ಮುಂಬಯಿ ವಿಮಾನ ನಿಲ್ದಾಣ ರನ್‌ವೇ ದುರಸ್ತಿ: 255 ಹಾರಾಟ ಬಾಧಿತ
Team Udayavani, Oct 23, 2018, 7:34 PM IST
ಮುಂಬಯಿ : ಮುಂಬಯಿ ವಿಮಾನ ನಿಲ್ದಾಣದಲ್ಲಿ ಎರಡೂ ರನ್ ವೇಗಳನ್ನು ಆರು ತಾಸುಗಳ ಕಾಲ ನಿರ್ವಹಣಾ ಕಾರ್ಯಕ್ಕೆಂದು ಮುಚ್ಚಿದ ಪರಿಣಾಮವಾಗಿ ಸುಮಾರು 255 ವಿಮಾನ ಹಾರಾಟಗಳು ಬಾಧಿತವಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಅತೀ ದಟ್ಟನೆಯ ಎರಡನೇ ವಿಮಾನ ನಿಲ್ದಾಣವಾಗಿರುವ ಮುಂಬಯಿ ವಿಮಾನ ನಿಲ್ದಾಣದ ಪ್ರೈಮರಿ ಮತ್ತು ಸೆಕೆಂಡರಿ ರನ್ ವೇಗಳನ್ನು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ನಿರ್ವಹಣ ಕಾರ್ಯಗಳ ನಿಮಿತ್ತ ಮುಚ್ಚಲಾಗಿತ್ತು.
ಸಂಜೆ 5 ಗಂಟೆಯ ಬಳಿಕ ವಿಮಾನ ಹಾರಾಟಗಳು ಮಾಮೂಲಿಯಂತೆ ನಡೆಯಲಾರಂಭಿಸಿದವು. ಮುಂಬಯಿಯ ಛತ್ರಪತಿ ಶಿವಾಜಿ ಇಂಟರ್‌ನ್ಯಾಶನಲ್ ಏರ್ ಪೋರ್ಟ್ ದಿನವಹಿ ಸರಾಸರಿ 1,000 ವಿಮಾನ ಹಾರಾಟಗಳನ್ನು ನಿರ್ವಹಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.