ್ಲಿ 71 ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಗೃಹ ಸಚಿವಾಲಯ ತಿಳಿಸಿದೆ.
2016ರಲ್ಲಿ ಸೋಪೋರ್‌ನಲ್ಲಿ ಸುಮಾರು 500 ಕಲ್ಲೆಸೆತದ ಘಟನೆಗಳು ನಡೆದಿದ್ದವು. ಉಗ್ರ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಉಂಟಾದ ಕಾಶ್ಮೀರ ಅಶಾಂತಿಯ ವೇಳೆಯಲ್ಲಿ ನಡೆದಿರುವ ಗರಿಷ್ಠ ಪ್ರಕರಣ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.