ಟಿ ಶರ್ಟ್, ಶಾರ್ಟ್ಸ್ ನಲ್ಲೇ ರೆಸಾರ್ಟ್‌ನಿಂದ ಇಬ್ಬರು ಶಾಸಕರು ಪರಾರಿ
Team Udayavani, Feb 14, 2017, 11:44 AM IST
ಚೆನ್ನೈ : ಘೋಷಿತ ಆದಾಯಕ್ಕಿಂತ ಅಧಿಕ ಪ್ರಮಾಣದ ಸಂಪತ್ತು ಹೊಂದಿರುವ ಕೇಸಿನಲ್ಲಿ ಇದೀಗ ಸುಪ್ರೀಂ ಕೋರ್ಟಿನಿಂದ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾಗೂ ಮುಂದಿನ ಹತ್ತು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಕಳೆದುಕೊಂಡಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ವಿರುದ್ಧ ಈ ತೀರ್ಪು ಬರುವ ಮುನ್ನವೇ ಆಕೆಯಿಂದ ಚೆನ್ನೈ ಸಮೀಪದ ಐಷಾರಾಮಿ ರೆಸಾರ್ಟ್ ಒಂದರಲ್ಲಿ ಕೂಡಿ ಹಾಕಲ್ಪಿಟ್ಟಿದ್ದ ಶಾಸಕರಲ್ಲಿ ಇಬ್ಬರು ಪನ್ನೀರಸೆಲ್ವಂ ತಂಡವನ್ನು ಸೇರಿಕೊಂಡಿದ್ದಾರೆ.
ಪನ್ನಿರಸೆಲ್ವಂ ತಂಡವನ್ನು ಸೇರಿಕೊಂಡಿರು ಶಾಸಕರೆಂದರೆ ಎಸ್ ಸೆಮ್ಮಲೈ ಮತ್ತು ಎಸ್ ಎಸ್ ಶರವಣನ್. ಸೆಮ್ಮಲೈ ಅವರು ಇಂದು ಮಂಗಳವಾರ ಬೆಳಗ್ಗೆ ಪನ್ನೀರಸೆಲ್ವಂ ತಂಡವನ್ನು ಸೇರಿಕೊಂಡರೆ ಶರವಣನ್ ಅವರು ನಿನ್ನೆ ಸೋಮವಾರವೇ ಸೇರಿಕೊಂಡಿದ್ದರು. ಇವರನ್ನು ಇತರ ನೂರಕ್ಕೂ ಅಧಿಕ ಶಾಸಕರೊಂದಿಗೆ ಗೋಲ್ಡನ್ ಬೇ ರೆಸಾರ್ಟ್‌ನಲ್ಲಿ ಶಶಿಕಲಾ ಅವರು ಕೂಡಿ ಹಾಕಿದ್ದರು.
ಕೂಡಿ ಹಾಕಲ್ಪಟ್ಟಿದ ಶಾಸಕರ ಮೇಲೆ ತೀವ್ರ ಕಣ್ಗಾವಲು ನಡೆಸುತ್ತಿದ್ದ ದಢೂತಿ ಗಾರ್ಡ್‌ಗಳ ಕಣ್ತಪ್ಪಿಸಿ ತಾನು ಕೇವಲ ಟಿ ಶರ್ಟ್ ಮತುತ ಬರ್ಮುಡಾ (ಶಾರ್ಟ್ಸ್)ನಲ್ಲಿ ಯಾರಿಗೂ ಗೊತ್ತಾಗದಂತೆ ವೇಷ ಮರೆಸಿಕೊಂಡು ರೆಸಾರ್ಟ್‌ನ ಎತ್ತರದ ಗೋಡೆಯನ್ನು ಹತ್ತಿ ಹಾರಿ ತಪ್ಪಿಸಿಕೊಂಡು ಬಂದಿರುವುದಾಗಿ ಶಾಸಕ ಸೆಮ್ಮಲಂ ಹೇಳಿದರು.
ನಿನ್ನೆ ಸೋಮವಾರ ಬೆಳಗ್ಗೆ ಚೆನ್ನೈ ಪೊಲೀಸರು ಮದ್ರಾಸ್ ಹೈಕೋರ್ಟ್‌ಗೆ ಹೇಳಿಕೆ ನೀಡಿ, ಗೋಲ್ಡನ್ ಬೇ ರೆಸಾರ್ಟ್‌ನಲ್ಲಿ 119 ಮಂದಿ ಎಐಎಡಿಎಂಕೆ ಶಾಸಕರು ಇದ್ದಾರೆ ಹಾಗೂ ಅವರ್ಯಾರೂ ತಮ್ಮನ್ನು ಬಲವಂತವಾಗಿ ಇಲ್ಲಿ ಇರಿಸಲಾಗಿದೆ ಎಂಬ ಬಗ್ಗೆ ಯಾವುದೇ ದೂರು ನೀಡಿಲ್ಲ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
MUST WATCH
ಹೊಸ ಸೇರ್ಪಡೆ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.