ಪ್ರಧಾನಿ ಮೋದಿ ಉಡುಗೊರೆ ಹರಾಜಿನಿಂದ 15.13 ಕೋಟಿ ಸಂಗ್ರಹ
Team Udayavani, Dec 11, 2019, 12:07 AM IST
ಹೊಸದಿಲ್ಲಿ: ಕಳೆದ 5 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಡೆದ ಉಡುಗೊರೆಗಳು, ಸ್ಮರಣಿಕೆಗಳ ಹರಾಜಿನಿಂದ 15.13 ಕೋಟಿ ರೂ. ಸಂಗ್ರಹವಾಗಿದೆ ಎಂದು ಸಂಸ್ಕೃತಿ ಸಚಿವಾಲಯ ಮಂಗಳವಾರ ಸಂಸತ್ತಿಗೆ ತಿಳಿಸಿದೆ.
ರಾಜ್ಯಸಭೆಯಲ್ಲಿ ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್, 5 ವರ್ಷಗಳಲ್ಲಿ ಮೂರು ಬಾರಿ ಹರಾಜು ಹಾಕಲಾಗಿದೆ. 15 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಿದ್ದು, ಆ ಮೊತ್ತವನ್ನು ನಮಾಮಿ ಗಂಗೆ ಯೋಜನೆಗೆ ಬಳಸಲಾಗುವುದು ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.