ಸುರಂಗಕ್ಕಾಗಿ ಪಾಕ್ ನೆಲದಲ್ಲಿ 200 ಮೀ. ಸಾಗಿದ್ದ ಯೋಧರು!
ಸುರಂಗ ಪತ್ತೆ ಕಾರ್ಯಾಚರಣೆಯ ವಿವರ ಬಹಿರಂಗ
Team Udayavani, Dec 2, 2020, 6:00 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಉಗ್ರರು ಭಾರತದೊಳಕ್ಕೆ ನುಸುಳಲು ಬಳಸುತ್ತಿದ್ದ ಸುರಂಗವನ್ನು ಕಳೆದ ವಾರವಷ್ಟೇ ಭಾರತೀಯ ಯೋಧರು ಪತ್ತೆಹಚ್ಚಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಸುರಂಗವನ್ನು ಶೋಧಿಸುತ್ತಾ ನಮ್ಮ ಯೋಧರು ಪಾಕಿಸ್ಥಾನದ ಗಡಿ ದಾಟಿ 200 ಮೀ. ದೂರ ಸಾಗಿದ್ದರು ಎಂಬ ಅಚ್ಚರಿಯ ಮಾಹಿತಿ ಈಗ ಬಹಿರಂಗವಾಗಿದೆ.
ಸರಕಾರದ ಉನ್ನತ ಮಟ್ಟದ ಅಧಿಕಾರಿ ಯೊಬ್ಬರು ಈ ವಿಚಾರ ಬಾಯಿಬಿಟ್ಟಿದ್ದಾರೆ. ನ.22ರಂದು ಜಮ್ಮು-ಕಾಶ್ಮೀರದ ಸಾಂಬಾ ವಲಯದಲ್ಲಿನ ಅಂತಾರಾಷ್ಟ್ರೀಯ ಗಡಿಯ ಸಮೀಪ 150 ಮೀಟರ್ ಉದ್ದದ ಸುರಂಗವನ್ನು ಯೋಧರು ಪತ್ತೆಹಚ್ಚಿದ್ದರು. ಬಿಎಸ್‌ಎಫ್ನ ಸ್ಥಾಪನಾ ದಿನವಾದ ಮಂಗಳ ವಾರ ಈ ಕಾರ್ಯಾಚರಣೆ ಕುರಿತು ಮಾತನಾಡಿದ ಬಿಎಸ್‌ಎಫ್ ಡಿಜಿ ರಾಕೇಶ್ ಅಸ್ಥಾನಾ, “ನಗ್ರೋಟಾ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಉಗ್ರರು ಇದೇ ಸುರಂಗ ಬಳಸಿಕೊಂಡು ಭಾರತ ದೊಳಕ್ಕೆ ನುಸುಳಿದ್ದರು. ಸುರಂಗವನ್ನು ನೋಡುತ್ತಿದ್ದರೆ, ಅದು ಹೊಸತಾಗಿ ನಿರ್ಮಾ ಣ ವಾಗಿದ್ದು ಎಂಬುದು ಗೊತ್ತಾಗುತ್ತಿತ್ತು. ನಿರ್ಗಮನ ದ್ವಾರದಲ್ಲಿ ಪೊದೆಯಿರುವಂತೆ ನೋಡಿಕೊಳ್ಳಲಾಗಿತ್ತು. ಸುರಂಗದ ಪ್ರವೇಶ ದ್ವಾರದಲ್ಲಿ ಕರಾಚಿಯ ಗುರುತು ಇರುವ ಮರಳಿನ ಚೀಲಗಳನ್ನು ಇಡಲಾಗಿತ್ತು’ ಎಂದು ಹೇಳಿದ್ದಾರೆ. ಅವರು ಕಾರ್ಯಾ ಚರಣೆಯ ಕುರಿತ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಸರಕಾರಿ ಅಧಿಕಾರಿಯೊಬ್ಬರು ಮಾತನಾಡಿ, ಸುರಂಗ ಪತ್ತೆಗಾಗಿ ನಮ್ಮ ಯೋಧರು ಪಾಕಿಸ್ಥಾನದ ಗಡಿ ದಾಟಿ 200 ಮೀ. ಒಳಕ್ಕೆ ಸಾಗಿದ್ದರು ಎಂಬ ವಿಚಾರ ಬಹಿರಂಗಪಡಿಸಿದ್ದಾರೆ.
ಪ್ರತಿಭಟನೆ ಮೇಲೆ ಪ್ರಭಾವಕ್ಕೆ ಯತ್ನ: ಈ ನಡುವೆ, ಪಂಜಾಬ್ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ದುರ್ಬಳಕೆ ಮಾಡಿಕೊ ಳ್ಳಲು ಖಲಿಸ್ಥಾನ ಪ್ರತ್ಯೇಕತಾವಾದಿ ಸಂಘಟ ನೆ ಗ ಳು ಮುಂದಾಗಿದ್ದು, ಅವುಗಳಿಗೆ ಪಾಕ್‌ನ ಬೆಂಬಲ ಇದೆ ಎಂದು ರಾಜ್ಯ ಪೊಲೀಸ್ ಇಲಾಖೆ ಕೇಂದ್ರಕ್ಕೆ ಮಾಹಿತಿ ರವಾನಿಸಿದೆ.
ಪಾಕ್‌ನಿಂದ ಚೀನ ಡ್ರೋನ್ ಬಳಕೆ?
ಪಾಕ್ ಐಎಸ್‌ಐ ಮತ್ತು ಉಗ್ರರು ಜಮ್ಮು -ಕಾಶ್ಮೀರ ಹಾಗೂ ಪಂಜಾಬ್‌ನೊಳಕ್ಕೆ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಸಾಗಿಸಲು ಅತ್ಯುತ್ಕೃಷ್ಟ ಚೀನ ಡ್ರೋನ್‌ಗಳನ್ನು ಬಳಸುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಕಳೆದ ಕೆಲವು ವರ್ಷಗಳಿಂದ ಸಣ್ಣ ಪ್ರಮಾಣದ ಮಾನವ ರಹಿತ ವಿಮಾನಗಳ ಮೂಲಕ ಆಯುಧಗಳ ಪೂರೈಕೆ ಯಾಗು ತ್ತಿತ್ತು. ಆದರೆ ಈಗ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳು ಅಕ್ರಮವಾಗಿ ರವಾನೆಯಾ ಗುತ್ತಿದ್ದು, ಅದಕ್ಕಾಗಿ ಹೆಚ್ಚು ಸಾಮರ್ಥ್ಯದ ಅತ್ಯಾಧುನಿಕ ಡ್ರೋನ್‌ಗಳನ್ನು ಬಳಸುತ್ತಿರು ವುದು ಗೊತ್ತಾಗಿದೆ. ಮುಂದಿನ 2 ತಿಂಗಳುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಸಾಗಣೆ ಆಗುವ ಸಾಧ್ಯತೆಯಿದ್ದು, ನಿಗಾ ವಹಿಸುವಂತೆ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.