Nepal: ನದಿಗುರುಳಿದ ಭಾರತೀಯ ಪ್ರಯಾಣಿಕರಿದ್ದ ಬಸ್:27 ಮಂದಿ ಮೃತ್ಯು
Team Udayavani, Aug 23, 2024, 1:11 PM IST
ಕಠ್ಮಂಡು: ಭಾರತೀಯ ನೋಂದಣಿ ಹೊಂದಿದ್ದ ಬಸ್ಸೊಂದು ನೇಪಾಲದ ಮರ್ಸಂಗ್ದಿ ನದಿಗೆ ಉರುಳಿದ್ದು, 27 ಮಂದಿ ಮೃತಪಟ್ಟಿದ್ದಾರೆ. 43 ಮಂದಿ ಪ್ರಯಾಣಿಕರ ನ್ನೊಳಗೊಂಡಿದ್ದ ಬಸ್ ಪೋಖ್ರಾದಿಂದ ಕಠ್ಮಂಡುವಿಗೆ ತೆರಳುತ್ತಿತ್ತು.
ಈ ಬಗ್ಗೆ ಭಾರತೀಯ ರಾಯಭಾರ ಕಚೇರಿ, “ಅಪಘಾತದಲ್ಲಿ 27 ಭಾರತೀಯರು ಮೃತಪಟ್ಟಿರುವುದು ದುಃಖ ತಂದಿದೆ. ಇನ್ನುಳಿದ 16 ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲಾಗಿದ್ದು, ಚಿಕಿತ್ಸೆಗಾಗಿ ಕಠ್ಮಂಡುವಿಗೆ ಏರ್‌ಲಿಫ್ಟ್ ಮಾಡಲಾಗಿದೆ. ಮೃತಪಟ್ಟವರ ಕುಟುಂಬಕ್ಕೆ ರಾಯಭಾರ ಕಚೇರಿ ಸಂತಾಪ ಸೂಚಿಸುತ್ತದೆ’ ಎಂದು ಟ್ವೀಟ್ ಮಾಡಿದೆ. ನೇಪಾಲ ಭದ್ರತಾ ಪಡೆ, ಸೇನೆ, ಸಶಸ್ತ್ರ ಪೊಲೀಸ್ ಪಡೆ ಹಾಗೂ ನೇಪಾಲ ಪೊಲೀಸ್ ಸೇರಿ 250 ಮಂದಿ ರಕ್ಷಣ ಕಾರ್ಯದಲ್ಲಿ ಭಾಗಿಯಾಗಿದ್ದರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಹಾರಾಷ್ಟ್ರದ 104 ಮಂದಿಯ ತಂಡವು 10 ದಿನಗಳಯಾತ್ರೆಗೆಂದು ಉತ್ತರ ಪ್ರದೇಶದ ಗೋರಖ್‌ಪುರದಿಂದ ಮೂರು ಬಸ್‌ಗಳಲ್ಲಿ ಎರಡು ದಿನಗಳ ಹಿಂದೆ ನೇಪಾಲಕ್ಕೆ ಹೊರಟಿತ್ತು.
ಇದನ್ನೂ ಓದಿ: Kota: ನವವಿವಾಹಿತೆಯ ದಾರುಣ ಹತ್ಯೆ; ಪತಿಯಿಂದಲೇ ಕೃತ್ಯ ಶಂಕೆ; ಆರೋಪಿ ಪೊಲೀಸ್ ವಶಕ್ಕೆ
Over 10 people were killed after an Indian-registered passenger bus plunged into the Marsyangdi River in central Nepal.
📹News Agency Rastriya Samachar Samiti. pic.twitter.com/f9Hri7VCuQ
— The New Indian Express (@NewIndianXpress) August 23, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.