ಭಕ್ತರಿಂದ ಟಿಪ್ಸ್:ತಿರುಪತಿಯಲ್ಲಿ 243 ಕ್ಷೌರಿಕರು ಸಸ್ಪೆಂಡ್
Team Udayavani, Oct 15, 2017, 10:06 AM IST
ಚಿತ್ತೂರು : ದೇಶದ ಅತ್ಯಂತ ಶ್ರೀಮಂತ ದೇವಾಲಯ ತಿರುಪತಿಯಲ್ಲಿ ಭಕ್ತರಿಗೆ ಕ್ಷೌರ ಮಾಡಿಸಿದ್ದಕ್ಕೆ ಟಿಪ್ಸ್ ಪಡೆಯುತ್ತಿದ್ದ 243 ಕ್ಷೌರಿಕರನ್ನು ಟಿಟಿಡಿ ಆಡಳಿತ ಮಂಡಳಿ ನೊಟೀಸ್ ನೀಡಿ ವಜಾ ಮಾಡಿದೆ. ಈ ಕ್ರಮದ ವಿರುದ್ಧ ಕ್ಷೌರಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
943 ಕೌÒರಿಕರನ್ನು ಕಾಂಟ್ರಾಕ್ಟ್ ಮೂಲಕ ನೇಮಕ ಮಾಡಿಕೊಳ್ಳಲಾಗಿತ್ತು. ದೇವಾಲಯದ ಸಮೀಪದಲ್ಲಿರುವ ಕಲ್ಯಾಣ ಕಟ್ಟದಲ್ಲಿ ಭಕ್ತರಿಗೆ ಕ್ಷೌರ ಮಾಡಿಸಲಾಗುತ್ತಿತ್ತು. ಭಕ್ತರು ರಸೀದಿ ಮಾಡಿಸಿಕೊಂಡು ಕ್ಷೌರ ಮಾಡಿಕೊಳ್ಳುತ್ತಿದ್ದರು, ರಸೀದಿ ಮಾಡಿದ ಹೊರತಾಗಿಯೂ ಹೆಚ್ಚುವರಿ 10 ರೂಪಾಯಿಯಿಂದ 50 ರೂಪಾಯಿಯ ವರೆಗೆ ಹಣ ಪೀಕುತ್ತಿದ್ದ ಕ್ಷೌರಿಕರನ್ನು ವಜಾ ಮಾಡಲಾಗಿದೆ ಎಂದು ಟಿಟಿಡಿ ಆಡಳಿತ ಮಂಡಳಿ ಹೇಳಿದೆ.
ವಜಾ ಗೊಂಡ ಕ್ಷೌರಿಕರು ಟಿಟಿಡಿ ಕಚೇರಿ ಎದುರು ಪ್ರತಿಭಟನೆಗಿಳಿದಿದ್ದು, ನಮ್ಮ ಜೀವನೋಪಾಯಕ್ಕಿದ್ದ ಉದ್ಯೋಗದಿಂದ ವಜಾ ಮಾಡಿರುವುದರಿಂದ ದಿಕ್ಕು ತೋಚದಂತಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.