2020ಕ್ಕೆ ದೇಶವ್ಯಾಪಿ ಎನ್‌ಪಿಆರ್
ಎಲ್ಲಾ ನಾಗರಿಕರ ಮಾಹಿತಿಗಳನ್ನು ಸಂಗ್ರಹಿಸುವ ಗುರಿ
Team Udayavani, Aug 4, 2019, 6:10 AM IST
ನವದೆಹಲಿ: ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮಾದರಿಯನ್ನೇ ದೇಶಾದ್ಯಂತ ಜಾರಿಗೊಳಿಸಲು ಸಿದ್ಧತೆ ಆರಂಭವಾಗಿದೆ. 2020ರ ಸೆಪ್ಟೆಂಬರ್‌ನ ವೇಳೆಗೆ ದೇಶದ ಎಲ್ಲಾ ನಾಗರಿಕರನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವ್ಯಾಪ್ತಿಗೆ ತರಲಾಗುತ್ತದೆ ಎಂದು ನಾಗರಿಕರ ನೋಂದಣಿ ಹಾಗೂ ಜನಗಣತಿ ರಿಜಿಸ್ಟ್ರಾರ್‌ನ ಆಯುಕ್ತರಾದ ವಿವೇಕ್ ಜೋಷಿ ಹೇಳಿದ್ದಾರೆ.
2020ರ ಏ. 1ರಿಂದ ಎನ್‌ಪಿಆರ್ ನೋಂದಣಿ ಪ್ರಕ್ರಿಯೆಯು ಆರಂಭಗೊಳ್ಳಲಿದ್ದು, ಸೆ. 30ರಂದು ಮುಕ್ತಾಯಗೊಳ್ಳಲಿದೆ. ಭಾರತದ ಪ್ರತಿ ಮಹಾನಗರ, ನಗರ, ಪಟ್ಟಣ, ಹಳ್ಳಿ ಹಾಗೂ ಹೋಬಳಿಗಳ ಮಟ್ಟದಲ್ಲಿರುವ ಎಲ್ಲಾ ನಾಗರಿಕರ ಮಾಹಿತಿಗಳು ಒಂದೇ ನೋಂದಣಿಯಲ್ಲಿ ಇರಬೇಕೆಂಬ ಆಶಯದಿಂದ ಈ ದೇಶವ್ಯಾಪಿ ಎನ್‌ಪಿಆರ್‌ಗೆ ಚಾಲನೆ ನೀಡಲಾಗುತ್ತದೆ. ಎಲ್ಲಾ ನಾಗರಿಕರ ಮಾಹಿತಿಗಳು ಅವರ ಜನಸಂಖ್ಯಾ ಮಾಹಿತಿಯಷ್ಟೇ ಆಗಿರದೆ, ಅವರ ಬಯೋಮೆಟ್ರಿಕ್ ಮಾಹಿತಿಗಳನ್ನೂ ಒಳಗೊಂಡಿರುತ್ತದೆ.
ಮಾನದಂಡ: ನಿರ್ದಿಷ್ಟ ವ್ಯಕ್ತಿಯನ್ನು ಆತನಿರುವ ನಿರ್ದಿಷ್ಟ ಪ್ರಾಂತ್ಯದಲ್ಲಿ ಕಳೆದ ಆರು ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲದಿಂದ ವಾಸವಾಗಿದ್ದಾನೆ ಅಥವಾ ಆತ ಇರುವ ಪ್ರಾಂತ್ಯದಲ್ಲಿ ಮುಂದಿನ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ನೆಲೆಸುವಂಥವನು ಎಂಬ ಎರಡು ಅಂಶಗಳ ಆಧಾರದಲ್ಲಿ ಪ್ರತಿಯೊಬ್ಬ ನಾಗರಿಕನ ನೋಂದಣಿ ಮಾಡಲಾಗುತ್ತದೆ. ಈ ನೋಂದಣಿಯಲ್ಲಿ ತೊಡಗುವ ಸಿಬ್ಬಂದಿಯು ಮನೆಯಿಂದ ಮನೆಗೆ ತೆರಳಿ ಮಾಹಿತಿಗಳನ್ನು ಪಡೆಯುತ್ತಾರೆ.
ಎಲ್ಲರ ಮಾಹಿತಿ ಒಂದೆಡೆ
ಇನ್ನು, 2003ರ ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ವಿತರಣೆ) ನಿಯಮಗಳ ಅನುಸಾರವೇ ಎನ್‌ಪಿಆರ್ ಅನ್ನು ದೇಶವ್ಯಾಪಿ ವಿಸ್ತರಿಸಲಾಗುತ್ತದೆ. ನೋಂದಣಿಗೊಂಡ ಎಲ್ಲಾ ನಾಗರಿಕರ ಮಾಹಿತಿಗಳು, ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿಯಲ್ಲಿ (ಎನ್‌ಆರ್‌ಐಸಿ) ಸಂಗ್ರಹಿಸಲಾಗುತ್ತದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ
Passes Away: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.