14 ಸಾವಿರ ಆಸ್ತಿಗಳ ಮೇಲೆ ಐಟಿ ನಿಗಾ
Team Udayavani, Sep 1, 2017, 6:55 AM IST
ಹೊಸದಿಲ್ಲಿ: ದೇಶಾದ್ಯಂತ ತಲಾ 1 ಕೋಟಿ ರೂ.ಗಳ ಸುಮಾರು 14 ಸಾವಿರ ಆಸ್ತಿಗಳ ಮಾಲಕರ ಮೇಲೆ ಐಟಿ ಇಲಾಖೆ ಕಣ್ಣು ನೆಟ್ಟಿದೆ. ಅವರು ರಿಟರ್ನ್ಸ್ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಅವರ ಮೇಲೆ ನಿಗಾ ಇಟ್ಟಿರುವುದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಅಪಮೌಲ್ಯದ ಬಳಿಕ ಶೇ.99 ನೋಟುಗಳು ವಾಪಸ್ ಬಂದಿವೆ ಎಂದು ಆರ್‌ಬಿಐ ಮಾಹಿತಿ ನೀಡಿದ ಬೆನ್ನಲ್ಲೇ, ಮುಖ ಉಳಿಸಿಕೊಳ್ಳುವ ಸಲುವಾಗಿ ಐಟಿ ಇಲಾಖೆ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
“ಆಪರೇಷನ್ ಕ್ಲೀನ್ ಮನಿ’ ಯೋಜನೆಯ ಮೂಲಕ ನೋಟು ಅಮಾನ್ಯದ ಬಳಿಕ ಯಾರ್ಯಾರು ಹೆಚ್ಚು ಮೊತ್ತವನ್ನು ಠೇವಣಿ ಇಟ್ಟಿದ್ದಾರೋ, ಅವರ ಮಾಹಿತಿಯನ್ನು ಕಲೆಹಾಕುವ ಕೆಲಸ ನಡೆಯುತ್ತಿದೆ. 15,496 ಕೋಟಿ ರೂ.ಗಳ ಅಘೋಷಿತ ಆದಾಯ ಪತ್ತೆಯಾಗಿದ್ದು, 13,920 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು 18 ಲಕ್ಷ ಶಂಕಿತ ವಹಿವಾಟುಗಳ ಮೇಲೆ ಕಣ್ಣಿಟ್ಟಿದ್ದೇವೆ ಎಂದು ಇಲಾಖೆ ಹೇಳಿದೆ.
ದತ್ತಾಂಶಗಳ ಆಧಾರದಲ್ಲಿ 9.72 ಲಕ್ಷ ಮಂದಿಯ 13.33 ಲಕ್ಷ ಖಾತೆಗಳಲ್ಲಿ 2.89 ಲಕ್ಷ ಕೋಟಿ ರೂ.ಗಳು ಜಮೆಯಾಗಿದ್ದು, ಈ ಕುರಿತು ಅವರಿಂದ ಪ್ರತಿಕ್ರಿಯೆಯನ್ನು ಕೋರಲಾಗಿದೆ ಎಂದೂ ಮಾಹಿತಿ ನೀಡಿದೆ. ಆದರೆ,ಪತ್ತೆಯಾದ ಅಘೋಷಿತ ಆದಾಯದಿಂದ ಎಷ್ಟು ತೆರಿಗೆ ಸಂಗ್ರಹಿಸಲಾಗಿದೆ ಎಂಬ ಮಾಹಿತಿಯನ್ನು ಇಲಾಖೆ ನೀಡಿಲ್ಲ.
ಇದೇ ವೇಳೆ, ನೋಟು ಬ್ಯಾನ್ ಅನಂತರ ಐಟಿ ಶೋಧ ಕಾರ್ಯಗಳಲ್ಲಿ ಶೇ.158ರಷ್ಟು ಹೆಚ್ಚಳವಾಗಿದ್ದು, ಅಘೋಷಿತ ಆದಾಯಗಳ ಕುರಿತು ಒಪ್ಪಿಕೊಳ್ಳುತ್ತಿರುವವರ ಪ್ರಮಾಣವೂ ಶೇ.38ರಷ್ಟು ಏರಿಕೆಯಾಗಿದೆ ಎಂದಿದೆ ಇಲಾಖೆ.
ಬೇನಾಮಿ ಹಣದ ರಹಸ್ಯ ಬಯಲು: ಸಚಿವ ಜೇಟ್ಲಿ
ನೋಟು ಅಮಾನ್ಯದಿಂದಾಗಿ ಭಾರೀ ಮೊತ್ತದ ಹಣವು ಬ್ಯಾಂಕುಗಳಿಗೆ ಹರಿದುಬಂದಿದ್ದು, ಇದರಿಂದಾಗಿ ಬೇನಾಮಿ ಹಣದ ಮೂಲಗಳ ಬಗೆಗಿನ ರಹಸ್ಯ ಬಯಲಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಬ್ಯಾಂಕು ವ್ಯವಸ್ಥೆಗೆ ಹಣ ಬಂದಿದ್ದರಿಂದ ಅದು ಯಾರ ಹಣ ಎಂಬುದು ಗೊತ್ತಾಗಿದೆ. ಹೀಗಾಗಿ, ಅದರ ಮಾಲಕರಿಂದ ನಾವೀಗ ಹಣದ ಬಗೆಗಿನ ಸಂಪೂರ್ಣ ವಿವರವನ್ನು ಪಡೆಯಬಹುದಾಗಿದೆ ಎಂದಿದ್ದಾರೆ.
ಅಲ್ಲದೆ, ಅಪನಗದೀಕರಣವು 2-3 ತ್ತೈಮಾಸಿಕಗಳಲ್ಲಿ ಆರ್ಥಿಕ ಚಟುವಟಿಕೆಗಳ ಮೇಲೆ ದುಷ್ಪರಿ ಣಾಮ ಬೀರುತ್ತದೆ ಎಂಬುದನ್ನು ನಾವು ಮೊದಲೇ ನಿರೀಕ್ಷಿಸಿದ್ದೆವು. ಆದರೆ, ದೀರ್ಘಕಾಲದಲ್ಲಿ ಇದರ ಅನುಕೂಲ ಅರಿವಾಗಲಿದೆ. ಕಪ್ಪುಹಣವು ಸಂಪೂರ್ಣವಾಗಿ ತೊಲಗಿಲ್ಲ ಎಂಬುದು ನಮಗೆ ಗೊತ್ತು. ಕೆಲವರು ಈಗಲೂ ಅಂಥ ವಹಿವಾಟಿನಲ್ಲಿ ತೊಡಗಿದ್ದಾರೆ. ಆದರೆ, ಅಂತಹ ದೊಡ್ಡ ಮಟ್ಟದ ಮೊತ್ತವು ಈಗಾಗಲೇ ಬ್ಯಾಂಕುಗಳಿಗೆ ಬಂದಿದೆ ಎಂದೂ ಜೇಟ್ಲಿ ಹೇಳಿದ್ದಾರೆ. ಇದೇ ವೇಳೆ, ಹಳೇ ನೋಟುಗಳ ಠೇವಣಿಗೆ ಮತ್ತೂಂದು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ವಿತ್ತ ಸಚಿವಾಲಯ ಸ್ಪಷ್ಟಪಡಿಸಿದೆ.
3 ವರ್ಷಗಳಲ್ಲೇ ಕನಿಷ್ಠ
ಮಟ್ಟಕ್ಕೆ ಇಳಿದ ಜಿಡಿಪಿ
ನೋಟುಗಳ ಅಮಾನ್ಯ ಹಾಗೂ ಜಿಎಸ್‌ಟಿ ಜಾರಿಯಿಂದ ಉತ್ಪಾದನೆ ಕುಸಿತಗೊಂಡಿದ್ದು, ದೇಶದ ಜಿಡಿಪಿ ಪ್ರಮಾಣ
3 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕಿಳಿದಿದೆ. ಎಪ್ರಿಲ್-ಜೂನ್ ತ್ತೈಮಾಸಿಕ ಅವಧಿಯಲ್ಲಿ ದೇಶದ ಜಿಡಿಪಿ ಶೇ.5.7ಕ್ಕಿಳಿದಿದ್ದು,
ಎರಡನೇ ಬಾರಿ ಚೀನದ ಜಿಡಿಪಿಗಿಂತಲೂ ಕೆಳಕ್ಕಿಳಿದಂತಾಗಿದೆ. ಜನವರಿ-ಮಾರ್ಚ್ ಹಾಗೂ ಎಪ್ರಿಲ್-ಜೂನ್ ಅವಧಿಯಲ್ಲಿ ಚೀನದ ಜಿಡಿಪಿ ಶೇ. 6.9 ಆಗಿತ್ತು. ಭಾರತದ ಒಟ್ಟು ದೇಶೀಯ ಉತ್ಪನ್ನ ಜನವರಿ-ಮಾರ್ಚ್ ಅವಧಿಯಲ್ಲಿ ಶೇ.6.1 ಹಾಗೂ ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ.7.9 ಇತ್ತು. 2014ರ ಜನವರಿ- ಮಾರ್ಚ್ ಅವಧಿಯಲ್ಲಿ ಜಿಡಿಪಿ ಅತ್ಯಂತ ಕನಿಷ್ಠ ಅಂದರೆ ಶೇ.4.6ಕ್ಕೆ ತಲುಪಿತ್ತು. ಇದೇ ವೇಳೆ, ಜುಲೈ ತಿಂಗಳಲ್ಲಿ ದೇಶದ ಪ್ರಮುಖ 8 ವಲಯಗಳ ಪ್ರಗತಿಯು ಶೇ. 2.4ಕ್ಕೆ ಕುಸಿದಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ.
ಕಳೆದ 6 ತ್ತೈಮಾಸಿಕಗಳಲ್ಲಿ ದೇಶದ ಜಿಡಿಪಿ ಶೇ.9.2ರಿಂದ ಶೇ.5.7 ಕ್ಕಿಳಿದಿದೆ. ಇದು ಪ್ರಧಾನಿ ಮೋದಿ ಅವರ ಅಪಮೌಲ್ಯದಂಥ ದುಸ್ಸಾಹಸವನ್ನು ದೃಢಪಡಿಸಿದೆ. ದೇಶದ ಆರ್ಥಿಕತೆಗೆ ಅವರು ಅತಿದೊಡ್ಡ ಪೆಟ್ಟು ಕೊಟ್ಟಿದ್ದಾರೆ.
– ಆನಂದ್ ಶರ್ಮಾ, ಕಾಂಗ್ರೆಸ್ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.