2018ರಲ್ಲಿ 8 ರಾಜ್ಯಗಳಲ್ಲಿ ಚುನಾವಣೆ: 2019ರ ಸಂಸತ್ತಿಗೆ ದಿಕ್ಸೂಚಿ
Team Udayavani, Jan 1, 2018, 4:11 PM IST
ಹೊಸದಿಲ್ಲಿ : 2018ರ ಈ ಹೊಸ ವರ್ಷದಲ್ಲಿ ಎಂಟು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದ್ದು 2019ರಲ್ಲಿ ನಡೆಯುವ ಮಹಾ ಚುನಾವಣೆಗೆ ಪೂರ್ವ ಭಾವಿಯಾಗಿ ಏರ್ಪಡುವ ಸೆಮಿ ಫೈನಲ್ (ಉಪಾಂತ್ಯದ) ಮಹಾ ಕದನವೆಂದೇ ಪರಿಗಣಿತವಾಗಲಿದೆ.
2018ರಲ್ಲಿ ವಿಧಾನಸಭಾ ಚುನಾವಣೆಗಳನ್ನು ಕಾಣಲಿರುವ ರಾಜ್ಯಗಳು ಈ ಕೆಳಗಿನವು :
1. ರಾಜಸ್ಥಾನ
2. ಮಧ್ಯ ಪ್ರದೇಶ
3. ಕರ್ನಾಟಕ
4. ಛತ್ತೀಸ್‌ಗಢ
5. ನಾಗಾಲ್ಯಾಂಡ್
6. ಮೇಘಾಲಯ
7. ತ್ರಿಪುರ
8. ಮಿಜೋರಾಂ
2019ರ ಮಹಾ ಚುನಾವಣೆಯಲ್ಲಿ ಈ ಎಂಟು ರಾಜ್ಯಗಳು 99 ಸಂಸದರನ್ನು ಕಳುಹಿಸಲಿವೆ.
ಮೇಲಿನ ಎಂಟು ರಾಜ್ಯಗಳ ಪೈಕಿ ಹೆಚ್ಚಿನವುಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ದ ಹೋರಾಟ ನಡೆಯಲಿದೆ.
ಮೇಲಿನ ಎಂಟು ರಾಜ್ಯಗಳ ಪೈಕಿ ಮಧ್ಯ ಪ್ರದೇಶ, ಛತ್ತೀಸ್‌ಗಢ, ತ್ರಿಪುರ ಮತ್ತು ನಾಗಾಲ್ಯಾಂಡ್ ಬಹುತೇಕ ಬಿಜೆಪಿ ಬುಟ್ಟಿಗೆ ಬೀಳಲಿವೆ. ಆದರೆ ಕರ್ನಾಟಕವು ಬಿಜೆಪಿಗೆ ಸುಲಭದಲ್ಲಿ ಸಿಗದ ತುತ್ತು. ಇಲ್ಲಿ ಆಳುವ ಕಾಂಗ್ರೆಸ್ ಪಕ್ಷವೇ ಗಟ್ಟಿ.
ರಾಜಸ್ಥಾನ ಕೂಡ ಬಿಜೆಪಿಗೆ ಸುಲಭದಲ್ಲಿ ದಕ್ಕಲಾರದು ಎಂದೇ ಈಗ ತಿಳಿಯಲಾಗಿದೆ. ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಹೇಗೆ ಮೂರಂಕಿಯಿಂದ ಎರಡಂಕಿಗೆ ಇಳಿಯಿತೋ ಅದೇ ರೀತಿ ರಾಜಸ್ಥಾನದ ಕತೆಯೂ ಆಗಲಿದೆ ಎಂದು ತಿಳಿಯಲಾಗಿದೆ.
ರಾಜಸ್ಥಾನದಲ್ಲಿ ರೈತರ ಬಿಕ್ಕಟ್ಟು, ಯುವಕರಲ್ಲಿನ ನಿರುದ್ಯೋಗ ಮತ್ತು ಗುಜ್ಜರ್ ಚಳವಳಿಯಿಂದಾಗಿ ಬಿಜೆಪಿಗೆ ಎಡವಟ್ಟಾಗಲಿದೆ. ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗಿದೆ. ಈ ಎರಡು ರಾಜ್ಯಗಳಲ್ಲೀಗ ಸಿಎಂ ಆಗಿರುವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಮಣ್ ಸಿಂಗ್ ಅವರು ನಾಲ್ಕನೇ ಅವಧಿಗಾಗಿ ಹೋರಾಡಲಿದ್ದಾರೆ.
ಮೇಘಾಲಯದಲ್ಲಿ ಬಿಜೆಪಿ ಬಹುತೇಕ ಅಲ್ಲಿನ ನ್ಯಾಶನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಜತೆಗೆ ಚುನಾವಣಾ ಮೈತ್ರಿ ಮಾಡಿಕೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
Maha Election: ಡಿಕೆಶಿ ಸೇರಿ ಕಾಂಗ್ರೆಸ್ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.