Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Team Udayavani, Dec 22, 2024, 6:59 AM IST
ಜೈಸಲ್ಮೇರ್: ವಿದ್ಯುತ್ ಚಾಲಿತ ಕಾರು ಗಳ ಸಹಿತ ಎಲ್ಲ ಹಳೆಯ ಕಾರುಗಳ ಮಾರಾ ಟದ ಮೇಲೆ ವಿಧಿಸಲಾ ಗುವ ಜಿಎಸ್‌ಟಿ ಯನ್ನು ಈಗಿರುವ ಶೇ. 12ರಿಂದ ಶೇ. 18ಕ್ಕೆ ಹೆಚ್ಚಿಸಲಾಗಿದೆ. ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಶನಿವಾರ ಆರಂಭ ವಾದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ತಿಳಿಸಿದ್ದಾರೆ.
ಇದೇ ವೇಳೆ ಮಂಡಕ್ಕಿ ಮೇಲಿನ ಜಿಎಸ್‌ಟಿಯನ್ನು ಶೇ. 18ರಿಂದ ಶೇ. 5ಕ್ಕೆ ಇಳಿಸಲಾ ಗಿದೆ. ಆರೋಗ್ಯ ಮತ್ತು ಸಾಮಾ ನ್ಯ ವಿಮೆ ಮೇಲಿನ ಜಿಎ ಸ್‌ಟಿ, ಆಹಾರ ಪೂರೈಕೆ ಮಾಡುವ ಸ್ವಿಗ್ಗಿ, ಜೊಮ್ಯಾಟೋ ಮೇಲೆ ವಿಧಿಸಲಾಗಿರುವ ಶೇ. 18 ಜಿಎಸ್‌ಟಿ ಇಳಿಕೆ ಮಾಡುವ ತೀರ್ಮಾನವನ್ನು ಮುಂದೂಡಲಾಗಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.
ಸೆಕೆಂಡ್ ಹ್ಯಾಂಡ್ ಕಾರು ದುಬಾರಿ
ಹಳೆಯ ಕಾರು ಖರೀದಿ, ಮಾರಾಟದ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆ ಪ್ರಮಾಣವನ್ನು ಶೇ. 12ರಿಂದ ಶೇ. 18ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್ ಚಾಲಿತ ಕಾರುಗಳಿಗೆ ಸಮಾನ ತೆರಿಗೆ ವಿಧಿಸಲು ಸಮ್ಮತಿ ನೀಡಲಾಗಿದೆ. ಈಗ ಎಂಜಿನ್ ಸಾಮರ್ಥ್ಯ 1,200 ಸಿಸಿ ಮತ್ತು ಅದಕ್ಕಿಂತ ಹೆಚ್ಚಿರುವ, 4,000 ಮಿ.ಮೀ. ಉದ್ದವಿರುವ ವಿದ್ಯುತ್ ಕಾರುಗಳಿಗೆ ಶೇ. 12, ಹಳೆಯ ಪೆಟ್ರೋಲ್ ಕಾರುಗಳಿಗೆ ಶೇ. 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಹೊಸ ನಿರ್ಧಾರದ ಅನ್ವಯ ಈಗ ಎಲ್ಲ ರೀತಿಯ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಸಮಾನವಾಗಿ ಶೇ. 18 ತೆರಿಗೆ ವಿಧಿಸಲಾಗುತ್ತದೆ.
ವ್ಯಕ್ತಿಗಳ ನಡುವೆ ಮಾರಾಟಕ್ಕಿಲ್ಲ
ಇಬ್ಬರು ವ್ಯಕ್ತಿಗಳ ನಡುವೆ ಹಳೆಯ ವಿದ್ಯುತ್ ಕಾರು ಮಾರಾಟ ಮಾಡುವ ವೇಳೆ ಜಿಎಸ್‌ಟಿ ಪಾವತಿ ಮಾಡುವ ಅಗತ್ಯ ಇಲ್ಲ. ಆದರೆ ಯಾವು ದಾ ದರೂ ಕಂಪೆನಿಯು ವಿದ್ಯುತ್, ಪೆಟ್ರೋಲ್ ಅಥವಾ ಡೀಸೆಲ್ ವಾಹನ ಮಾರಾಟ ಮಾಡುವುದಿ ದ್ದರೆ ಶೇ. 18 ಜಿಎಸ್‌ಟಿ ಪಾವತಿ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ. ವ್ಯಕ್ತಿಗಳಿಬ್ಬರ ನಡುವೆ ಇವಿ ಕಾರು ಮಾರಾಟ ನಡೆ ದರೆ ಜಿಎಸ್‌ಟಿ ಅನ್ವಯ ಆಗುವುದಿಲ್ಲ. ಹೊಸತಾಗಿ ವಿದ್ಯುತ್ ಕಾರು ಖರೀದಿ ಮಾಡುವ ಸಂದರ್ಭದಲ್ಲಿ ಶೇ. 5 ಜಿಎಸ್‌ಟಿ ಪಾವತಿಸಬೇಕಾಗುತ್ತದೆ ಎಂದು ನಿರ್ಮಲಾ ವಿವರಿಸಿದರು.
ಪಾಪ್‌ಕಾರ್ನ್ ಗೆ ತೆರಿಗೆ
ರೆಡಿ ಟು ಈಟ್ ಪಾಪ್‌ಕಾರ್ನ್ಗೆ ಶೇ. 5, ಪ್ಯಾಕ್ ಮಾಡಿರುವ ಮತ್ತು ಉಪ್ಪು ಮತ್ತಿತರ ಮಸಾಲೆ ವಸ್ತು ಮಿಶ್ರಿತ ಪಾಪ್‌ಕಾರ್ನ್ ಗೆ ಶೇ. 12 ತೆರಿಗೆ ವಿಧಿಸಲಾಗುತ್ತದೆ. ಸಕ್ಕರೆ ಮಿಶ್ರಿತ ಪಾಪ್‌ಕಾರ್ನ್ ಗೆ ಶೇ. 18 ತೆರಿಗೆ ವಿಧಿಸಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ತಿಳಿಸಿದ್ದಾರೆ.
ತೀರ್ಮಾನ ಮುಂದಕ್ಕೆ
ಆರೋಗ್ಯ ಮತ್ತು ಸಾಮಾನ್ಯ ವಿಮೆಗಳ ಮೇಲೆ ವಿಧಿಸಲಾಗುತ್ತಿದ್ದ ಶೇ. 18 ಜಿಎಸ್‌ಟಿ ಪ್ರಮಾಣವನ್ನು ರದ್ದು ಮಾಡುವ ಬಗೆಗಿನ ತೀರ್ಮಾನವನ್ನು ಮುಂದೂಡಲಾಗಿದೆ. ತೆರಿಗೆ ಇಳಿಕೆಯಿಂದ ಉಂಟಾಗುವ ಪರಿಣಾಮದ ಬಗ್ಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಇನ್ನೂ ವರದಿ ಸಲ್ಲಿಸಿಲ್ಲ. ಪ್ರಾಧಿಕಾರ ವರದಿ ನೀಡಿದ ಬಳಿಕ ಸಚಿವರ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದರು.
ಪ್ರಾಕೃತಿಕ ವಿಕೋಪಗಳಿಂದ ನೊಂದ ರಾಜ್ಯಗಳಿಗೆ ಸೆಸ್ ವಿಧಿಸಲು ಅವಕಾಶ?
ಪ್ರವಾಹ ಸಹಿತ ಪ್ರಾಕೃತಿಕ ವಿಕೋಪಗಳಿಂದ ಸಂಕಷ್ಟಕ್ಕೆ ಗುರಿಯಾದ ರಾಜ್ಯಗಳು ಜಿಎಸ್‌ಟಿ ಅನ್ವಯ ಸೆಸ್ ವಿಧಿಸಲು ಅವಕಾಶ ಕಲ್ಪಿಸಲು ಸಭೆ ಚಿಂತನೆ ನಡೆಸಿದೆ. ಈ ಮೂಲಕ ಉಂಟಾಗುವ ನಷ್ಟಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸ ವ್ಯವಸ್ಥೆ ಕಲ್ಪಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸಚಿವರ ಸಮಿತಿ ತೀರ್ಮಾನಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಉದ್ದೇಶಿತ ಸಮಿತಿಯಲ್ಲಿ ಭಾಗಿಯಾಗಲು ಉತ್ತರಪ್ರದೇಶ, ಪಶ್ಚಿಮ ಬಂಗಾಲ, ತೆಲಂಗಾಣದ ಸಚಿವರು ಮುಂದೆ ಬಂದಿದ್ದಾರೆ. ಈ ಸಮಿತಿಯ ಸದಸ್ಯರು ಶೀಘ್ರದಲ್ಲೇ ಸಭೆ ಸೇರಿ ಹೊಸ ಸೆಸ್‌ಗೆ ಇರಿಸಬೇಕಾದ ಹೆಸರು, ಪ್ರತಿ ಪ್ರಾಕೃತಿಕ ವಿಪತ್ತಿಗೂ ಸೆಸ್ ವಿಧಿಸಬೇಕೇ ಮತ್ತಿತರ ಎಲ್ಲ ಅಂಶಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ನಿರ್ಮಲಾ ತಿಳಿಸಿದ್ದಾರೆ.
ಪ್ರಮುಖ ನಿರ್ಧಾರಗಳು
ವಿದ್ಯುತ್ ಕಾರು ಸಹಿತ ಎಲ್ಲ ಹಳೆಯ ಕಾರುಗಳ ಮಾರಾಟಕ್ಕೆ ಶೇ. 18 ತೆರಿಗೆ
ಕಂಪೆನಿಗಳು ಮಾರುವ ಹಳೆಯ ವಿದ್ಯುತ್, ಪೆಟ್ರೋಲ್, ಡೀಸೆಲ್ ಕಾರುಗಳಿಗೆ ಅನ್ವಯ
ಹಳೆಯ ಇವಿ ಕಾರುಗಳ ಮಾರಾಟ ಇಬ್ಬರು ವ್ಯಕ್ತಿಗಳ ನಡುವೆ ನಡೆದರೆ ಜಿಎಸ್ಟಿ ಇಲ್ಲ
ಮಂಡಕ್ಕಿ ಮೇಲೆ ಇದ್ದ ತೆರಿಗೆ ಪ್ರಮಾಣ ಶೇ. 18ರಿಂದ ಶೇ. 5ಕ್ಕೆ ಇಳಿಕೆ
ರೆಡಿ ಟು ಈಟ್ ಪಾಪ್‌ಕಾರ್ನ್ ಗೆ ಶೇ. 5, ಪ್ಯಾಕ್ ಮಾಡಿದ್ದಕ್ಕೆ ಶೇ. 12, ಸಿಹಿಮಿಶ್ರಿತ ಪಾಪ್‌ಕಾರ್ನ್ ಗೆ ಶೇ. 18 ತೆರಿಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.