ಭಾರತೀಯ ನೌಕಾಪಡೆಯ 21 ನಾವಿಕರಿಗೆ ಕೋವಿಡ್-19 ಸೋಂಕು ದೃಢ
Team Udayavani, Apr 18, 2020, 8:45 AM IST
ನವದೆಹಲಿ: ಮುಂಬಯಿಯಲ್ಲಿರುವ ಭಾರತೀಯ ನೌಕಾಪಡೆಯ 15 ರಿಂದ 20 ನಾವಿಕರಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದಿದೆ ಎಂದು ಎನ್ ಡಿಟಿವಿ ತಿಳಿಸಿದೆ.
ಸದ್ಯ ಮುಂಬೈ ನಗರದ ನೌಕಾ ಆಸ್ಪತ್ರೆಯಲ್ಲಿ ಈ ನಾವಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ನೌಕಾಪಡೆಯಲ್ಲಿ ವರದಿಯಾಗುತ್ತಿರುವ ಮೊದಲ ಪ್ರಕರಣಗಳು ಇದಾಗಿದ್ದು, ನಾವಿಕರೊಂದಿಗೆ ಸಂಪರ್ಕಕ್ಕೆ ಬಂದ ಅಷ್ಟು ಜನರನ್ನು ಗುರುತಿಸುವ ಸವಾಲು ಎದುರಾಗಿದೆ.
ಪಾಸಿಟಿವ್ ವರದಿ ಬಂದ ನಾವಿಕರು ಐಎನ್ ಎಸ್ ಆಂಗ್ರೆ ಎಂದು ಕರೆಯಲ್ಪಡುವ ವಸತಿಗಳಲ್ಲಿ ತಂಗಿದ್ದರು. ಸರಕು, ಸಾಗಣೆ ಮತ್ತು ಆಡಳಿತ ವ್ಯವಹಾರಗಳಲ್ಲಿನ ನೌಕ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಪಶ್ಚಿಮ ನೌಕಾಪಡೆ ಕಮಾಂಡ್ ಗೆ ಐಎನ್ ಎಸ್ ಆಂಗ್ರೆ ಸಹಕಾರಿಯಾಗಿದೆ.
ನಗರದಲ್ಲಿ ಲಾಕ್ ಡೌನ್ ಇದ್ದರೂ ಅಗತ್ಯ ಕರ್ತವ್ಯಗಳಿಗಾಗಿ ನೌಕಾಪಡೆ ವಲಯಗಳಲ್ಲಿ ಸಿಬ್ಬಂದಿ ಸಂಚರಿಸುವ ಸಾಧ್ಯೆ ಇದೆ. ಐಎನ್ ಎಸ್ ಆಂಗ್ರೆಯಿಂದ ಕೇವಲ 100 ಮೀ ಅಂತರದಲ್ಲಿದ್ದ ಯುದ್ಧ ನೌಕಗಳೂ ಹಾಗೂ ಜಲಾಂತರ್ಗಾಮಿ ನೌಕೆಗಳೂ ಇವೆ.
ಈ ಮೊದಲು ಭಾರತೀಯ ಸೇನೆಯ 8 ಜನರಲ್ಲಿ ಈ ವೈರಸ್ ಪತ್ತೆಯಾಗಿತ್ತು. ಇದರಲ್ಲಿ ಇಬ್ಬರು ವೈದ್ಯರು, ಆರೋಗ್ಯ ಸಹಾಯಕರು ಸೇರಿದ್ದರು ಎಂದು ಸೇನಾ ಮುಖ್ಯಸ್ಥ ಎಂಎಂ ನರವಾಣೆ ತಿಳಿಸಿದ್ದರು.
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಭಾರೀ ಎರಿಕೆ ಕಂಡುಬಂದಿದ್ದು 3,205 ಜನರು ವೈರಾಣುವಿನಿಂದ ಬಳಲುತ್ತಿದ್ದಾರೆ. ಸಾವಿನ ಪ್ರಮಾಣ ಕೂಡ ದಿನೇ ದಿನೇ ಏರಿಕೆಯಾಗುತ್ತಲೇ ಇದೆ.
ಅಮೆರಿಕಾ ಮತ್ತು ಫ್ರಾನ್ಸ್ ನೌಕಪಡೆಯ ನಾವಿಕರಿಗೂ ಸೋಂಕು ತಗುಲಿರುವ ಮಾಹಿತಿ ಈ ಹಿಂದೆಯಷ್ಟೆ ಹೊರಬಿದ್ದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.