Robbery: ಬ್ಯಾಂಕ್ ಗೆ ಕನ್ನ, 13.6 ಕೋಟಿ ಮೌಲ್ಯದ 19 ಕೆಜಿ ಚಿನ್ನ ದರೋಡೆ, ಗ್ರಾಹಕರು ಕಂಗಾಲು
Team Udayavani, Nov 21, 2024, 11:28 AM IST
ತೆಲಂಗಾಣ: ತೆಲಂಗಾಣ ರಾಜ್ಯದಲ್ಲೇ ಬೆಚ್ಚಿ ಬೀಳಿಸುವ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಜ್ಯದ ವಾರಂಗಲ್ ಜಿಲ್ಲೆಯಲ್ಲಿರುವ ಸಾರ್ವಜನಿಕ ವಲಯದ ಬ್ಯಾಂಕ್ ಒಂದರಲ್ಲಿ ಕಳ್ಳರು ಭಾರೀ ಪ್ರಮಾಣದ ಕಳ್ಳತನ ನಡೆಸಿದ್ದಾರೆ. ಈವರೆಗೆ ಬಂದಿರುವ ಮಾಹಿತಿ ಪ್ರಕಾರ ಬ್ಯಾಂಕ್ ನಲ್ಲಿದ್ದ 19 ಕೆಜಿಗೂ ಅಧಿಕ ಚಿನ್ನವನ್ನು ಕಳ್ಳರು ದೋಚಿದ್ದಾರೆ ಎನ್ನಲಾಗಿದ್ದು ಕಳವಾದ ಚಿನ್ನದ ಮೌಲ್ಯ ಸುಮಾರು 13.6 ಕೋಟಿ ರೂ ಎನ್ನಲಾಗಿದೆ.
ಈ ಘಟನೆ ಕಳೆದ ಸೋಮವಾರ(ನ.18) ರಂದು ಮಧ್ಯರಾತ್ರಿ ನಡೆದಿದ್ದು ಮಂಗಳವಾರ ಬೆಳಿಗ್ಗೆ ಬ್ಯಾಂಕ್ ಸಿಬಂದಿ ಬಂದಾಗಲೇ ಕಳ್ಳತನವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಬ್ಯಾಂಕಿಗೆ ಭದ್ರತಾ ಸಿಬಂದಿ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಗ್ಯಾಸ್ ಕಟ್ಟರ್ ನ ಸಹಾಯದಿಂದ ಕೃತ್ಯ:
ಘಟನೆ ಸಂಬಂಧ ಬುಧವಾರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು ಕಳ್ಳರು ಬ್ಯಾಂಕಿನ ಎಲ್ಲ ವಿಚಾರಗಳನ್ನು ಅರಿತುಕೊಂಡೆ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು ಬ್ಯಾಂಕಿನ ಲಾಕರ್ ಗುರಿಯಾಗಿಸಿ ಸಂಚು ರೂಪಿಸಿದ್ದಾರೆ ಅದಕ್ಕಾಗಿ ಗ್ಯಾಸ್ ಕಟ್ಟರ್ ಬಳಸಿಕೊಂಡು ಬ್ಯಾಂಕಿನ ಕಿಟಕಿಯ ಸರಳುಗಳನ್ನು ತುಂಡರಿಸಿ ಬ್ಯಾಂಕ್ ಒಳಗೆ ಪ್ರವೇಶ ಮಾಡಿದ್ದಾರೆ ಅಲ್ಲದೆ ಬ್ಯಾಂಕ್ ಒಳಗಿರುವ ಅಲಾರಾಂ ತಂತಿಗಳನ್ನು ತುಂಡರಿಸಿ ಸಿಸಿಟಿವಿ ನಿಷ್ಕ್ರಿಯಗೊಳಿಸಿ ಕೃತ್ಯ ಎಸಗಿದ್ದಾರೆ ಬಳಿಕ ಕೃತ್ಯದ ಯಾವುದೇ ಕುರುಹು ಸಿಗಬಾರದೆಂದು ಸಿಸಿಟಿವಿ ಡಿವಿಆರ್ ಅನ್ನು ಹೊತ್ತೊಯ್ದಿದ್ದಾರೆ ಎಂದು ಹೇಳಿದ್ದಾರೆ.
19 ಕೆಜಿಗೂ ಅಧಿಕ ಚಿನ್ನ ದರೋಡೆ:
ಬ್ಯಾಂಕ್ ಒಳಗೆ ಪ್ರವೇಶಿಸಿದ ಕಳ್ಳರು ಗ್ಯಾಸ್ ಕಟ್ಟರ್ ಮೂಲಕ ಲಾಕರ್ ಒಳಗಿದ್ದ ಸುಮಾರು 19 ಕೆಜಿಗೂ ಅಧಿಕ ಚಿನ್ನಾಭರಣಗಳನ್ನು ಹೊತ್ತೊಯ್ದಿದ್ದಾರೆ, ಇದರ ಮೌಲ್ಯವೇ ಸುಮಾರು 13.6 ಕೋಟಿ ರೂ. ಆಗಿದೆ ಎನ್ನಲಾಗಿದೆ.
ಕಂಗಾಲಾದ ಗ್ರಾಹಕರು:
ಇತ್ತ ಬ್ಯಾಂಕ್ ಲಾಕರ್ ನಿಂದ ಚಿನ್ನಾಭರಣಗಳು ಕಳವಾಗಿರುವ ವಿಚಾರ ತಿಳಿದ ಗ್ರಾಹಕರು ಕಂಗಾಲಾಗಿದ್ದಾರೆ ಮನೆಯಲ್ಲಿ ಇಟ್ಟರೆ ಕಳ್ಳರ ಭಯ ಎಂದು ಬ್ಯಾಂಕಿಗೆ ತಂದು ಇಟ್ಟರೆ ಇಲ್ಲಿಯೂ ದರೋಡೆಕೋರರು ಕನ್ನ ಹಾಕಿದ್ದು ಇನ್ನು ಏನು ಮಾಡುವುದು ಎಂದು ತಲೆ ಮೇಲೆ ಕೈಇಟ್ಟುಕೊಂಡಿದ್ದಾರೆ.
ಕಳ್ಳರ ಪತ್ತೆಗೆ ನಾಲ್ಕು ತಂಡ:
ಬ್ಯಾಂಕ್ ದರೋಡೆ ಕೃತ್ಯಕ್ಕೆ ಸಂಬಂಧಿಸಿ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಕಳ್ಳರ ಪತ್ತೆಗೆ ನಾಲ್ಕು ತಂಡ ರಚಿಸಿದ್ದು ಆದಷ್ಟು ಬೇಗ ಕಳ್ಳರ ಪತ್ತೆಹಚ್ಚಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
Tragedy: ಯಮುನಾ ಎಕ್ಸ್ಪ್ರೆಸ್ ವೇನಲ್ಲಿ ಭೀಕರ ಅಪಘಾತ.. 5 ತಿಂಗಳ ಮಗು ಸೇರಿ ಐವರು ದುರ್ಮರಣ
Bitcoin Scam: ಬಿಟ್‌ಕಾಯಿನ್ ವಿವಾದ… ಧ್ವನಿ ಸುಪ್ರಿಯಾದ್ದೆ ಎಂದ ಅಜಿತ್
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.