ವಿದ್ಯುತ್ ಸಂಪರ್ಕಕ್ಕೆ 2 ದಾಖಲೆ ಸಾಕು
Team Udayavani, Sep 17, 2020, 11:48 PM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಇನ್ನು ಮುಂದೆ ವಿದ್ಯುತ್ ಬಳಕೆದಾರರು ಕೇವಲ 2 ದಾಖಲೆ ಗಳನ್ನು ನೀಡಿ ವಿದ್ಯುತ್ ಸಂಪರ್ಕ ಪಡೆಯಬಹುದು. ಈ ಬಗ್ಗೆ ಕೇಂದ್ರ ಇಂಧನ ಸಚಿವಾಲಯ ಸಿದ್ಧಪಡಿಸಿರುವ ಕರಡು ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ. 10 ಕಿ.ವ್ಯಾ. ಸಾಮರ್ಥ್ಯದ ವರೆಗಿನ ವಿದ್ಯುತ್ ಸಂಪರ್ಕಕ್ಕೆ ಮತ್ತು 150 ಕಿ.ವ್ಯಾ. ಸಾಮರ್ಥ್ಯದ ವರೆಗಿನ ವಿದ್ಯುತ್ ಸಂಪರ್ಕಕ್ಕೆ ಕೇವಲ ಸರಳೀಕರಣಗೊಳಿಸಿದ ದಾಖಲೆಗಳನ್ನು ಸಲ್ಲಿಸಿದರೆ ಸಾಕು ಎಂದು ಉಲ್ಲೇಖೀಸಲಾಗಿದೆ. ಸದ್ಯ ಮೆಟ್ರೋ ನಗರಗಳಲ್ಲಿ ಹೊಸ ವಿದ್ಯುತ್ ಸಂಪರ್ಕಕ್ಕೆ 7 ದಿನಕ್ಕಿಂತ ಅಧಿಕ, ಇತರ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ 15, ಗ್ರಾಮೀಣ ಪ್ರದೇಶಗಳಲ್ಲಿ 30 ದಿನಗಳು ಬೇಕಾಗುತ್ತಿವೆ.
ಗ್ರಾಹಕರು ನಗದು, ಚೆಕ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಲು ಅವಕಾಶವಿದೆ ಎಂದು ಕರಡು ನಿಯಮಗಳಲ್ಲಿ ಉಲ್ಲೇಖೀಸಲಾಗಿದೆ. ಮನೆಯ ತಾರಸಿಯಲ್ಲಿ ಸೌರ ವಿದ್ಯುತ್ ಕೋಶ ಮತ್ತು ನೀರಾವರಿ ಪಂಪ್ ಸೆಟ್‌ಗಳನ್ನು ಹೊಂದಿರುವ ವಿದ್ಯುತ್ ಬಳಕೆದಾರರನ್ನು “ಪ್ರೊಸ್ಯೂಮರ್ಸ್’ ಎಂದು ಕರೆಯಲು ನಿರ್ಧರಿಸಲಾಗಿದೆ. ಅಂಥವರಿಗೆ ತಮಗೆ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಉತ್ಪಾದನೆ ಮಾಡಲು ಆಯಾ ರಾಜ್ಯಗಳ ವಿದ್ಯುತ್ಛಕ್ತಿ ನಿಯಂತ್ರಣ ಪ್ರಾಧಿಕಾರಗಳು ಸೂಚಿಸಿದಂತೆ ಅನುಮತಿ ಕೊಡಲಾಗುತ್ತದೆ.
ವಿದ್ಯುತ್ ವಿತರಣಾ ಕಂಪನಿಗಳಿಂದ ಬಳಕೆದಾರರಿಗೆ ನೀಡುವ ಸೇವೆಯಲ್ಲಿ ವ್ಯತ್ಯಯ ಉಂಟಾದಲ್ಲಿ ಪರಿಹಾರ ನೀಡಲೂ ಹೊಸ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಗ್ರಾಹಕರು ಎದುರಿಸುವ ಸಮಸ್ಯೆಗಳ ಪರಿಹಾರಕ್ಕಾಗಿ 24 ಗಂಟೆಗಳ ಕಾಲ ಕೆಲಸ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಬೇಕೆಂದು ಕರಡು ನಿಯಮಗಳಲ್ಲಿ ಉಲ್ಲೇಖೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.