ಲುಂಗಿ ಧರಿಸಿ ಟ್ರಕ್ ಚಲಾಯಿಸಿದರೆ 2,000 ರೂ. ದಂಡ!
ಸ್ಲಿಪ್ಪರ್ ಮಾದರಿಯ ಚಪ್ಪಲಿಗಳನ್ನು ಧರಿಸಿ ದ್ವಿಚಕ್ರ ವಾಹನವನ್ನೂ ಚಲಾಯಿಸುವಂತಿಲ್ಲ
Team Udayavani, Sep 11, 2019, 5:55 AM IST
ಲಕ್ನೋ/ಗಾಂಧಿನಗರ: ಹೊಸ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ ಜಾರಿಯಾದ ಬಳಿಕ ವಾಹನ ಸವಾರರು ಭಾರೀ ಮೊತ್ತದ ದಂಡ ತೆರುತ್ತಿರುವಂಥ ಸುದ್ದಿಯನ್ನು ಪ್ರತೀ ದಿನ ಓದುತ್ತಿದ್ದೀರಿ. ಈಗ ಇದಕ್ಕೆ ‘ಲುಂಗಿ’ಯೂ ಸೇರ್ಪಡೆಯಾಗಿದೆ.
ಹೊಸ ಕಾನೂನಿನ ಪ್ರಕಾರ ಉತ್ತರಪ್ರದೇಶದಲ್ಲಿ ಲುಂಗಿ (ಪಂಚೆ) ಧರಿಸಿಕೊಂಡು ವಾಹನ ಚಲಾಯಿಸಿದರೆ ಬರೋಬ್ಬರಿ 2 ಸಾವಿರ ರೂ. ದಂಡ ತೆರಬೇಕಾಗುತ್ತದೆ.
ಲುಂಗಿ-ಬನಿಯನ್‌ಗೆ ಬ್ರೇಕ್
ಲುಂಗಿ ಅಥವಾ ಬನಿಯನ್ ಧರಿಸಿ ಟ್ರಕ್ ಚಲಾಯಿಸುವಂಥ ಚಾಲಕರಿಗೆ ಉ.ಪ್ರ. ಪೊಲೀಸರು 2,000 ರೂ. ದಂಡ ವಿಧಿಸಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲ, ಸ್ಲಿಪ್ಪರ್ ಮಾದರಿಯ ಚಪ್ಪಲಿಗಳನ್ನು ಧರಿಸಿ ಗೇರ್‌ನ ದ್ವಿಚಕ್ರ ವಾಹನ ಚಲಾಯಿಸುವವರಿಗೂ ಹೊಸ ನಿಯಮದಂತೆ 1,000 ರೂ. ದಂಡ ವಿಧಿಸಲಾಗುತ್ತಿದೆ.
ಹೊಸದೇನೂ ಅಲ್ಲ
ಲುಂಗಿ ಧರಿಸುವುದು ತಪ್ಪು ಎನ್ನುವುದು ಹೊಸದಾಗಿ ಬಂದ ನಿಯಮವಲ್ಲ. ಹಲವು ದಶಕಗಳಿಂದ ಜಾರಿಯಲ್ಲಿರುವ ಮೋಟಾರು ವಾಹನ ಕಾಯ್ದೆಯಲ್ಲಿಯೇ ಈ ಅಂಶವಿದೆ. ಆದರೆ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅಲ್ಲದೆ, ಅದಕ್ಕೆ ಅಂಥ ಭಾರೀ ದಂಡವೂ ಇರಲಿಲ್ಲ. ಆದರೆ ಈಗ ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ ವಸ್ತ್ರಸಂಹಿತೆಯನ್ನು ಶಿಸ್ತುಬದ್ಧವಾಗಿ ಜಾರಿ ಮಾಡಲು ನಿರ್ಧರಿಸಲಾಗಿದ್ದು, ದಂಡದ ಮೊತ್ತವನ್ನೂ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊತ್ತ ಇಳಿಸಿದ ಗುಜರಾತ್ ಸರಕಾರ
ಇನ್ನೊಂದೆಡೆ, ಬಿಜೆಪಿ ಆಡಳಿತದಲ್ಲಿರುವ ಗುಜರಾತ್ ಸರಕಾರವು ಮೋಟಾರು ವಾಹನ ಕಾಯ್ದೆಯನ್ವಯ ವಿಧಿಸುವ ದಂಡದ ಮೊತ್ತದಲ್ಲಿ ಗಣನೀಯ ಇಳಿಕೆ ಮಾಡಿದೆ. ಕೆಲವು ಪ್ರಕರಣಗಳಲ್ಲಿ 10 ಸಾವಿರ ರೂ.ಗಳಿದ್ದ ದಂಡದ ಮೊತ್ತವನ್ನು 1 ಸಾವಿರ ರೂ.ಗೆ ಇಳಿಸಲಾಗಿದೆ. ಹೆಲ್ಮೆಟ್ ಇಲ್ಲದ ಚಾಲನೆ, ಸೀಟ್ಬೆಲ್r ರಹಿತ ಚಾಲನೆಗಿರುವ ದಂಡವನ್ನು 1,000 ರೂ.ಗಳಿಂದ 500 ರೂ.ಗೆ ಇಳಿಸಲಾಗಿದೆ.
ಉದ್ದನೆಯ ಪ್ಯಾಂಟ್ ಧರಿಸಿ
ದಂಡ ಬೀಳಬಾರದು ಎಂದರೆ ಉತ್ತರಪ್ರದೇಶದ ಟ್ರಕ್ ಚಾಲಕರು ಅಂಗಿ ಅಥವಾ ಟಿ-ಶರ್ಟುಗಳನ್ನು ಧರಿಸಿ, ಉದ್ದನೆಯ ಪ್ಯಾಂಟುಗಳನ್ನೇ ತೊಡಬೇಕು. ಅಲ್ಲದೆ ವಾಹನ ಚಾಲನೆ ಮಾಡುವ ಎಲ್ಲರೂ ಶೂಗಳನ್ನೇ ಧರಿಸಬೇಕು. ಈ ಹೊಸ ನಿಯಮವು ರಾಜ್ಯದ ಎಲ್ಲ ಶಾಲಾ ವಾಹನಗಳ ಚಾಲಕರ ಸಮವಸ್ತ್ರಕ್ಕೂ ಅನ್ವಯವಾಗುತ್ತದೆ.
ಮೋಟಾರು ವಾಹನ ಕಾಯ್ದೆ 2019ರ ಸೆಕ್ಷನ್ 179ರ ಅನ್ವಯ, ವಸ್ತ್ರಸಂಹಿತೆ ನಿಯಮ ಉಲ್ಲಂಘನೆಗೆ 2,000 ರೂ. ದಂಡ ವಿಧಿಸಲಾಗುತ್ತದೆ. ವಸ್ತ್ರಸಂಹಿತೆ ಎನ್ನುವುದು 1939ರಿಂದಲೇ ಮೋಟಾರು ವಾಹನ ಕಾಯ್ದೆಯ ಭಾಗವಾಗಿತ್ತು ಎನ್ನುತ್ತಾರೆ ಟ್ರಾಫಿಕ್ ಎಎಸ್‌ಪಿ ಪೂರ್ಣೇಂದು ಸಿಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ
Madras HC: ಆಲಿಂಗನ, ಚುಂಬನ ಹರೆಯದ ಪ್ರೇಮಿಗಳಲ್ಲಿ ಸಾಮಾನ್ಯ
MUST WATCH
ಹೊಸ ಸೇರ್ಪಡೆ
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.