9 ವರ್ಷದ ಬಾಲಕನನ್ನು ಕೊಂದು ರಕ್ತ ಕುಡಿದು, ಮಾಂಸ ತಿಂದ ವಿದ್ಯಾರ್ಥಿ!
Team Udayavani, Jan 21, 2017, 1:43 PM IST
ಲೂಧಿಯಾನ:ಈ ಹುಡುಗ 8ನೇ ತರಗತಿ ವಿದ್ಯಾರ್ಥಿ, ವಯಸ್ಸು 16. ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅರೇ ಇದೇನ್ ದೊಡ್ಡ ವಿಷಯ ಅಂತ ಹೇಳ್ತೀರಾ? ವಿಷಯ ಅದಲ್ಲ, ಈ ಪಂಜಾಬ್ ನ ಲೂಧಿಯಾನದಲ್ಲಿನ ಕರ್ನೈಲ್ ಸಿಂಗ್ ನಗರದ ದುಗ್ರಿ ಪ್ರದೇಶದಲ್ಲಿ ಈ ರಕ್ತಪಿಪಾಸು ಹುಡುಗ 9 ವರ್ಷದ ದೀಪು ಎಂಬಾತನನ್ನು ಕೊಂದು ಆರು ತುಂಡನ್ನಾಗಿ ಕತ್ತರಿಸಿದ್ದ. ಅಷ್ಟೇ ರಕ್ತವನ್ನು ಗಟ,ಗಟ ಕುಡಿದು, ಮಾಂಸವನ್ನೇ ತಿಂದುಬಿಟ್ಟಿದ್ದ!
ದೀಪು ಕುಮಾರ್(9) ಎಂಬ ಹುಡುಗ ಸೋಮವಾರ ಕಣ್ಮರೆಯಾಗಿದ್ದ. ಮರುದಿನ ದುಗ್ರಿ ಪ್ರದೇಶದ ನಿರ್ಜನ ಸ್ಥಳದಲ್ಲಿ ತಲೆಕತ್ತರಿಸಿದ ದೇಹದ ಭಾಗ ಸಿಕ್ಕಿತ್ತು. ಇಬ್ಬರು ಒಂದೇ ಪ್ರದೇಶದಲ್ಲಿ ವಾಸವಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹುಡುಗನನ್ನು ಕೊಂದ ಬಳಿಕ 8ನೇ ತರಗತಿಯ ಪಾತಕಿ ಹುಡುಗ ಮನೆಗೆ ಬಂದಿದ್ದ. ಆದರೆ ಆತನ ವರ್ತನೆ ಮಾತ್ರ ಎಂದಿನಂತೆ ಸಹಜವಾಗಿರಲಿಲ್ಲವಾಗಿತ್ತು. ತನ್ನ ತಂದೆಗಾಗಿ ಊಟವನ್ನು ಬೇಯಿಸಿದ್ದ. ಹುಡುಗನ ತಾಯಿ ಚಂಡೀಗಢದಲ್ಲಿರುವ ಸಹೋದರನ ಜೊತೆ ವಾಸವಾಗಿದ್ದರಂತೆ.
ಪ್ರಕರಣ ಹೇಗೆ ಪತ್ತೆಹಚ್ಚಿದರು ಗೊತ್ತಾ?
ಈ ಪ್ರಕರಣ ಬೇಧಿಸಲು ಪೊಲೀಸರು ಮುಂದಾದದ ನಂತರ, ಸುತ್ತಮುತ್ತ ಪ್ರದೇಶದ ಸಿಸಿಟಿವಿ ಪರಿಶೀಲನೆ ನಡೆಸಿದಾಗ ನರರಾಕ್ಷಸ ಹುಡುಗನ ಭಯಾನಕ ಕೃತ್ಯ ಬಯಲಿಗೆ ಬಂದಿತ್ತು ಎಂದು ವರದಿ ತಿಳಿಸಿದೆ. ಸಿಸಿಟಿವಿ ಫೂಟೇಜ್ ನಲ್ಲಿ ದೀಪು ಜೊತೆ ಈ ಹುಡುಗ ಇದ್ದಿರುವುದನ್ನು ಪತ್ತೆ ಹಚ್ಚಿದ್ದರು. ತದನಂತರ ಪೊಲೀಸರು ಹುಡುಗನನ್ನು ಶುಕ್ರವಾರ ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆ ವೇಳೆ ಹುಡುಗನನ್ನು ಕೊಂದು, ಮಾಂಸ ತಿಂದು, ರಕ್ತ ಕುಡಿದಿರುವುದಾಗಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ: ನರಿಂಗಾನ ಕಂಬಳ್ಳೋತ್ಸವದಲ್ಲಿ ಸಿಎಂ
ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ
ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ
ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್ ಸಿಂಗ್
Suvarna Bharathi Mahotsava: ಶೃಂಗೇರಿಯಲ್ಲಿ ದಾಖಲೆ ಬರೆದ ತ್ರಿವೇಣಿ ಸ್ತೋತ್ರ ಪಠಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.