ಪಾಕ್‌, ಪಿಓಕೆಯಲ್ಲಿ ಈಗಲೂ 16 ಉಗ್ರ ಶಿಬಿರ ಸಕ್ರಿಯ: ಗುಪ್ತಚರ ದಳ


Team Udayavani, Mar 5, 2019, 10:02 AM IST

pak-terror-camps-700.jpg

ಹೊಸದಿಲ್ಲಿ : ಪಾಕಿಸ್ಥಾನದಲ್ಲೀಗ ಒಟ್ಟು 16 ಸಕ್ರಿಯ ಉಗ್ರ ತರಬೇತಿ ಶಿಬಿರಗಳು ಇವೆ. ಇವುಗಳಲ್ಲಿ 11 ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಮತ್ತು ಪಿಓಕೆಯ ಒಳನಾಡಿನಲ್ಲಿ ಇವೆ ಎಂದು ಗುಪ್ತಚರ ದಳ ವರದಿ ಎಚ್ಚರಿಸಿದೆ.

ಹನ್ನೊಂದು ಶಿಬಿರಗಳ ಪೈಕಿ ಐದು ಉಗ್ರ ತರಬೇತಿ ಶಿಬಿರಗಳು ಪಿಓಕೆಯ ಮುಜಫ‌ರಾಬಾದ್‌, ಕೋಟ್‌ಲಿ ಮತ್ತು ಬರ್ನಾಲಾ ಪ್ರದೇಶಗಳಲ್ಲಿವೆ. ಪಾಕಿಸ್ಥಾನದ ಇತರೆಡೆಗಳಲ್ಲಿ ಸಕ್ರಿಯವಾಗಿರುವ ಐದು ಉಗ್ರ ಶಿಬಿರಗಳ ಪೈಕಿ ಎರಡು ಪಾಕ್‌ ಪಂಜಾಬ್‌ ಮತ್ತು ಮನ್‌ಶೇರಾದಲ್ಲಿ ಇವೆ ಎಂದು ಗುಪ್ತಚರ ದಳ ಹೇಳಿದೆ. 

ಪಿಓಕೆಯ ಬೋಯಿ, ಲಕಾ ಎ ಗಾಯಿರ್‌, ಶೇರ್ಪಾಯಿ, ದಿಯೋಲಿನ್‌, ಖಾಲಿದ ಬಿನ್‌ ವಾಲಿದ್‌, ಗರೀ ಮತ್ತು ದೋಪಟ್ಟಾ ಗಳಲ್ಲಿ ಉಗ್ರ ತರಬೇತಿ ಶಿಬಿರಗಳಿವೆ. 

ಈ ತರಬೇತಿ ಶಿಬಿರಗಳಲ್ಲಿ ಕಮಾಂಡೋ ಮಾದರಿಯ ಕಾರ್ಯಾಚರಣೆ, ಒಳನುಸುಳುವಿಕೆ, ಐಇಡಿ ಬಾಂಬ್‌ ಬ್ಲಾಸ್ಟ್‌, ಸ್ನೆ„ಪರ್‌ ಅಟ್ಯಾಕ್‌, ಜಲಾಂತರ್ಗತ ಉಗ್ರ ಕಾರ್ಯಾಚರಣೆಗಳು ಮತ್ತು ಡ್ರೋನ್‌ ಗಳ ನಿರ್ವಹಣೆಯೇ ಮೊದಲಾದವುಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. 

ಗುಪ್ತಚರ ವರದಿಗಳ ಪ್ರಕಾರ ಭಾರತದ ವಿರುದ್ಧ  ಭಯೋತ್ಪಾದಕ ಕೃತ್ಯಗಳನ್ನು ನಡೆಸಲು 2018ರಲ್ಲಿ ಕನಿಷ್ಠ 560 ಉಗ್ರರನ್ನು ಈ ಶಿಬಿರಗಳಲ್ಲಿ ತಯಾರಿಸಲಾಗಿದೆ. 

ಮೂಲಗಳ ಪ್ರಕಾರ ಭಾರತವು ಪಾಕಿಸ್ಥಾನದ ಉಗ್ರರ ಈ ಅಡಗುದಾಣಗಳು ಮತ್ತು ಶಿಬಿರಗಳ ಸೆಟಲೈಟ್‌ ಇಮೇಜ್‌ ಗಳನ್ನು ಇತರ ದೇಶಗಳೊಂದಿಗೆ ಹಂಚಿಕೊಂಡು ಆ ಮೂಲಕ ಪಾಕಿಸ್ಥಾನವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮುಜುಗರಕ್ಕೆ ಗುರಿಪಡಿಸಲು ಯತ್ನಿಸಲಿದೆ ಎಂದು ತಿಳಿದು ಬಂದಿದೆ. 

ಭಾರತದ ವಿರುದ್ಧ ಸಮುದ್ರ ಮೂಲಕ ಭಯೋತ್ಪಾದಕ ದಾಳಿ ನಡೆಸಲು ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಭಾರತೀಯ ನೌಕಾ ಪಡೆ ಮುಖ್ಯಸ್ಥ ಸುನಿಲ್‌ ಲಾಂಬಾ ಇಂದು ಬೆಳಗ್ಗೆಯಷ್ಟೇ ಎಚ್ಚರಿಸಿದ್ದರು. 

ರಾಷ್ಟ್ರ ರಾಜಧಾನಿಯಲ್ಲಿ ಏರ್ಪಡಿಸಲಾಗಿದ್ದ  ಇಂಡೋ ಪೆಸಿಫಿಕ್‌ ರೀಜಿನಲ್‌ ಡಯಾಲೋಗ್‌ ಸಮಾವೇಶದಲ್ಲಿ ಮಾತನಾಡುತ್ತಿದ್ದ ನೌಕಾ ಪಡೆ ಮುಖ್ಯಸ್ಥ ಲಾಂಬಾ ಅವರು ಪಾಕ್‌ ಮೂಲದ ಉಗ್ರರು ಹಿಂದೆ 2008ರಲ್ಲಿ ಮುಂಬಯಿ ಮೇಲೆ ನಡೆಸಿದ್ದ 26/11ರ ಉಗ್ರ ದಾಳಿಯ ರೀತಿ ಸಮುದ್ರ ಮೂಲಕ “ಸಮುಂದರೀ ಜಿಹಾದ್‌’ ರೂಪದಲ್ಲಿ ಉಗ್ರ ದಾಳಿ ನಡೆಸುವುದಕ್ಕೆ ಭಯೋತ್ಪಾದಕರಿಗೆ ತರಬೇತಿ ನೀಡಲಾಗುತ್ತಿದೆ ಮತ್ತು ಇದು ಅತ್ಯಂತ ಅಪಾಯಕಾರಿಯೂ ಸವಾಲಿನದ್ದೂ ಆಗಿದೆ ಎಂದು ಹೇಳಿದ್ದರು. 

ಟಾಪ್ ನ್ಯೂಸ್

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

baby

Sullia: ಒಂಟಿಯಾಗಿ ಪತ್ತೆಯಾದ ಮಗು ಪೋಷಕರ ಮಡಿಲಿಗೆ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

suicide (2)

Manipal: ಬಾವಿಗೆ ಬಿದ್ದು ಕಾರ್ಮಿಕ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.