ಕೇಸರಿ ಭಯೋತ್ಪಾದನೆ ಆರೋಪ ಸುಳ್ಳೇ ಸುಳ್ಳು
Team Udayavani, Apr 17, 2018, 6:10 AM IST
ಹೊಸದಿಲ್ಲಿ: ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಸೇರಿದಂತೆ ಐವರು ಆರೋಪಮುಕ್ತಗೊಂಡಿದ್ದು, ಕಾಂಗ್ರೆಸ್ ಹರಡಿದ ಕೇಸರಿ ಉಗ್ರವಾದ ಎಂಬ ಆರೋಪ ಹುಸಿಯಾಗಿದೆ ಎಂದು ಬಿಜೆಪಿ ಹೇಳಿದೆ. ಯುಪಿಎ ಅಧಿಕಾರದಲ್ಲಿದ್ದಾಗ ಉದ್ದೇಶಪೂರ್ವಕವಾಗಿ ಈ ಪದಪುಂಜವನ್ನು ಹುಟ್ಟು ಹಾಕಲಾಗಿತ್ತು. ಇದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಕ್ಷಮೆ ಕೋರಬೇಕು ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆಗ್ರಹಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್‌ಗೆ ಕರ್ನಾಟಕ ವಿಧಾನಸಭೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ. ಕರ್ನಾಟಕದಲ್ಲೂ ಕಾಂಗ್ರೆಸ್ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿದೆ. ಎನ್‌ಐಎ ತನಿಖೆ ನಡೆ ಸುತ್ತಿರುವ ಪಿಎಫ್ಐ ಅನ್ನು ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯ ಓಲೈಸುತ್ತಿದ್ದಾರೆ ಎಂದೂ ಸಂಬಿತ್ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಶಿವರಾಜ್ ಪಾಟೀಲ್, ಕೇಸರಿ ಭಯೋತ್ಪಾದನೆ ಎಂಬ ಪದಪುಂಜವನ್ನು ನಮ್ಮ ಪಕ್ಷ ಸೃಷ್ಟಿಸಿರಲಿಲ್ಲ ಎಂದಿದ್ದಾರೆ. ಅಲ್ಲದೆ ಬಹುತೇಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪ್ರತಿವಾದಿ ವಕೀಲರು ಯಾವ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದನ್ನು ಮೊದಲು ನೋಡಬೇಕಿದೆ ಎಂದು ಹೇಳಿದ್ದಾರೆ. ಸ್ಫೋಟ ಸಂಭವಿಸುವಾಗ ಕೇಂದ್ರದಲ್ಲಿ ಪಾಟೀಲ್ ಗೃಹ ಸಚಿವರಾಗಿದ್ದರು. NIA ಈ ಪ್ರಕರಣವನ್ನು ಸರಿಯಾಗಿ ವಿಚಾರಣೆ ನಡೆಸಿಲ್ಲ. ಉದ್ದೇಶಪೂರ್ವಕವಾಗಿ ಪ್ರಕರಣ ಬಿದ್ದುಹೋಗುವಂತೆ NIA ಮಾಡಿದೆ. ಆರೋಪಿಗಳಿಗೆ ಜಾಮೀನು ನೀಡಿದಾಗಲೂ ಜಾಮೀನು ಹಿಂಪಡೆಯುವಂತೆ ಮನವಿ ಸಲ್ಲಿಸಿರಲಿಲ್ಲ ಎಂದು MIM ಮುಖಂಡ ಅಸಾದುದ್ದೀನ್ ಒವೈಸಿ ಆರೋಪಿಸಿದ್ದಾರೆ.
ಭದ್ರತೆ ಹೆಚ್ಚಳ: ತೀರ್ಪು ಪ್ರಕಟನೆ ಹಿನ್ನೆಲೆಯಲ್ಲಿ ಕೋಮು ಸೂಕ್ಷ್ಮ ನಗರ ಹೈದರಾಬಾದ್‌ನಲ್ಲಿ ಹಾಗೂ ವಿಶೇಷವಾಗಿ ಮೆಕ್ಕಾ ಮಸೀದಿ ಸಮೀಪ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಸುಮಾರು 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಅರೆ ಸೇನಾ ಪಡೆಯನ್ನೂ ಬಳಸಿಕೊಳ್ಳಲಾಗಿತ್ತು.
ಸಂತ್ರಸ್ತರ ಆಕ್ರಂದನ: ತೀರ್ಪು ಪ್ರಕಟವಾಗುತ್ತಿದ್ದಂತೆಯೇ ನ್ಯಾಯಾಲಯದ ಆವರಣದಲ್ಲಿದ್ದ ಸಂತ್ರಸ್ತರ ಕುಟುಂಬದವರಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಹಾಗಾದರೆ ನಮ್ಮ ಕುಟುಂಬಸ್ಥರನ್ನು ಕೊಂದವರು ಯಾರು ಎಂಬ ಪ್ರಶ್ನೆಯನ್ನು ಅವರು ಕೇಳುತ್ತಿದ್ದರು.
ಯಾವಾಗ ಏನಾಯಿತು?
ಮೇ 18, 2007: ಹೈದರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಫೋಟ, 9 ಸಾವು, 58 ಜನರಿಗೆ ಗಾಯ
ಜೂನ್ 2010: ಆರೆಸ್ಸೆಸ್ ಕಾರ್ಯಕರ್ತ ಸುನೀಲ್ ಜೋಶಿ ಆರೋಪಿ ಎಂದು ಸಿಬಿಐ ಕೇಸು ದಾಖಲು
ನವೆಂಬರ್ 2010: ಅಭಿನವ ಭಾರತ್ ಸಂಘಟನೆಯ ಸದಸ್ಯ ಸ್ವಾಮಿ ಅಸೀಮಾನಂದ ಹಾಗೂ ಇತರರನ್ನು ಬಂಧಿಸಿದ ಸಿಬಿಐ.
ಡಿಸೆಂಬರ್ 2010: ಮೆಕ್ಕಾ ಮಸೀದಿ ಸ್ಫೋಟ ನಡೆಸಿದ್ದೆ ಎಂದು ಒಪ್ಪಿಕೊಂಡ ಸಿಬಿಐ
ಏಪ್ರಿಲ್ 2011: ಸಿಬಿಐನಿಂದ NIAಗೆ ಕೇಸ್ ಹಸ್ತಾಂತರ
ಮಾರ್ಚ್ 2017: ಅಸೀಮಾನಂದಗೆ ಜಾಮೀನು, ಚಂಚಲಗುಡ ಜೈಲಿನಿಂದ ಬಿಡುಗಡೆ
ಏಪ್ರಿಲ್ 2018: ಎನ್.ಐ.ಎ. ನ್ಯಾಯಾಲಯದಿಂದ ಆರೋಪಿಗಳು ದೋಷಮುಕ್ತ
ವಿಜ್ಞಾನ ಪದವೀಧರ ಅಸೀಮಾನಂದ
ಪಶ್ಚಿಮ ಬಂಗಾಲದ ಹೂಗ್ಲಿ ಜಿಲ್ಲೆಯ ಕಮಾರ್‌ಪುಕಾರ್ ಹಳ್ಳಿಯಲ್ಲಿ ಜನಿಸಿದ ನಬಾ ಕುಮಾರ್ ಸರ್ಕಾರ್, 1970ರ ಹೊತ್ತಿಗೆ ವಿಜ್ಞಾನ ಪದವಿ ಮುಗಿಸಿದ್ದರೂ ಆಸಕ್ತಿ ಹಿಂದೂ ಸಂಘಟನೆಗಳತ್ತ ಸೆಳೆಯುತ್ತಿತ್ತು. 1980ರಲ್ಲಿ ಹಿಂದೂ ಸಂಘಟನೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡ ಅವರು, ಪುರುಲಿಯಾದಲ್ಲಿನ ವನವಾಸಿ ಕಲ್ಯಾಣ ಆಶ್ರಮಕ್ಕೆ ಸೇರಿ ಸ್ವಾಮಿ ಅಸೀಮಾನಂದ ಆದರು. 2010ರಲ್ಲಿ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಬಂಧಿಸಲ್ಪಡುತ್ತಿದ್ದಂತೆಯೇ ಇತರ ಪ್ರಕರಣಗಳಾದ ಅಜ್ಮೆರದ ಖ್ವಾಜಾ ಚಿಸ್ತಿ ಸ್ಫೋಟ ಪ್ರಕರಣ ಹಾಗೂ ಸಂಝೋತಾ ಎಕ್ಸ್ ಪ್ರಸ್ ಸ್ಫೋಟ ಪ್ರಕರಣದಲ್ಲೂ ಆರೋಪಿ ಎಂದು ಹೆಸರಿಸಲಾಯಿತು. ಈಗಾಗಲೇ ಇವರನ್ನು ಖ್ವಾಜಾ ಚಿಸ್ತಿ ಪ್ರಕರಣದಲ್ಲಿ ಖುಲಾಸೆಗೊಳಿಸಲಾಗಿದ್ದು, ಸಂಝೋತಾ ಪ್ರಕರಣದ ವಿಚಾರಣೆ ನಡೆಯುತ್ತಿದೆ. 2002ರಲ್ಲಿ ಅಕ್ಷರಧಾಮ ದೇಗುಲದ ಮೇಲೆ ದಾಳಿ ನಂತರದಲ್ಲಿ ಮುಸ್ಲಿಮರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ನಿರ್ಧರಿಸಿ, ಸ್ಫೋಟ ನಡೆಸಿದೆ ಎಂದು ಅಸೀಮಾನಂದ ತಪ್ಪೊಪ್ಪಿಕೊಂಡಿದ್ದರಾದರೂ ನಂತರ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು.
ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ ತೀರ್ಪು ನೀಡಿದ ಬೆನ್ನಲ್ಲೇ ವಿಶೇಷ NIA ಜಡ್ಜ್ ರವೀಂದ್ರ ರೆಡ್ಡಿ ರಾಜೀನಾಮೆ ನೀಡಿರುವುದು ಶಂಕಾಸ್ಪದವಾಗಿದೆ ಹಾಗೂ ಅಚ್ಚರಿಯನ್ನುಂಟು ಮಾಡಿದೆ.
– ಅಸಾದುದ್ದೀನ್ ಒವೈಸಿ, ಎಐಎಂಐಎಂ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.