ದಿವ್ಯಾಂಗ ಯೋಧರಿಗೆ 18 ಸಾವಿರ ಮಾಸಿಕ ಪಿಂಚಣಿ
Team Udayavani, Jan 27, 2019, 2:56 AM IST
ಹೊಸದಿಲ್ಲಿ: ಸೇನೆಯಲ್ಲಿದ್ದು ಅಂಗವಿಕಲರಾದ ಯೋಧರಿಗೆ ಮಾಸಿಕ 18 ಸಾವಿರ ರೂ. ಪಿಂಚಣಿ ನಿಗದಿಗೊಳಿಸಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆದೇಶ ಹೊರಡಿಸಿ ದ್ದಾರೆ. ದಿವ್ಯಾಂಗ/ಯುದ್ಧದಲ್ಲಿ ಗಾಯಗೊಂಡ ಯೋಧರು, ವಿಶೇಷ ಕೌಟುಂಬಿಕ ಪಿಂಚಣಿ, ಇತರ ವಿಶೇಷ ಪಿಂಚಣಿದಾರರಿಗೆ ಮಾಸಿಕ ಪಿಂಚಣಿ ಮೊತ್ತವನ್ನು 18 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಈ ಆದೇಶ 2016 ಜ.1 ರಿಂದ ಪೂರ್ವಾ ನ್ವಯವಾಗಲಿದೆ. ಈ ಹಿಂದೆ ಸ್ಲ್ಯಾಬ್ ಆಧಾರದಲ್ಲಿ ಪಿಂಚಣಿ ನಿಗದಿಸಿದ್ದರಿಂದ ವಿಪಕ್ಷಗಳು ಹಾಗೂ ಸೇನಾ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾ ಲಯವು ವಿಷಯವನ್ನು ವಿಶೇಷ ಸಮಿತಿಯ ಪರಿಶೀಲನೆಗೆ ನೀಡಿತ್ತು. ಇದೀಗ ಸಮಿತಿ ವರದಿ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಅಂಗವೈಕಲ್ಯ ಪಿಂಚಣಿಗೆ ಯಾವ ಮಾನದಂಡವನ್ನು ಅನುಸರಿಸಬೇಕು ಎಂಬ ಗೊಂದಲ ಇನ್ನೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.