15 ದಿನದ ಚಿಕಿತ್ಸೆಗೆ 16 ಲಕ್ಷ ಬಿಲ್!
Team Udayavani, Nov 22, 2017, 6:45 AM IST
ಹೊಸದಿಲ್ಲಿ: ಡೆಂಗ್ಯೂ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ 7 ವರ್ಷದ ಬಾಲಕಿಗೆ 15 ದಿನಗಳ ಕಾಲ ಚಿಕಿತ್ಸೆ ನೀಡಿದ ಫೋರ್ಟಿಸ್ ಆಸ್ಪತ್ರೆಯು ಆಕೆಯ ಹೆತ್ತವರಿಂದ ವಸೂಲಿ ಮಾಡಿದ್ದು ಬರೋಬ್ಬರಿ 16 ಲಕ್ಷ ರೂ. ಬಿಲ್! ಇಷ್ಟು ಮೊತ್ತವನ್ನು ಪಾವತಿಸಿದರೂ ಮಗು ಆದ್ಯಾ(7) ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಮಾತ್ರ ಹೆಣವಾಗಿ! ಗುರುಗ್ರಾಮದಲ್ಲಿ ನಡೆದಿರುವ ಈ ಘಟನೆಯು ಆಕ್ರೋಶಕ್ಕೆ ಕಾರಣವಾಗಿದ್ದು, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಆಸ್ಪತ್ರೆಯಿಂದ ವರದಿ ಕೇಳಿದ್ದಾರೆ. ಇನ್ನೊಂದೆಡೆ, ಹರಿಯಾಣ ಸರಕಾರವು ಘಟನೆ ಕುರಿತು ತನಿಖೆಗೆ ಆದೇಶಿಸಿದೆ.
ಡೆಂಗ್ಯೂದಿಂದಾಗಿ ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಗೆ ಫೋರ್ಟಿಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 2 ವಾರಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಬಾಲಕಿ ಮೃತಪಟ್ಟಿದ್ದು, ಆಸ್ಪತ್ರೆಯು 16 ಲಕ್ಷ ರೂ. ಬಿಲ್ ಮಾಡಿದೆ. 19 ಪುಟಗಳ ಬಿಲ್‌ನಲ್ಲಿ 661 ಸಿರಿಂಜ್‌ಗಳು ಮತ್ತು 2,700 ಗ್ಲೌಸ್‌ಗಳೂ ಸೇರಿವೆ. ಈ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಬಾಲಕಿಯ ತಂದೆ ಜಯಂತ್ ಸಿಂಗ್, “ಆಸ್ಪತ್ರೆಯವರು ಬೇಕಂತಲೇ ಹೆಚ್ಚಿನ ಮೊತ್ತ ಕಿತ್ತುಕೊಂಡಿದ್ದಾರೆ. ಮಗುವನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದಾಗ ಮಗು ಸತ್ತಿದೆ ಎಂದು ಘೋಷಿಸಿದರು. ಸಾವಿಗೀಡಾದ ಬಳಿಕವೂ ಹಣ ಮಾಡಲೆಂದು ಸುಳ್ಳು ಹೇಳಿ ಇರಿಸಿ ಕೊಂಡಿದ್ದರು ಎಂದು ನನ್ನ ಅನುಮಾನ’ ಎಂದಿದ್ದಾರೆ.
ಆದರೆ, ಈ ಆರೋಪ ತಳ್ಳಿಹಾಕಿರುವ ಫೋರ್ಟಿಸ್ ಆಸ್ಪತ್ರೆ, “ಮಗುವನ್ನು ಕರೆ ತಂದಾಗಲೇ ಸ್ಥಿತಿ ಗಂಭೀರವಾಗಿತ್ತು. ರಕ್ಷಿಸಲು ನಾವು ಎಲ್ಲ ಪ್ರಯತ್ನ ಮಾಡಿದೆವು’ ಎಂದಿದೆ. ಭಾರತೀಯ ವೈದ್ಯಕೀಯ ಮಂಡಳಿ ಕೂಡ ಆಸ್ಪತ್ರೆಯನ್ನು ಸಮರ್ಥಿಸಿಕೊಂಡಿದ್ದು, ರೋಗಿಯನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸುವುದು ವೈದ್ಯರ ಕರ್ತವ್ಯವಾಗಿದೆ. ಅದನ್ನು ಆಸ್ಪತ್ರೆ ಮಾಡಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.