ರೈಲಿಗೆ ಶಾಲಾ ವಾಹನ ಢಿಕ್ಕಿ: 13 ಮಕ್ಕಳ ಸಾವು
Team Udayavani, Apr 27, 2018, 6:00 AM IST
ಗೋರಖ್‌ಪುರ: ಆಟ-ಪಾಠದ ಜತೆಗೆ ಆಡಿ ಕುಣಿದಾಡಬೇಕಿದ್ದ ಮಕ್ಕಳು ಶಾಲಾ ವಾಹನದಲ್ಲಿ ಹೋಗುವಾಗ ಚಾಲಕನ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ರೈಲಿಗೆ ಢಿಕ್ಕಿಯಾಗಿ ಪ್ರಾಣಕಳೆದು ಕೊಂಡ ದಾರುಣ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ 13 ಮಕ್ಕಳು ಸಾವಿಗೀಡಾಗಿದ್ದು, 8 ಮಂದಿಗೆ ಗಂಭೀರ ಗಾಯಗಳಾಗಿವೆ. ಮೃತ ಮಕ್ಕಳೆಲ್ಲರೂ 7ರಿಂದ 11 ವರ್ಷದೊಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ.
ಗೋರಖು³ರದಿಂದ 50 ಕಿ.ಮೀ. ದೂರದ ಖುಷಿನಗರದ ಮಾನವರಹಿತ ಲೆವಲ್ ಕ್ರಾಸಿಂಗ್ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡಿರುವ 8 ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಶಾಲಾ ವಾಹನ ಡಿವೈನ್ ಪಬ್ಲಿಕ್ ಸ್ಕೂಲ್‌ಗೆ ಸೇರಿದ್ದಾಗಿದ್ದು, ವ್ಯಾನ್‌ನಲ್ಲಿ 22 ಮಕ್ಕಳು ಸೇರಿ 25 ಮಂದಿ ಪ್ರಯಾಣಿಸುತ್ತಿದ್ದರು. ಅದೇ ವೇಳೆ ಥಾವೆ-ಕಪ್ತಾನ್‌ಗಂಜ್ ಪ್ರಯಾಣಿಕ ರೈಲು ಆಗಮಿಸಿದ್ದು, ಇನ್ನೇನು ಮುಂದಕ್ಕೆ ಚಲಿಸಲಿದೆ ಎನ್ನುವಷ್ಟರಲ್ಲಿ ಶಾಲಾ ವಾಹನ ಚಾಲಕ ಮುನ್ನುಗ್ಗಿದ್ದರಿಂದ ಘಟನೆ ಸಂಭವಿಸಿದೆ.
4 ಲಕ್ಷ ರೂ. ಪರಿಹಾರ: ಅಸುನೀಗಿದ ಮಕ್ಕಳ ಕುಟುಂಬಕ್ಕೆ ರೈಲ್ವೇ ಸಚಿವ ಪಿಯೂಷ್ ಗೋಯಲ್ ತಲಾ 2ಲಕ್ಷ ರೂ. ಮತ್ತು ಸಿಎಂ ಯೋಗಿ ಆದಿತ್ಯನಾಥ್ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮುಂದೆ ಇಂಥ ಘಟನೆ ಸಂಭವಿಸದಂತೆ ಕಠಿಣ ಕ್ರಮ ಜರುಗಿಸುವುದಾಗಿ ಸಿಎಂ ಯೋಗಿ ಹೇಳಿದ್ದು, ತನಿಖೆಗೆ ಆದೇಶಿಸಿದ್ದಾರೆ. ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ, ರಾಜ್ಯಪಾಲ ರಾಮ್ ನಾಯ್ಕ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಇದೇ ವೇಳೆ, ಆ ಶಾಲೆಯು ನೋಂದಣಿಯೇ ಆಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾಟಕ ನಿಲ್ಲಿಸಿ: ಪ್ರತಿಭಟನಕಾರರಿಗೆ ಯೋಗಿ
ಘಟನಾ ಸ್ಥಳಕ್ಕೆ ಸಿಎಂ ಯೋಗಿ ಆಗಮಿಸಿದ ವೇಳೆ ಆಕ್ರೋಶಗೊಂಡ ಗುಂಪೊಂದು ರೈಲ್ವೇ ಮತ್ತು ಸ್ಥಳೀಯ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಇದೇ ವೇಳೆ, ಕೆಲವರು ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎಂದೂ ಕೂಗತೊಡಗಿದರು. ಇದರಿಂದ ಕೋಪಗೊಂಡ ಸಿಎಂ ಯೋಗಿ, “ಘೋಷಣೆ ಕೂಗುವುದನ್ನು ನಿಲ್ಲಿಸಿ, ಈ ನಾಟಕ ನಿಲ್ಲಿಸಿ. ನಾನು ಬಂದಿರುವುದು ಸಂತಾಪ ಸೂಚಿಸಲು ‘ ಎಂದು ಹೇಳಿದರು. ಆದರೆ, ಇದರಿಂದ ಸುಮ್ಮನಾಗದ ಪ್ರತಿಭಟನಾಕಾರರು ರೈಲ್ವೇ ಹಳಿ ಮೇಲೆ ಮಲಗಿ ಪ್ರತಿಭಟನೆ ವ್ಯಕ್ತಪಡಿಸಿದರು.
ಇಯರ್‌ಫೋನ್ ಹಾಕಿಕೊಂಡಿದ್ದ ಚಾಲಕ
ಚಾಲಕ ಇಯರ್‌ಫೋನ್ ಹಾಕಿಕೊಂಡು ಮೊಬೈಲ್‌ನಲ್ಲಿ ಮಾತನಾಡಿ ಕೊಂಡೇ ವಾಹನ ಚಲಾಯಿತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೀಗಾಗಿ ಗೇಟ್ ಬಳಿ ಇದ್ದ ರೈಲ್ವೇ ಸಿಬಂದಿ(ರೈಲ್ವೇ ಮಿತ್ರ) ಕೂಗಿ ಕೊಂಡಿದ್ದೂ ಚಾಲಕನಿಗೆ ಕೇಳಿಸಲಿಲ್ಲ. ಆತ ಏಕಾಏಕಿ ಕ್ರಾಸಿಂಗ್‌ನಲ್ಲಿ ಹಳಿಯ ಮೇಲೆ ವಾಹನ ನುಗ್ಗಿಸಿದ ಪರಿಣಾಮ ಘಟನೆ ಸಂಭವಿಸಿದೆ. ಚಾಲಕನ ಸ್ಥಿತಿಯೂ ಚಿಂತಾಜನಕವಾಗಿದೆ .
ಅಪಘಾತಕ್ಕೆ ವಿದ್ಯಾರ್ಥಿ ಬಲಿ
ಹೊಸದಿಲ್ಲಿ: ಹಾಲಿನ ವಾಹನ ಮತ್ತು ಶಾಲಾ ವಾಹನ ಮುಖಾಮುಖೀ ಢಿಕ್ಕಿಯಾದ ಪರಿಣಾಮ ಒಬ್ಬ ಬಾಲಕ ಸಾವಿಗೀಡಾಗಿ, 17 ಮಕ್ಕಳು ಗಾಯಗೊಂಡಿರುವ ಘಟನೆ ಹೊಸದಿಲ್ಲಿಯ ಕನ್ಹಯ್ಯ ನಗರದಲ್ಲಿ ಗುರುವಾರ ನಡೆದಿದೆ. ಇಲ್ಲಿನ ಎರಡು ಶಾಲೆಗೆ ಸೇರಿದ ಮಕ್ಕಳು ವಾಹನದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾನವರಹಿತ ರೈಲ್ವೇ ಕ್ರಾಸಿಂಗ್ ದಾಟುವಾಗ ರಸ್ತೆ ಬಳಕೆದಾರರೇ ಎಚ್ಚರ ವಹಿಸಬೇಕೇ ಹೊರತು, ಪ್ರಾಥಮಿಕ ಹೊಣೆಗಾರಿಕೆಯು ರೈಲ್ವೇ ಇಲಾಖೆಯದ್ದಲ್ಲ. 2020ರೊಳಗೆ ಎಲ್ಲ ಕ್ರಾಸಿಂಗ್‌ಗಳನ್ನು ಮಾನವಸಹಿತವಾಗಿ ಬದಲಿಸುತ್ತೇವೆ.
ಅಶ್ವನಿ ಲೊಹಾನಿ, ರೈಲ್ವೇ ಮಂಡಳಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
Uttarakhand ಹೈಕೋರ್ಟ್ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ
PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ
Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.