250 km per hour; ಶೀಘ್ರದಲ್ಲೇ ಬುಲೆಟ್ ರೈಲಿನಲ್ಲೂ ಆತ್ಮನಿರ್ಭರತೆ!
Team Udayavani, Apr 20, 2024, 6:42 AM IST
ಹೊಸದಿಲ್ಲಿ: ಬುಲೆಟ್ ಟ್ರೈನ್‌ಗಾಗಿ ಜಪಾನ್ ಮತ್ತಿತರ ದೇಶಗಳ ತಂತ್ರ ಜ್ಞಾನಗಳನ್ನು ಅವಲಂಬಿಸುವುದರ ಬದಲು ಭಾರತದಲ್ಲೇ ಅದನ್ನು ನಿರ್ಮಿಸಿದರೆ?ಹೌದು. ಬುಲೆಟ್ ರೈಲಿನಲ್ಲೂ “ಆತ್ಮನಿರ್ಭರತೆ’ ಸಾಧಿಸುವತ್ತ ಭಾರತ ಈಗ ಹೆಜ್ಜೆಯಿಡುತ್ತಿದೆ. ಗಂಟೆಗೆ 250 ಕಿ.ಮೀ.ಗಿಂತ ವೇಗವಾಗಿ ಸಂಚರಿಸುವ ರೈಲನ್ನೇ ದೇಶದಲ್ಲೇ ನಿರ್ಮಿಸುವ ಪ್ರಕ್ರಿಯೆ ನಡೆಯುತ್ತಿರುವುದಾಗಿ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ವಂದೇ ಭಾರತ್ ಮಾದರಿಯಲ್ಲೇ ಚೆನ್ನೈಯ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ದೇಶೀಯ ಬುಲೆಟ್ ರೈಲಿನ ವಿನ್ಯಾಸವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತದಲ್ಲಿ ಸದ್ಯ ಸಂಚರಿಸು ತ್ತಿರುವ ಎಲ್ಲ ರೈಲುಗಳಿಗಿಂತಲೂ ಹೆಚ್ಚಿನ ವೇಗವನ್ನು ಇದು ಹೊಂದಿರಲಿದೆ. ಪ್ರಸ್ತುತ ವಂದೇ ಭಾರತ್ ರೈಲು ಗಂಟೆಗೆ ಗರಿಷ್ಠ 220 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ. ಮೇಡ್ ಇನ್ ಇಂಡಿಯಾ ಬುಲೆಟ್ ರೈಲಿನ ವೇಗ ಗಂಟೆಗೆ 250 ಕಿ.ಮೀ.ಗಿಂತ ಹೆಚ್ಚಿರಲಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇವುಗಳು ಉತ್ತರ, ದಕ್ಷಿಣ ಮತ್ತು ಪೂರ್ವ ಕಾರಿಡಾರ್‌ಗಳಲ್ಲಿ ಸಂಚರಿಸಲಿವೆ ಎಂದೂ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.