20 ಪಾಕ್ ಫೈಟರ್ ಜೆಟ್ಗಳಿಂದ ಭಾರತ ವಾಯು ಪ್ರದೇಶ ಉಲ್ಲಂಘನೆ
Team Udayavani, Feb 28, 2019, 10:25 AM IST
ಹೊಸದಿಲ್ಲಿ : ಪಾಕ್ ವಾಯು ಪಡೆಯ ಸುಮಾರು 20 ಫೈಟರ್ ಜೆಟ್ಗಳು ನಿನ್ನೆ ಬುಧವಾರ ಭಾರತೀಯ ವಾಯು ಪ್ರದೇಶವನ್ನು ಉಲ್ಲಂಘಿಸಿ ಒಳ ಬಂದಿವೆ ಮತ್ತು ಅವಷ್ಟನ್ನೂ ಭಾರತೀಯ ವಾಯು ಪಡೆ ಹಿಮ್ಮೆಟ್ಟಿಸಿದೆ ಎಂದು ಸೇನಾ ಮೂಲಗಳು ಹೇಳಿವೆ.
ಪಾಕಿಸ್ಥಾನ ಇಂದು ಜಮ್ಮು ಕಾಶ್ಮೀರದ ನೌಶೇರಾ ವಲಯದಲ್ಲಿ ಭಾರೀ ಮೋಟಾರ್ಗಳನ್ನು ಬಳಸಿ ಫೈರಿಂಗ್ ನಡೆಸಿದೆ. ಭಾರತೀಯ ಪಡೆಗಳು ಇದಕ್ಕೆ ಅತ್ಯಂತ ಪರಿಣಾಮಕಾರಿಯಾದ ಉತ್ತರ ನೀಡಿವೆ ಎಂದು ತಿಳಿದು ಬಂದಿದೆ. ಭಾರತದ ಕಡೆಯಲ್ಲಿ ಯಾವುದೇ ಸಾವು ನೋವು, ಗಾಯ ಉಂಟಾಗಿಲ್ಲ ಎಂದು ವರದಿ ತಿಳಿಸಿದೆ.
ಪಾಕ್ ವಿದೇಶ ಸಚಿವ ಎಸ್ ಎಂ ಕುರೇಶಿ ಅವರು ಯುಎಇ ಅಬುಧಾಬಿಯಲ್ಲಿನ ಇಸ್ಲಾಮಿಕ್ ಸಹಕಾರ ಸಂಘಟನೆಯ ಸಮಾವೇಶದ ಪಾರ್ಶ್ವದಲ್ಲಿ ಭಾರತದ ವಿದೇಶ ಸಚಿವ ಸುಶ್ಮಾ ಸ್ವರಾಜ್ ಅವರನ್ನು ಭೇಟಿಯಾಗುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಕುರೇಶಿ ಅವರು, “ಓಐಸಿ ಸಭೆಯಲ್ಲಿ ಭಾರತ ವಿದೇಶ ಸಚಿವೆ ಸುಶ್ಮಾ ಸ್ವರಾಜ್ ಅವರನ್ನು ಭೇಟಿಯಾಗಲು ನಾನು ಹಿಂಜರಿಯುವುದಿಲ್ಲ; ಆದರೆ ಉಭಯ ದೇಶಗಳ ನಡುವಿನ ಬಿಕ್ಕಟ್ಟು ಶಮನ ಮಾತುಕತೆಗೆ ಅದು ಸೂಕ್ತ ವೇದಿಕೆಯಲ್ಲ’ ಎಂದು ಹೇಳಿದರು.
ಈ ನಡುವೆ ಪಾಕ್ ವಿದೇಶಾಂಗ ಕಾರ್ಯಾಲಯ, “ಐಎಎಫ್ ಪೈಲಟ್ ಸುರಕ್ಷಿತನಿದ್ದು ಆರೋಗ್ಯದಿಂದ್ದಾರೆ. ಆತನ ಯುದ್ಧ ಕೈದಿಯ ಸ್ಥಾನಮಾನದ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧರಿಸಲಾಗುವುದು’ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.