Journalists: 14 ಪತ್ರಕರ್ತರಿಗೆ ವಿಪಕ್ಷ ಒಕ್ಕೂಟದಿಂದ ಬಹಿಷ್ಕಾರ
Team Udayavani, Sep 14, 2023, 11:23 PM IST
ನವದೆಹಲಿ: ಪ್ರತಿಪಕ್ಷಗಳ ಒಕ್ಕೂಟ ಐಎನ್‌ಡಿಐಎ 14 ಸುದ್ದಿವಾಹಿನಿಗಳು ಮತ್ತು ಅಲ್ಲಿ ಕೆಲಸ ಮಾಡುವ 14 ಮಂದಿ ಪ್ರಮುಖ ಸುದ್ದಿ ವಾಚಕರನ್ನು ಬಹಿಷ್ಕರಿಸಲು ಹಾಗೂ ಅವರು ನಡೆಸಿಕೊಂಡುವ ಚರ್ಚೆಗಳಲ್ಲಿ ಭಾಗವಹಿಸದೇ ಇರಲು ತೀರ್ಮಾನಿಸಿದೆ. ಒಕ್ಕೂಟದ ಮಾಧ್ಯಮ ಸಮಿತಿ ಈ ಬಗ್ಗೆ ತೀರ್ಮಾನ ಕೈಗೊಂಡಿದೆ.
ಬಹಿಷ್ಕಾರಕ್ಕೆ ಒಳಗಾದವರ ಪೈಕಿ ಅರ್ನಾಬ್ ಗೋಸ್ವಾಮಿ (ರಿಪಬ್ಲಿಕ್), ನವಿಕಾ ಕುಮಾರ್ (ಟೈಮ್ಸ್ ನೌ), ಆನಂದ ನರಸಿಂಹನ್ (ನ್ಯೂಸ್18), ಚಿತ್ರಾ ತ್ರಿಪಾಠಿ (ಆಜ್‌ತಕ್) ಸೇರಿದ್ದಾರೆ. ನಿರ್ಧಾರವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್‌ನ ಪವನ್ ಖೇರಾ “ನಾವು ಯಾವುದೇ ಸುದ್ದಿ ವಾಚಕರಿಗೆ ವಿರೋಧವಾಗಿಲ್ಲ. ಅವರು ನಡೆಸಿಕೊಡುವ ಕಾರ್ಯಕ್ರಮಗಳಲ್ಲಿ ನಮ್ಮ ಒಕ್ಕೂಟದ ನಾಯಕರು, ವಕ್ತಾರರು ಭಾಗವಹಿಸುವುದಿಲ್ಲ. ಕೆಲವೊಂದು ಮಾಧ್ಯಮ ಸಂಸ್ಥೆಗಳು ಮತ್ತು ಸುದ್ದಿ ವಾಚಕರು ದ್ವೇಷದ ಅಂಗಡಿಯನ್ನು ಇರಿಸಿಕೊಂಡಿದ್ದಾರೆಂದು ಹೇಳಿದ್ದಾರೆ. ನಿರ್ಧಾರದ ಬಗ್ಗೆ ಆಕ್ಷೇಪವೆತ್ತಿರುವ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಆ್ಯಂಡ್ ಡಿಜಿಟಲ್ ಅಸೋಸಿಯೇಷನ್ “ಇಂಥ ನಿರ್ಣಯ ಅಪಾಯಕಾರಿ ಪ್ರವೃತ್ತಿಗೆ ದಾರಿ ಮಾಡಿಕೊಡಲಿದೆ. ಇದು ಪ್ರಜಾಪ್ರಭುತ್ವದ ಆಶಯಕ್ಕೆ ಕೊಡಲಿಯೇಟು ನೀಡಲಿದೆ’ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.