ಚತ್ತೀಸ್ ಗಢದ ದಂತೇವಾಡದಲ್ಲಿ 27 ನಕ್ಷಲರ ಶರಣಾಗತಿ
Team Udayavani, Nov 1, 2020, 8:13 PM IST
ರಾಯ್ ಪುರ: ಚತ್ತೀಸ್ ಗಢದ ದಂತೇವಾಡದಲ್ಲಿ 27 ನಕ್ಷಲರು ಪೊಲೀಸರಿಗೆ ಶರಣಾಗತರಾಗಿದ್ದಾರೆ. ಇವರಲ್ಲಿ ಐವರ ಸುಳಿವು ಕೊಟ್ಟವರಿಗೆ ಪೊಲೀಸರು ಈ ಹಿಂದೆ ನಗದು ಬಹುಮಾನವನ್ನೂ ಕೂಡ ಘೋಷಿಸಿದ್ದರು.
ಮಾವೋವಾದಿ ಸಿದ್ದಾಂತಗಳಿಂದ ಬೇಸತ್ತು ಈ 29 ಮಂದಿ ನಕ್ಷಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಜೂನ್ ನಲ್ಲಿ ನಕ್ಷಲರ ಪುನರ್ವಸತಿಗಾಗಿ ‘ಲಾನ್ ವರ್ರಾಟು’ ( ಗ್ರಾಮ/ ಮನೆಗಳಿಗೆ ಹಿಂದಿರುಗಿ) ಎಂಬ ಯೋಜನೆಯನ್ನು ಪೊಲೀಸರು ರೂಪಿಸಿದ್ದರು. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಒಟ್ಟಾರೆ 177 ನಕ್ಷಲರು ಶರಣಾಗಿದ್ದರು.
ಭಾನುವಾರ (ನ.1) 6 ಮಹಿಳೆಯರು ಸೇರಿದಂತೆ ಸುಮಾರು 27 ಮಂದಿ ಬಾರ್ಸೂರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಇವರಲ್ಲಿ 11 ಮಂದಿ ಗುಫಾ ಗ್ರಾಮಕ್ಕೆ ಸೇರಿದವರು. 7 ಜನರು ಬೆದ್ಮಾ, ಐವರು ಮಂಗ್ನಾರ್, ಮೂವರು ಹಿತವಾಡ, ಓರ್ವ ಹಂದ್ವಾಡ ಗ್ರಾಮದ ನಿವಾಸಿಗಳು ಎಂದು ದಾಂತೇವಾಡ ಎಸ್ ಪಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಜ್ಬುಲ್ ಸಂಘಟನೆಯ ಕಾಶ್ಮೀರ ಮುಖ್ಯಸ್ಥನನ್ನು ಎನ್ ಕೌಂಟರ್ ಮೂಲಕ ಹತ್ಯೆಗೈದ ಭದ್ರತಾಪಡೆಗಳು
ಈ 27 ಮಂದಿ ಕೂಡ ದಂಡಕಾರಾಣ್ಯ ಅದಿವಾಸಿ ಕಿಸಾನ್ ಮಸ್ದೂರ್ ಸಂಘ, ಕ್ರಾಂತಿಕಾರಿ ಮಹಿಳಾ ಅದಿವಾಸಿ ಸಂಘ ಮುಂತಾದ ಸಂಘಗಳ ಸಕ್ರಿಯ ಸದಸ್ಯರಾಗಿದ್ದರು. ಇವರು ಪೊಲೀಸರ ಮೇಲೆ ದಾಳಿ ಪ್ರಕರಣದಲ್ಲಿ ಹಾಗೂ ಐಇಡಿ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದರು. ಇವರಲ್ಲಿ ಐವರ ಸುಳಿವು ನೀಡಿದವರಿಗೆ ಪೊಲೀಸರು ಈ ಹಿಂದೆ 1 ಲಕ್ಷ ಬಹುಮಾನ ಘೋಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
MUST WATCH
ಹೊಸ ಸೇರ್ಪಡೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.