Airports; 25 ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ: ಸಂಸ್ಥೆಗಳಿಗೆ ಭಾರೀ ನಷ್ಟ
Team Udayavani, Oct 21, 2024, 6:40 AM IST
ಮುಂಬಯಿ / ಹೊಸದಿಲ್ಲಿ: ವಿಮಾನ ಗಳಿಗೆ ಹುಸಿಬಾಂಬ್ ಬೆದರಿಕೆ ಒಡ್ಡುವ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿದ್ದು, ರವಿವಾರವೂ 25 ವಿಮಾನ ಗಳಿಗೆ ಬೆದರಿಕೆ ಒಡ್ಡಲಾಗಿದೆ. ಇದರಿಂದಾಗಿ ಪ್ರಯಾಣದಲ್ಲಿ ವ್ಯತ್ಯಯವಾಗಿದ್ದು, ಜನರು ಪರದಾಡುವಂತಾಗಿದೆ. ರವಿ ವಾರದ ವರೆಗೆ ಒಟ್ಟು 90 ವಿಮಾನಗಳು ಹುಸಿ ಕರೆಗಳ ಸಮಸ್ಯೆಗಳನ್ನು ಎದುರಿಸಿವೆ. ಈ ಹುಸಿ ಬೆದರಿಕೆಗಳಿಂದ ವಿಮಾನ ಯಾನ ಸಂಸ್ಥೆಗಳಿಗೆ ಭಾರೀ ನಷ್ಟ ಉಂಟಾಗುತ್ತಿದೆ.
ರವಿವಾರ ಇಂಡಿಗೋ, ವಿಸ್ತಾರ, ಅಕಾಸ ಏರ್ ಮತ್ತು ಏರಿಂಡಿಯಾ ಸಂಸ್ಥೆಗಳ ತಲಾ 6 ವಿಮಾನಗಳಿಗೆ ಬೆದರಿಕೆ ಕರೆಗಳು ಬಂದಿವೆ. ನಮ್ಮ ಪ್ರಯಾಣಿಕರು ಮತ್ತು ಸಿಬಂದಿಯ ಸುರಕ್ಷೆ ಹಾಗೂ ಭದ್ರತೆ ನಮ್ಮ ಆದ್ಯತೆಯಾಗಿದೆ. ಮಾರ್ಗಸೂಚಿ ಪ್ರಕಾರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಇಂಡಿಗೊ ಸಂಸ್ಥೆ ಹೇಳಿದೆ.
ಹುಸಿ ಸಂದೇಶಗಳ ಬಗ್ಗೆ ಮುಂಬಯಿ ಮತ್ತು ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿ ದ್ದಾರೆ. ಸುಳ್ಳು ಸಂದೇಶ ಕಳುಹಿಸು ವವರನ್ನು ನೋ ಫ್ಲೈ ಪಟ್ಟಿಗೆ ಸೇರ್ಪಡೆ ಮಾಡಲು ಸರಕಾರ ಚಿಂತನೆ ನಡೆಸಿದೆ.
ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ: ದೂರು
ಮಂಗಳೂರು: ದೇಶದ ವಿವಿಧ ಭಾಗಗಳ ಏರ್ ಇಂಡಿಯಾ ವಿಮಾನಗಳಿಗೆ ರವಿವಾರ ಟ್ವಿಟರ್ ಖಾತೆಯಲ್ಲಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಅದರಲ್ಲಿ ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬಾೖಗೆ ರವಿವಾರ ಪ್ರಯಾಣಿಸಿದ ವಿಮಾನವೂ ಸೇರಿತ್ತು.
ಮಧ್ಯಾಹ್ನ 12.35ರ ಸುಮಾರಿಗೆ ಈ ಬಾಂಬ್ ಬೆದರಿಕೆಯ ಸಂದೇಶ ಟ್ವಿಟರ್‌ನಲ್ಲಿ ಹಾಕಲಾಗಿದ್ದು, “ಸಿಝೋಫರ್ನಿಯಾ 111′ ಎನ್ನುವ ಖಾತೆಯಿಂದ ಸಂದೇಶ ಬಂದಿದೆ. ದೇಶದ ವಿವಿಧಡೆಯ 6 ಏರ್ ಇಂಡಿಯಾ ವಿಮಾನಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು. ಮಂಗಳೂರಿನ ಏರ್‌ಇಂಡಿಯಾ ಸಿಬಂದಿ 1.30ರ ವೇಳೆಗೆ ಸಂದೇಶ ಗಮನಿಸಿದ್ದಾರೆ. ತತ್‌ಕ್ಷಣ ಈ ಬಗ್ಗೆ ಬಜಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆತಂಕವಾದಿಗಳು ಬೆದರಿಕೆ ಹಾಕಿದ್ದ ವಿಮಾನ ಬೆಳಗ್ಗೆ 9.30ರ ಹೊರಟು ಮಂಗಳೂರಿನಿಂದ ಹೊರಟು 1 ಗಂಟೆಯ ಸುಮಾರಿಗೆ ವೇಳೆಗೆ ದುಬಾೖಯಲ್ಲಿ ಇಳಿದಿದೆ. ವಿಮಾನದಲ್ಲಿ ಯಾವುದೇ ಅನಾಹುತಕಾರಿ ವಸ್ತು ಪತ್ತೆಯಾಗಿಲ್ಲ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಿಲ್ದಾಣಕ್ಕೂ ಹಲವು ಬಾರಿ ಬೆದರಿಕೆ ಇಮೇಲ್
ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಲವು ಬಾರಿ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಕಳೆದ ಜೂನ್ 18ರ ಮಂಗಳವಾರ ಮಧ್ಯಾಹ್ನ 12.43ಕ್ಕೆ ವಿಮಾನ ನಿಲ್ದಾಣದ ಇಮೇಲ್ ಐಡಿಗಳಿಗೆ ಬಂದಿರುವ ಸಂದೇಶದಲ್ಲಿ, ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದು, ಕೆಲವೇ ಕ್ಷಣದಲ್ಲಿ ಸ್ಫೋಟಗೊಳ್ಳಲಿದೆ ಎನ್ನುವ ತಿಳಿಸಲಾಗಿತ್ತು. ಎಪ್ರಿಲ್ 29ರಂದು ಮಂಗಳೂರು ವಿಮಾನ ನಿಲ್ದಾಣ ಪ್ರಾ ಧಿಕಾರದ ಕಚೇರಿಗೆ ಬೆದರಿಕೆ ಇ-ಮೇಲ್ ಬಂದಿತ್ತು. ಟೆರರೈಜರ್ಸ್ 111 ಸಂಘಟನೆಯ ಹೆಸರಿನಲ್ಲಿ ಇಮೇಲ್ ಸಂದೇಶ ಬಂದಿತ್ತು. 2023ರ ಡಿ. 26ರಂದು ರಾತ್ರಿ 11.59ಕ್ಕೆ ದೂ xಟnಟcಜಿkಟnಟcಜಿ10ಃಚಿಛಿಛಿಚಿlಛಿ. cಟಞ ಹೆಸರಿನ ಇ ಮೇಲ್ ನಿಂದ ಬೆದರಿಕೆ ಸಂದೇಶ ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ
Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್
Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
MUST WATCH
ಹೊಸ ಸೇರ್ಪಡೆ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Kollywood: ಯೂಟ್ಯೂಬ್ ವಿಮರ್ಶೆ ಬ್ಯಾನ್ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.