2000 ನೋಟು ಅಮಾನ್ಯ? ಈಗಾಗಲೇ ಆರ್‌ಬಿಐನಿಂದ ನೋಟು ಮುದ್ರಣ ಸ್ಥಗಿತ


Team Udayavani, Jul 27, 2017, 8:55 AM IST

2000.jpg

ಹೊಸದಿಲ್ಲಿ: ಕೇಂದ್ರ ಸರಕಾರ 2000 ನೋಟುಗಳ ಅಮಾನ್ಯಕ್ಕೆ ಸಿದ್ಧತೆ ನಡೆಸಿದೆಯೇ? ಇದು ಸದ್ಯಕ್ಕೆ ಜನರ ಮಧ್ಯೆ ಹರಿದಾಡುತ್ತಿರುವ ಸುದ್ದಿ. ಆದರೆ ಈ ಸುದ್ದಿ ಇದೀಗ ಸಂಸತ್‌ ಭವನಕ್ಕೂ ಮುಟ್ಟಿದ್ದು, ರಾಜ್ಯಸಭೆಯಲ್ಲಿ ವಿಪಕ್ಷಗಳು ಈ ಬಗ್ಗೆ ಸರಕಾರವನ್ನು ಪ್ರಶ್ನಿಸಿವೆ. ವಿಶೇಷವೆಂದರೆ, ಸರಕಾರ ಈ ಪ್ರಶ್ನೆಗೆ ಇಲ್ಲವೆಂದೂ ಹೇಳಿಲ್ಲ, ಹೌದು ಎಂಬ ಉತ್ತರವನ್ನೂ ಕೊಟ್ಟಿಲ್ಲ. ಹೀಗಾಗಿ, ನೋಟು ಅಮಾನ್ಯದ ಸುದ್ದಿಗೆ ಮತ್ತಷ್ಟು  ಪುಷ್ಟಿ ಬಂದಂತಾಗಿದೆ. 

ಸದ್ಯ ಆರ್‌ಬಿಐ 2000 ಮುಖಬೆಲೆಯ ನೋಟುಗಳ ಮುದ್ರಣ ನಿಲ್ಲಿಸಿದೆ ಎಂದು ಹೇಳಲಾಗಿದೆ. ಇದಕ್ಕೆ ಬದಲಾಗಿ 200 ಮುಖಬೆಲೆಯ ನೋಟುಗಳ ಮುದ್ರಣ ವೇಗವಾಗಿ ಸಾಗುತ್ತಿದೆ ಎಂದು ಹೇಳಲಾ ಗುತ್ತಿದ್ದು, ಆಗಸ್ಟ್‌ನಲ್ಲಿ ಈ ನೋಟುಗಳು ಚಲಾವಣೆಗೆ ಬರಲಿವೆ ಎಂದು ಕೇಂದ್ರ ಸರಕಾರವೇ ಹೇಳಿದೆ. ಅಲ್ಲದೆ ಬ್ಯಾಂಕುಗಳು 2000 ಮುಖಬೆಲೆಯ ನೋಟುಗಳಿಗೆ ಬೇಡಿಕೆ ಸಲ್ಲಿಸಿದ್ದರೆ, ಆರ್‌ಬಿಐ ಪೂರೈಸಲು ಒಪ್ಪುತ್ತಿಲ್ಲವೆಂದು ಹೇಳಲಾಗಿದೆ. ಹೀಗಾಗಿ, 2000 ರೂ. ಮುಖಬೆಲೆಯ ನೋಟಿನ ಲೀಗಲ್‌ ಟೆಂಡರ್‌ ರದ್ದಾಗಲಿದೆ ಎಂಬ ಮಾತುಗಳು ಹೆಚ್ಚಾಗಿವೆ. 

ರಾಜ್ಯಸಭೆಯಲ್ಲಿ ಈ ಬಗ್ಗೆ ಪ್ರಸ್ತಾವಿಸಿದ ಎಸ್‌ಪಿ ನಾಯಕ ನರೇಶ್‌ ಅಗರ್ವಾಲ್‌,  ಕಳೆದ ನವೆಂಬರ್‌ನಲ್ಲಿ ನೋಟು ಅಮಾನ್ಯ ಮಾಡಿದ ಅನಂತರ 2000 ಮುಖಬೆಲೆ ನೋಟು ಗಳನ್ನು ಪರಿಚಯಿಸಲಾಗಿತ್ತು. ಆದರೆ, ಈಗ ಈ ನೋಟುಗಳ ಪೂರೈಕೆ ಕಡಿಮೆಯಾಗಿದೆ. ಅಲ್ಲದೆ ಒಂದು ಸಾವಿರ ಮುಖಬೆಲೆ ನಾಣ್ಯ ಜಾರಿಗೆ ತರುವ ಬಗ್ಗೆಯೂ ಚಿಂತನೆ ನಡೆದಿದೆ ಎನ್ನಲಾಗಿದೆ. ಇದು ನಿಜವೇ? ಎಂದು ಹಣ ಕಾಸು ಸಚಿವ ಅರುಣ್‌ ಜೇಟಿÉ ಅವರನ್ನು  ಪ್ರಶ್ನಿಸಿದರು. 
ಇದಷ್ಟೇ ಅಲ್ಲ, ಆರ್‌ಬಿಐ 2000 ರೂ. ನೋಟುಗಳ ಮುದ್ರಣ ನಿಲ್ಲಿಸಿದೆ. ಈಗ ಮತ್ತೂಮ್ಮೆ ನೋಟು ಅಮಾನ್ಯ ಕ್ರಮಕ್ಕೆ ಮುಂದಾಗುತ್ತೀರಾ ಎಂದು ಪ್ರಶ್ನಿಸಿ, ಸಚಿವರ ಸ್ಪಷ್ಟನೆಗೂ ಆಗ್ರಹಿಸಿದರು. ಇದಕ್ಕೂ ಉತ್ತರಿ ಸದೇ ಜೇಟಿÉ ಅವರು ಮೌನದಿಂದಲೇ ಕುಳಿತಿದ್ದರು. 

ಅದಕ್ಕೆ ಪೂರಕವಾಗಿ ಲೇವಡಿ ಮಾಡಿದ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ “1  ಸಾವಿರ ಮುಖಬೆಲೆ ನಾಣ್ಯ ಬಿಡುಗ ಡೆಗೆ ಸಿದ್ಧತೆ ನಡೆಸುತ್ತಿರುವುದು ಸತ್ಯವೇ? ಅದಕ್ಕಾಗಿ ನಾವು ಬ್ಯಾಗ್‌ ಖರೀದಿ ಮಾಡಬೇಕೇ. ನಮ್ಮ ಸಹೋದರಿಯರ ಬಳಿ ಪರ್ಸ್‌ ಮಾತ್ರ ಇದೆ. ಈ ನಿಟ್ಟಿನಲ್ಲಿ ರಾಜಕೀಯ ಮಾಡುವುದಿಲ್ಲ’  ಎಂದು ಹೇಳಿದರು.

ರಾಷ್ಟ್ರಪತಿ ಭಾಷಣದಲ್ಲಿ ನೆಹರೂ ಹೆಸರಿಲ್ಲವೇಕೆ?
ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಮಾಡಿದ ಮೊದಲ ಭಾಷಣವೇ ವಿವಾದ ಸೃಷ್ಟಿಸಿದೆ. ಭಾಷಣದ ವಿಷಯ ಬುಧವಾರ ರಾಜ್ಯಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು.
ಕಾಂಗ್ರೆಸ್‌ ಮುಖಂಡ ಆನಂದ್‌ ಶರ್ಮಾ ಮಾತನಾಡಿ, “ದೇಶ ಕಟ್ಟುವಲ್ಲಿ ಮಹಾತ್ಮ ಗಾಂಧಿ, ದೇಶದ ಪ್ರಥಮ ಪ್ರಧಾನಿ ಜವಹರ್‌ಲಾಲ್‌ ನೆಹರೂ ಅವರ ಕೊಡುಗೆ ಮಹತ್ವದ್ದಾಗಿದೆ. ಮಹಾತ್ಮ ಗಾಂಧಿ ಅವರನ್ನು ಇಡೀ ದೇಶವೇ ಗೌರವಿಸುತ್ತದೆ. ಅದೇ ರೀತಿ ಪ್ರಥಮ ಪ್ರಧಾನಿ ನೆಹರು ಅವರೂ ದೇಶಕ್ಕಾಗಿ ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ ರಾಷ್ಟ್ರಪತಿ ಯವರು ಇಂಥ ಮಹನೀಯರನ್ನು ಮರೆತದ್ದು ಸರಿಯಲ್ಲ,’ ಎಂದು ಆಕ್ಷೇಪಿಸಿದರು.

ಈ ಆರೋಪದಿಂದ ಕೆರಳಿದ ಹಣಕಾಸು ಸಚಿವ ಅರುಣ್‌ ಜೇಟಿÉ, ಆನಂದ್‌ ಶರ್ಮಾ ಅವರ ಸಂಪೂರ್ಣ ಭಾಷಣವನ್ನು ಕಲಾಪದ ಕಡತದಿಂದ ತೆಗೆಯುವಂತೆ ಸೂಚಿಸಿದ್ದು,  ಜತೆಗೆ “ಶೂನ್ಯ ಅವಧಿ ಇರುವುದು ಟಿವಿ ಕ್ಯಾಮೆರಾಗಳ ಲಾಭಕ್ಕಾಗಿ ಅಲ್ಲ. ಆದರೆ ಇಲ್ಲಿ ಅದೇ ನಡೆಯುತ್ತಿದೆ,’ ಎಂದಾಗ ಕಾಂಗ್ರೆಸಿಗರು ಪ್ರತಿಭಟಿಸಿದರು.

ಪಾಪ ಮಾಡಲಾರೆ!: “ಇರಾಕ್‌ನ ಮೊಸುಲ್‌ನಲ್ಲಿ ಐಸಿಸ್‌ ಉಗ್ರರಿಂದ ಅಪಹರಣಕ್ಕೊಳಗಾದ 39 ಭಾರತೀಯರು ಅಸುನೀಗಿದ್ದಾರೆ ಎನ್ನಲು ಯಾವುದೇ ಆಧಾರವಿಲ್ಲ. ಹೀಗಾಗಿ ಅವರೆಲ್ಲ ಬದುಕಿಲ್ಲ ಎಂದು ಘೋಷಿಸುವ ಮೂಲಕ ಪಾಪ ಮಾಡಲು ನಾನು ಸಿದ್ಧಳಿಲ್ಲ,’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ತಿಳಿಸಿದ್ದಾರೆ. ಅಪಹೃತರೆಲ್ಲ ಬದುಕಿದ್ದಾರೆ ಎನ್ನುವ ಮೂಲಕ ಸಚಿವರು ದೇಶದ ನಾಗರಿಕರನ್ನು ವಂಚಿಸುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಷ್ಮಾ, “ಅವರ ಸಾವಿನ ಬಗ್ಗೆ ಸಾಕ್ಷ್ಯಗಳು ದೊರೆಯುವವರೆಗೂ ಅವರನ್ನು ಹುಡುಕುವ ಪ್ರಯತ್ನ ನಿಲ್ಲುವುದಿಲ್ಲ,’ ಎಂದರು.

ನಡೆಯದ ಕಲಾಪ: ಕಾಂಗ್ರೆಸ್‌ನ ಆರು ಸಂದರನ್ನು ಅಮಾನತು ಮಾಡಿದ್ದು, ಗೋಹತ್ಯೆ ನೆಪದಲ್ಲಿ ದೇಶದ ವಿವಿಧೆಡೆ ಥಳಿತ ಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಲೋಕಸಭೆಯಲ್ಲಿ ಆಗಾಗ ಗದ್ದಲ ಎಬ್ಬಿಸಿದವು. ಹೀಗಾಗಿ ಬುಧವಾರ ಮಧ್ಯಾಹ್ನದ ಬಳಿಕವೇ ಎರಡು ಬಾರಿ ಕಲಾಪವನ್ನು ಮುಂದೂಡಿದ ಘಟನೆ ನಡೆಯಿತು. ಸದನದ ಬಾವಿಗೆ ಇಳಿದು ಪ್ರತಿಭಟಿಸಿದ ಕಾಂಗ್ರೆಸ್‌ ಸಂಸದರು ಸರಕಾರದ ವಿರುದ್ಧ ಘೋಷಣೆ ಕೂಗಿದ್ದರಿಂದ ಭಾರೀ ಗದ್ದಲ ಉಂಟಾಗಿ, ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಟಾಪ್ ನ್ಯೂಸ್

1-ullal

Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

FRAUD-1

ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್‌’ ತೆರೆಯದಂತೆ ಪೊಲೀಸರ ಸೂಚನೆ

1-sun

Goa; ಸನ್ ಬರ್ನ್ ಫೆಸ್ಟಿವಲ್ ನಲ್ಲಿ ಕುಸಿದು ಬಿದ್ದು ಯುವಕ ಸಾ*ವು!

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

1-ewewq

Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sun

Goa; ಸನ್ ಬರ್ನ್ ಫೆಸ್ಟಿವಲ್ ನಲ್ಲಿ ಕುಸಿದು ಬಿದ್ದು ಯುವಕ ಸಾ*ವು!

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ullal

Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

FRAUD-1

ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್‌’ ತೆರೆಯದಂತೆ ಪೊಲೀಸರ ಸೂಚನೆ

de

Malpe: ತೆಂಕನಿಡಿಯೂರು; ತೀವ್ರ ಅಸ್ವಸ್ಥಗೊಂಡ ವ್ಯಕ್ತಿ ಸಾವು

4

Udupi: ಗಾಂಜಾ ಮಾರಾಟ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.