ಮತ್ತೆ 10 ಸಿಂಹಗಳ ಸಾವು
Team Udayavani, Oct 3, 2018, 8:35 AM IST
ರಾಜ್‌ಕೋಟ್/ಅಹಮದಾಬಾದ್: ಗುಜರಾತ್‌ನ ಗಿರ್ ಸಿಂಹ ಅಭಯಾರಣ್ಯದಿಂದ ಜಸಾಧಾರ್ ಪ್ರಾಣಿ ಸೇವಾ ಕೇಂದ್ರಕ್ಕೆ ತರಲಾಗಿದ್ದ ಹತ್ತು ಸಿಂಹಗಳು ಅಸುನೀಗಿವೆ. ಅವುಗಳೆಲ್ಲವೂ ಏಷ್ಯಾಟಿಕ್ ವಲಯಕ್ಕೆ ಸೇರಿದ ಅಪರೂಪದ ಸಿಂಹಗಳಾಗಿವೆ. ಹೀಗಾಗಿ ಇದುವರೆಗೆ ಅಸುನೀಗಿದ ಸಿಂಹಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಸೆ.20ರಿಂದ 30ರ ನಡುವಿನ ದಿನಗಳಲ್ಲಿ ಒಂದೊಂದಾಗಿ ಕೊನೆಯುಸಿರೆಳೆದಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಇದಕ್ಕೂ ಮೊದಲು ಸೆ.12ರಿಂದ 16ರ ನಡುವೆ 11 ಸಿಂಹಗಳು ಕ್ಯಾನಿ ಡಿಸ್ಟೆಂಪರ್ ವೈರಸ್ ನಿಂದಾಗಿ (ಸಿಡಿವಿ) ಅಸುನೀಗಿವೆ. ಅರಣ್ಯ ಪ್ರದೇಶದಲ್ಲಿ ನಾಯಿಗಳಿಂದಾಗಿ ಈ ವೈರಸ್ ಹರಡುತ್ತದೆ. 1994ರಲ್ಲಿ ತಾಂಜೇನಿಯಾದಲ್ಲಿರುವ ಸೆರೆಂಗೆಟಿ ಸಿಂಹ ಅಭಯಾರಣ್ಯದಲ್ಲಿ ಇದೇ ವೈರಸ್‌ನಿಂದಾಗಿ 1 ಸಾವಿರ ಸಿಂಹಗಳು ಸಾವಿಗೀಡಾಗಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ನಾಯಿಗಳು, ದನಗಳು, ಹುಲ್ಲುಗಾವಲುಗಳಲ್ಲಿರುವ ಉಣ್ಣಿಯಿಂದ (ticks) ಈ ಸೋಂಕು ಹಬ್ಬುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೆಮಾರ್ಡಿಯಿಂದ 31 ಸಿಂಹಗಳನ್ನು ಜಂವಾಲಾ ಸಂರಕ್ಷಣಾ ಕೇಂದ್ರಕ್ಕೆ ವರ್ಗಾಯಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.