ಅಹ್ಮದಾಬಾದ್‌ನಲ್ಲಿ ಕರ್ಫ್ಯೂ: ಅತಿಥಿಗಳು ಆಗಮಿಸಿದ್ದ 1,700 ವಿವಾಹ ಸಮಾರಂಭ ರದ್ದು!


Team Udayavani, Nov 20, 2020, 8:45 PM IST

Marriage

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಣಿಪಾಲ: ಮದುವೆ ಎಂದರೆ ವರ್ಷಗಳ ಸಿದ್ಧತೆ. ನಿಶ್ಚಿತಾರ್ಥ ಕಾರ್ಯಕ್ರಮದ ಬಳಿಕ ಏರ್ಪಡುವ ತಯಾರಿಯ ಜತೆಗೆ ಸಂಭ್ರಮ ಮನೆಮಾಡುತ್ತದೆ. ಬಟ್ಟೆ ಶಾಪಿಂಗ್‌, ಒಡವೆ ಕೊಂಡುಕೊಳ್ಳುವುದು ಮೊದಲಾದ ಕಾರ್ಯಗಳೊಂದಿಗೆ ಭರಪೂರ ಸಿದ್ಧತೆಗಳು ನಡೆಯುತ್ತವೆ. ಮದುವೆಯ ವಾರದ ಮೊದಲು ಅತಿಥಿಗಳು ಆಗಮಿಸುತ್ತಾರೆ. ಸಂಭ್ರಮ ಸಡಗರದ ವಾತಾವರಣ ನೆಲೆಸುತ್ತದೆ.

ಇಂತಹದ್ದೇ ಸಂಭ್ರಮದಲ್ಲಿದ್ದ ಅಹ್ಮದಾಬಾದ್‌ನ 1700 ಕುಟುಂಬಗಳಿಗೆ ನಿರಾಶೆಯಾಗಿದೆ. ಶನಿವಾರ ಮತ್ತು ರವಿವಾರ ಅತೀ ಹೆಚ್ಚು ವಿವಾಹ ಸಮಾರಂಭಗಳನ್ನು ಆಯೋಜಿಸಲಾಗಿತ್ತು. ಆದರೆ ಕೋವಿಡ್‌ ಹೆಚ್ಚುತ್ತಿರುವುದನ್ನು ಮನಗಂಡು ಯಾವುದೇ ಮುನ್ಸೂಚನೆಯಿಲ್ಲದೆ ವಿಧಿಸಲಾದ ಕರ್ಫ್ಯೂ ವಿವಾಹಿತ ಕುಟುಂಬಗಳನ್ನು ಗೊಂದಲಕ್ಕೀಡು ಮಾಡಿದೆ

ಗುಜರಾತ್‌ನ ಅಹ್ಮದಾಬಾದ್‌‌ನಲ್ಲಿ ಹೆಚ್ಚುತ್ತಿರುವ ಕೋವಿಡ್‌ ಕಾರಣಕ್ಕೆ ಬೆಳಗ್ಗೆ 9ರಿಂದ ಬೆಳಗ್ಗೆ 6ರ ವರೆಗೆ ಕರ್ಫ್ಯೂ ವಿಧಿಸಲಾಗಿದೆ. ಶನಿವಾರ ಮತ್ತು ರವಿವಾರ ನಡೆಯಬೇಕಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಉದ್ಯಾನಗಳು, ಪಾರ್ಟಿ ಪ್ಲಾಟ್‌ಗಳನ್ನು ಬುಕ್ ಮಾಡಲಾಗಿದೆ, ವೆಡ್ಡಿಂಗ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಮತ್ತು ಅತಿಥಿಗಳು ಸಹ ಆಗಮಿಸಿದ್ದಾರೆ.

ಸುಮಾರು 8 ತಿಂಗಳ ಬಳಿಕ ಶನಿವಾರದಿಂದ ವಿವಾಹಗಳು ಪ್ರಾರಂಭವಾಗುತ್ತಿವೆ. ಈಗ ಈ ಎರಡು ದಿನಗಳು (ಶನಿವಾರ-ರವಿವಾರ) ಕರ್ಫ್ಯೂ ವಿಧಿಸಲಾಗಿದೆ. ಇದರಿಂದ ವಿವಾಹ ಕಾರ್ಯಕ್ರಮ ಏರ್ಪಡಿಸುವ ಉದ್ಯಮಿಗಳಿಗೆ ದೊಡ್ಡ ನಷ್ಟವಾಗಲಿದೆ.

ಎರಡು ದಿನಗಳಲ್ಲಿ 1700 ಮದುವೆಗಳು ನಡೆಯಲಿರುವುದರಿಂದ ಉದ್ಯಾನಗಳು, ಪಾರ್ಟಿ ಪ್ಲಾಟ್‌ಗಳು, ಡಿಜೆಗಳು ಮತ್ತು ಅನೇಕ ಸಣ್ಣ ಉದ್ಯಮಗಳಿಗೆ ನಿಷೇಧಾಜ್ಞೆ ಭಾರಿ ನಷ್ಟವನ್ನುಂಟು ಮಾಡಲಿದೆ. ವ್ಯವಹಾರ ಕ್ಷೇತ್ರ ಸಂಪೂರ್ಣವಾಗಿ ಕುಸಿದಿದೆ. ಅನ್ಲಾಕ್ ಮಾಡಿದ ಬಳಿಕ ಚೇತರಿಕೆಯಾಗುವ ಭರವಸೆ ಇತ್ತು. ಈಗ ಅದೂ ವಿಫಲವಾಗಿದೆ.

ಉತ್ತರ ಭಾರತದಲ್ಲಿ ಈ ಸಮಯದಲ್ಲಿ ಹೆಚ್ಚು ವಿವಾಹ ಕಾರ್ಯಗಳು ನಡೆಯುತ್ತವೆ. ಜೂನ್ 15, 25 ಮತ್ತು 29 ರಂದು ನೂರಾರು ವಿವಾಹಗಳು ನಿಶ್ಚಯವಾಗಿದ್ದವು. ಆದರೆ ವಿವಾಹ ಕಾರ್ಯಗಳಉ ಕೋವಿಡ್‌ಗೆ ಬಲಿಯಾಗಿವೆ. ಈಗ ಅದೇ ಪರಿಸ್ಥಿತಿ ಮರುಕಳಿಸಲಿವೆ. ನವೆಂಬರ್ 20-21, 26, 30ರಲ್ಲಿ ಹಲವು ಮುಹೂರ್ತಗಳಿವೆ. ಅದರಲ್ಲಿ ಈ ಎರಡು ದಿನಗಳು ಕರ್ಫ್ಯೂನಲ್ಲಿ ಕಳೆದೋಗುತ್ತವೆ. ಈ ದಿನಗಳು ಕಳೆದರೆ ಡಿಸೆಂಬರ್ 1,2,6,7, 8,9,11 ತಾರೀಖಿನಲ್ಲಿ ಮುಹೂರ್ತಗಳಿವೆ. ಲಾಕ್‌ಡೌನ್ ಪ್ರಕ್ರಿಯೆಯು ಈ ರೀತಿ ಮುಂದುವರಿದರೆ, ವಿವಾಹ ಉದ್ಯಮಗಳು ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.