ರೇವ್ ಪಾರ್ಟಿಗೆ ಪೊಲೀಸರ ದಾಳಿ; ಡ್ರಗ್ಸ್ ನಶೆ ಹೆಚ್ಚಾಗಿ ಕುಸಿದು ಬಿದ್ದ ಯುವಕ ಸಾವು
Team Udayavani, May 23, 2022, 2:38 PM IST
ಚೆನ್ನೈ ರೇವ್ ಪಾರ್ಟಿಯ ಚಿತ್ರ
ಚೆನ್ನೈ: ಪಾರ್ಟಿಯೊಂದರಲ್ಲಿ ಮಾದಕ ವಸ್ತು ಸೇವಿಸಿದ 23 ವರ್ಷದ ಯುವಕನೋರ್ವ ಪ್ರಜ್ಞೆ ತಪ್ಪಿ ಬಿದ್ದಿದ್ದು, ಬಳಿಕ ಸಾವನ್ನಪ್ಪಿದ ಘಟನೆ ಚೆನ್ನೈನಲ್ಲಿ ನಡೆದಿದೆ,
ಶನಿವಾರ ರೇವ್ ಪಾರ್ಟಿಯಲ್ಲಿ ಯುವಕ ಕುಸಿದು ಬಿದ್ದಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಾಗಿತ್ತು. ಆದರೆ ಮರುದಿನ ಆತ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಾದಕ ವಸ್ತು ಸೇವನೆಯಿಂದ ಮೃತಪಟ್ಟಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ವ್ಯಕ್ತಿಯನ್ನು ಚೆನ್ನೈನ ಮಡಿಪಕ್ಕಂನ ಎಸ್.ಪ್ರವೀಣ್ ಎಂಬ ಟೆಕ್ಕಿ ಎಂದು ಗುರುತಿಸಲಾಗಿದೆ.
ಚೆನ್ನೈನ ಅಣ್ಣಾ ನಗರದ ವಿಆರ್ ಮಾಲ್ ನಲ್ಲಿ ಈ ರೇವ್ ಪಾರ್ಟಿ ನಡೆಸಲಾಗಿತ್ತು. ಗ್ರೇಟ್ ಇಂಡಿಯನ್ ಗ್ಯಾದರಿಂಗ್ ಎಂಬ ಕಂಪನಿ ಈ ಪಾರ್ಟಿ ಆಯೋಜಿಸಿತ್ತು.
ಇದನ್ನೂ ಓದಿ:ಪರಿಚಯಸ್ಥ ಮಹಿಳೆಯ ಫೋಟೋ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್: ಆರೋಪಿ ಸೆರೆ
ಪಾರ್ಟಿಯಲ್ಲಿ ಡ್ರಗ್ ನಶೆ ಮಿತಿಮೀರಿ ಪ್ರವೀಣ್ ಕುಸಿದು ಬಿದ್ದ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅನುಮತಿಯಿಲ್ಲದೆ ಮದ್ಯ ಹಂಚಿಕೆ ಮಾಡುತ್ತಿರುವುದು ಪತ್ತೆಯಾಗಿತ್ತು. ಅಲ್ಲದೆ ಹೆಚ್ಚುವರಿಯಾಗಿ, ಸುಮಾರು 90 ಅಪ್ರಾಪ್ತ ವಯಸ್ಕರಿಗೆ ಮದ್ಯ ಕುಡಿಸಲಾಗಿತ್ತು.
ಪಾರ್ಟಿ ಆಯೋಜಕರು ಬೇರೆ ಬಾರ್ ನ ಲೈಸನ್ಸ್ ನ್ನು ಈ ಮಾಲ್ ನಲ್ಲಿ ಉಪಯೋಗಿಸಿ ಮದ್ಯ ಹಂಚಿಕೆ ಮಾಡಿದ್ದರು. ಒಟ್ಟು 884 ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.