ಶಿಂಧೆ ಬಣದಲ್ಲೇ ಬಿರುಕು; ಶೀಘ್ರದಲ್ಲೆ ಬಿಜೆಪಿ ಸೇರಲಿದ್ದಾರೆ 22 ಶಾಸಕರು: ಏನಿದು ವರದಿ?
Team Udayavani, Oct 24, 2022, 9:55 AM IST
ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ತನ್ನ ಮುಖವಾಣಿ ಸಾಮ್ನಾದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸೇನೆಯ 40 ಶಾಸಕರ ಪೈಕಿ 22 ಶಾಸಕರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದೆ.
ಏಕನಾಥ್ ಶಿಂಧೆ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದು ಬಿಜೆಪಿ ಮಾಡಿದ ‘ತಾತ್ಕಾಲಿಕ ವ್ಯವಸ್ಥೆ’ ಎಂದು ತನ್ನ ಸಾಪ್ತಾಹಿಕ ಅಂಕಣದಲ್ಲಿ ಬರೆಯಲಾಗಿದೆ.
“ಅವರ ಮುಖ್ಯಮಂತ್ರಿ ಸಮವಸ್ತ್ರವನ್ನು ಯಾವಾಗ ಬೇಕಾದರೂ ತೆಗೆಯಲಾಗುವುದು ಎಂದು ಈಗ ಎಲ್ಲರಿಗೂ ಅರ್ಥವಾಗಿದೆ. ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಶಿಂಧೆ ಅವರ ಗುಂಪು ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿತ್ತು. ಆದರೆ ಅದನ್ನು ತಪ್ಪಿಸಿದ್ದು ಬಿಜೆಪಿ” ಎಂದು ಸಾಮ್ನಾದಲ್ಲಿನ ರೋಕ್‌ಥೋಕ್ ಅಂಕಣದಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಮಠದಲ್ಲೇ ನೇಣು ಬಿಗಿದುಕೊಂಡು ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ! ಕಾರಣ ನಿಗೂಢ
“ಮಹಾರಾಷ್ಟ್ರದ ಗ್ರಾಮ ಪಂಚಾಯಿತಿ ಮತ್ತು ಸರಪಂಚ್ ಚುನಾವಣೆಯಲ್ಲಿ ಶಿಂಧೆ ಬಣದ ಯಶಸ್ಸಿನ ಹೇಳಿಕೆ ಸುಳ್ಳು. ಶಿಂಧೆ ಗುಂಪಿನ ಕನಿಷ್ಠ 22 ಶಾಸಕರು ಅಸಮಾಧಾನಗೊಂಡಿದ್ದಾರೆ. ಈ ಬಹುಪಾಲು ಶಾಸಕರು ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದ್ದಾರೆ” ಎಂದು ಅಂಕಣದಲ್ಲಿ ಹೇಳಲಾಗಿದೆ.
ಶಿಂಧೆಯವರು ತನಗೆ ಮತ್ತು ಮಹಾರಾಷ್ಟ್ರಕ್ಕೆ ದೊಡ್ಡ ಹಾನಿಯನ್ನು ಉಂಟು ಮಾಡಿದ್ದಾರೆ. ರಾಜ್ಯವು ಅವರನ್ನು ಕ್ಷಮಿಸುವುದಿಲ್ಲ. ಬಿಜೆಪಿ ತಮ್ಮ ಲಾಭಕ್ಕಾಗಿ ಶಿಂಧೆ ಅವರನ್ನು ಇನ್ನೂ ಬಳಸಿಕೊಳ್ಳುತ್ತದೆ’ ಎಂದು ಉದ್ಧವ್ ನೇತೃತ್ವದ ಸೇನೆ ತನ್ನ ಮುಖವಾಣಿಯಲ್ಲಿ ಹೇಳಿಕೊಂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.