Kuno National Park ಮತ್ತೆರಡು ಚೀತಾ ಮರಿಗಳು ಮೃತ್ಯು
Team Udayavani, May 25, 2023, 5:11 PM IST
ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಜ್ವಾಲಾದ ಮೊದಲ ಮರಿ ಸತ್ತ ಕೆಲವು ದಿನಗಳ ನಂತರ ಗುರುವಾರ ಮತ್ತೆರಡು ಮರಿಗಳು ಸಾವನ್ನಪ್ಪಿವೆ. ಜ್ವಾಲಾ ಈ ವರ್ಷ ಮಾರ್ಚ್ 24 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು.
ಉದ್ಯಾನವನದಲ್ಲಿ ಹುಟ್ಟಿದ ಮೂರು ಮರಿಗಳು ಸಾವನ್ನಪ್ಪಿದ್ದರೆ, ನಾಲ್ಕನೆಯ ಮರಿಯ ಆರೋಗ್ಯವು ಗಂಭೀರವಾಗಿರುವುದರಿಂದ ನಿಗಾದಲ್ಲಿ ಇರಿಸಲಾಗಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನ ತಿಳಿಸಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಮೊದಲ ಮರಿ ದೌರ್ಬಲ್ಯದಿಂದ ಸಾವನ್ನಪ್ಪಿದೆ. ಇತ್ತೀಚಿನ ಸಾವಿನಿಂದಾಗಿ ಕುನೋದಲ್ಲಿ ಕಳೆದ ಎರಡು ತಿಂಗಳುಗಳಲ್ಲಿ ಚೀತಾಗಳ ಸಾವಿನ ಸಂಖ್ಯೆಯನ್ನು ಆರಕ್ಕೇರಿದೆ. ಇದರಲ್ಲಿ ಆಫ್ರಿಕನ್ ರಾಷ್ಟ್ರಗಳಿಂದ ಮೂರು ಚೀತಾಗಳ ಸಾವಿನ ನಂತರ, ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಕೇವಲ ಒಂದು ಮರಿಯೊಂದಿಗೆ ಉಳಿದಿದೆ.
ನಮೀಬಿಯಾದಿಂದ ತರಲಾಗಿದ್ದ ಚೀತಾಗಳಲ್ಲಿ ಒಂದಾದ ಸಶಾ ಮಾರ್ಚ್ 27 ರಂದು ಕಿಡ್ನಿ ಸಂಬಂಧಿತ ಕಾಯಿಲೆಗೆ ಬಲಿಯಾಗಿತ್ತು, ದಕ್ಷಿಣ ಆಫ್ರಿಕಾದ ಉದಯ್ ಎಂಬ ಮತ್ತೊಂದು ಚೀತಾ ಏಪ್ರಿಲ್ 13 ರಂದು ಸಾವನ್ನಪ್ಪಿತ್ತು. ದಕ್ಷಾ ಎಂಬ ಹೆಣ್ಣು ಚೀತಾ ಮೇ 9 ರಂದು ಸಂಯೋಗದ ಪ್ರಯತ್ನದ ಸಮಯದಲ್ಲಿ ಗಂಡು ಜತೆಗಿನ ಹಿಂಸಾತ್ಮಕ ಘರ್ಷಣೆಯಲ್ಲಿ ಗಾಯಗೊಂಡು ಸಾವನ್ನಪ್ಪಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.