ಗೋರಖ್‌ಪುರ ಆಸ್ಪತ್ರೆಯಲ್ಲಿ ಆ.31ರಂದು 16 ಶಿಶುಗಳ ಸಾವು
Team Udayavani, Sep 1, 2017, 4:34 PM IST
ಗೋರಖ್‌ಪುರ : ಶಿಶುಗಳ ನಿರಂತರ ಸಾವಿಗೆ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಪಡೆದಿರುವ ಇಲ್ಲಿನ ಬಾಬಾ ರಾಘವ ದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಿನ್ನೆ ಗುರುವಾರ ಆಗಸ್ಟ್ 31ರಂದು 16 ಶಿಶುಗಳ ಸಾವು ಸಂಭವಿಸಿರುವುದಾಗಿ ವರದಿಯಗಿದೆ.
ಮೃತಪಟ್ಟಿರುವ ಈ ಹದಿನಾರು ಶಿಶುಗಳ ಪೈಕಿ ಒಂದು ಶಿಶು ಮೆದುಳು ಜ್ವರಕ್ಕೆ ಗುರಿಯಾಗಿ ಸತ್ತಿದೆ. ರಾಜ್ಯ ಸರಕಾರ ನಡೆಸುತ್ತಿರುವ ಈ ಆಸ್ಪತ್ರೆಯಲ್ಲಿ 2017ರ ಆಗಸ್ಟ್ ತಿಂಗಳೊಂದರಲ್ಲೇ 415 ಶಿಶುಗಳ ಮರಣ ಸಂಭವಿಸಿದೆ.
2017ರ ಜನವರಿಯಿಂದ ಆ.31ರತನಕ ಅವಧಿಯಲ್ಲಿ ಈ ಆಸ್ಪತ್ರೆಯಲ್ಲಿ 1,256 ಶಿಶುಗಳ ಸಾವು ಸಂಭವಿಸಿವೆ ಎಂದು ಬಿಆರ್‌ಡಿ ಮೆಡಿಕಲ್ ಕಾಲೇಜ್ ಪ್ರಾಂಶುಪಾಲ ಪಿ ಕೆ ಸಿಂಗ್ ದೃಢೀಕರಿಸಿದ್ದಾರೆ.
ಸಿಂಗ್ ಕೊಟ್ಟಿರುವ ಮಾಹಿತಿಯ ಪ್ರಕಾರ ಈ ವರ್ಷ ಜನವರಿಯಲ್ಲಿ 152, ಫೆಬ್ರವಲಿ 122, ಮಾರ್ಚ್ 159, ಎಪ್ರಿಲ್ 123, ಮೇ 139, ಜೂನ್ 137 ಮತ್ತು ಜುಲೈಯಲ್ಲಿ 128 ಶಿಶುಗಳ ಸಾವು ಸಂಭವಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.