ಕ್ಯಾನ್ಸರ್ ಬಾಲಕಿ ಮೇಲೆ ರೇಪ್; ದಾರಿ ಹೋಕನಿಂದಲೂ ಅತ್ಯಾಚಾರ
Team Udayavani, Dec 11, 2017, 12:18 PM IST
ಲಕ್ನೋ : ಕ್ಯಾನ್ಸರ್ ಪೀಡಿತ ಹದಿನೈದು ವರ್ಷದ ಬಾಲಕಿಯ ಮೇಲೆ ಇಲ್ಲಿನ ಸರೋಜಿನಿ ನಗರ ಪ್ರದೇಶದಲ್ಲಿ ಇಬ್ಬರು ಕಾಮಾಂಧ ತರುಣರು ಗ್ಯಾಂಗ್ ರೇಪ್ ನಡೆಸಿರುವ ಅತ್ಯಮಾನುಷ ಹಾಗೂ ನಿರ್ಲಜ್ಜ ಕೃತ್ಯ ವರದಿಯಾಗಿದೆ. ಗ್ಯಾಂಗ್ ರೇಪ್ ಸಂತ್ರಸ್ತೆ ಸಹಾಯ ಯಾಚಿಸಿದ ದಾರಿಹೋಕ ಕೂಡ ಈ ನತದೃಷ್ಟೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಈ ನಿರ್ಲಜ್ಜ ಘಟನೆ ನಡೆದಿರುವುದನ್ನು ದೃಢೀಕರಿಸಿರುವ ಪೊಲೀಸರು, “ಕಳೆದ ಶುಕ್ರವಾರ ರಾತ್ರಿ ಬಾಲಕಿಯು ತನ್ನ ಬಂಧು ಮಿತ್ರರನ್ನು ಕಾಣಲು ಹೋಗಿದ್ದಾಗ ಆಕೆಯ ಮೇಲೆ ತ್ರಿವಳಿ ರೇಪ್ ನಡೆಯಿತು’ ಎಂದು ತಿಳಿಸಿದ್ದಾರೆ.
ಬಾಲಕಿಯು ದಿನಸಿ ಖರೀದಿಸಿದ ಬಳಿಕ ಆಕೆಯ ಜತೆಗಿದ್ದ, ಆಕೆಗೆ ತಿಳಿದವನೇ ಆದ ಶುಭಂ ಂದಾತ ಆಕೆಯನ್ನು ತನ್ನೊಂದಿಗೆ ಬರುವಂತೆ ಮನವೊಲಿಸಿದ್ದ. ಆದರೆ ಆತ ಆಕೆಯನ್ನು ನಿರ್ಜನ ತಾಣಕ್ಕೆ ಒಯ್ದ. ಅಲ್ಲಿ ಆತ ಮತ್ತು ಆತನ ಸ್ನೇಹಿತ ಸುಮಿತ್ ಎಂಬಾತ ಆಕೆಯ ಮೇಲೆ ಗ್ಯಾಂಗ್ ರೇಪ್ ನಡೆಸಿ ಪರಾರಿಯಾದರು.
ಅತ್ಯಾಚಾರಕ್ಕೆ ಗುರಿಯಾದ ಬಾಲಕಿಯು ಸಹಾಯಕ್ಕಾಗಿ ದಾರಿ ಹೋಕನನ್ನು ಯಾಚಿಸಿದಾಗ ಆತನೂ ಆಕೆಯ ಮೇಲೆ ರೇಪ್ ಎಸಗಿದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೂರು ರೇಪ್‌ಗ್ಳ ಬಳಿಕ ಕ್ಯಾನ್ಸರ್ ಪೀಡಿತ ಬಾಲಕಿ ಅದ್ಹೇಗೋ ಕಷ್ಟಪಟ್ಟು ತನ್ನ ಮನೆ ತಲುಪಿ ತನ್ನ ಮೇಲಾದ ಲೈಂಗಿಕ ದೌರ್ಜನ್ಯವನ್ನು ಹೆತ್ತವರಿಗೆ ವಿವರಿಸಿದಳು. ಬಾಲಕಿಯ ತಂದೆ ಒಡನೆಯೇ ಪೊಲೀಸರಿಗೆ ದೂರು ನೀಡಿದರು.
ಪೊಲೀಸರು ದೂರಿನ ಆಧಾರದಲ್ಲಿ ಸುಮಿತ್ ಮತ್ತು ವೀರೇಂದ್ರ ಎಂಬ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾದರು. ಮುಖ್ಯ ಆರೋಪಿ ಶುಭಂ ತಲೆಮರೆಸಿಕೊಂಡಿದ್ದಾನೆ; ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.