13 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: 20 ರೂ. ನೀಡಿ ಯಾರಿಗೂ ತಿಳಿಸಬೇಡವೆಂದರು !
Team Udayavani, Mar 6, 2021, 12:14 PM IST
ಉತ್ತರಪ್ರದೇಶ: 13 ವರ್ಷದ ಬಾಲಕನ ಮೇಲೆ ಇಬ್ಬರು ಅಪ್ರಾಪ್ತ ವಯಸ್ಕರು ಲೈಂಗಿಕ ದೌರ್ಜನ್ಯವೆಸೆಗಿದ ಘಟನೆ ಉತ್ತರಪ್ರದೇಶದ ಆಲಿಗಢದಲ್ಲಿ ನಡೆದಿದೆ.
ಸಂತ್ರಸ್ತ ಬಾಲಕನ ತಂದೆ, ಆತನನ್ನು ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನು ತರುವಂತೆ ಮಾರುಕಟ್ಟೆಗೆ ಕಳುಹಿಸಿದ್ದರು. ಈ ವೇಳೆ ಇಬ್ಬರು ಬಾಲಕರು ಲೋಧ ಪ್ರದೇಶದ ಬಳಿ ಆತನಿಗೆ ಎದುರಾಗಿ, ಸಮೀಪದ ಅರಣ್ಯಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದರು.
ಬಳಿಕ ಸಂತ್ರಸ್ತ ಬಾಲಕನಿಗೆ 20 ರೂ. ಹಣ ನೀಡಿ ಘಟನೆಯ ಕುರಿತು ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದರು. ಅದಾಗಿಯೂ ಸಂತ್ರಸ್ತ ಬಾಲಕ ಮನೆಗೆ ತೆರಳಿ ಪೋಷಕರಿಗೆ ಮಾಹಿತಿ ನೀಡಿದ್ದನು.
ಇದನ್ನೂ ಓದಿ: ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ಮೋದಿ ಫೋಟೋ ತೆಗೆಯಿರಿ: ಚುನಾವಣಾ ಆಯೋಗ ಸೂಚನೆ
ಇದೀಗ ಸಂತ್ರಸ್ತ ಬಾಲಕನ ತಂದೆ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಬಾಲಕರು ತನಗೆ ಪರಿಚಿತರು ಎಂದು ತಿಳಿಸಿದ್ದಾರೆ. ಮಾತ್ರವಲ್ಲದೆ ಘಟನೆಯ ಕುರಿತು ಬಾಲಕರ ಕುಟುಂಬಸ್ಥರಿಗೆ ಮಾಹಿತಿ ನೀಡಿದರೂ, ಆರೋಪವನ್ನು ಅವರು ನಿರಾಕರಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಅನಾವಶ್ಯಕವಾಗಿ ಕೋರ್ಟ್ ಗೆ ಹೋಗಿ ಮತ್ತಷ್ಟು ಗೋಜಲಾಗಿಸುವುದು ಒಳ್ಳೆಯದಲ್ಲ: ಸದಾನಂದ ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.