![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Sep 2, 2023, 4:56 PM IST
ಹೊಸದಿಲ್ಲಿ: ಇಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಸ್ಥಳದಲ್ಲಿ ಸ್ಥಾಪಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ‘ನಟರಾಜ’ನ ಪ್ರತಿಮೆಯು ಆಕರ್ಷಣೆಯ ಕೇಂದ್ರ ಬಿಂದುವಾಗಿ ಬೃಹತ್ ಜನಸಮೂಹವನ್ನು ಸೆಳೆಯುವ ನಿರೀಕ್ಷೆಯಿದೆ.
ಪೀಠ ಸೇರಿದಂತೆ 28 ಅಡಿ ಎತ್ತರದ ಈ ಪ್ರತಿಮೆಯನ್ನು ಪ್ರಾಚೀನ ಚೋಳರ ಕಂಚಿನ ತಯಾರಿಕೆಗೆ ಬಳಸಲಾಗಿದ್ದ ಲೋಹ ಎರಕದ ಪ್ರಾಚೀನ ಲಾಸ್ಟ್-ವ್ಯಾಕ್ಸ್ ತಂತ್ರವನ್ನು ಬಳಸಿ ತಯಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
“ಜಿ 20 ನಾಯಕರ ಶೃಂಗಸಭೆಯು ಸೆಪ್ಟೆಂಬರ್ 9-10 ರವರೆಗೆ ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾದ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರವಾದ ‘ಭಾರತ್ ಮಂಟಪ’ದಲ್ಲಿ ನಡೆಯಲಿದ್ದು, ಕ್ಯಾಂಪಸ್‌ನಲ್ಲಿ ನಟರಾಜನ ಅತ್ಯಂತ ಎತ್ತರದ ಪ್ರತಿಮೆಯನ್ನು ಸ್ಥಾಪಿಸುತ್ತಿದ್ದೇವೆ” ಎಂದು ಮೂಲವೊಂದು ತಿಳಿಸಿದೆ.
ಪ್ರಗತಿ ಮೈದಾನಕ್ಕೆ ಎದುರಾಗಿರುವ ಮಥುರಾ ರಸ್ತೆಯನ್ನು ವಿಷಯಾಧಾರಿತ ಪೋಸ್ಟರ್‌ಗಳು, ಕಲಾತ್ಮಕ ಲೋಗೊಗಳು ಮತ್ತು G20 ಸದಸ್ಯ ರಾಷ್ಟ್ರಗಳ ಧ್ವಜಗಳಿಂದ ಅಲಂಕರಿಸಲಾಗಿದೆ.ಶೃಂಗಸಭೆಯ ಆರಂಭಿಕ ದಿನದಂದು, ಸಂಸ್ಕೃತಿ ಸಚಿವಾಲಯವು ರೂಪಿಸಿರುವ ‘ಸಂಸ್ಕೃತಿ ಕಾರಿಡಾರ್’ ಅನ್ನು ಭಾರತ ಮಂಟಪದಲ್ಲಿ ಅನಾವರಣಗೊಳಿಸಲಾಗುತ್ತದೆ.
‘ಸಂಸ್ಕೃತಿ ಕಾರಿಡಾರ್’ ಪರಿಕಲ್ಪನೆಯು ಎಲ್ಲಾ 29 ದೇಶಗಳಿಂದ “ಉತ್ತಮ ಮತ್ತು ಅತ್ಯಮೂಲ್ಯವಾದ ಕಲಾಕೃತಿಗಳನ್ನು ಒಂದೇ ಜಾಗದಲ್ಲಿ ತರುವುದಾಗಿದ್ದು ಅದು ಜಿ 20 ನ ವಿಷಯವಾದ ವಸುಧೈವ ಕುಟುಂಬಕಂನ ಸಾರವನ್ನು ಸೂಚಿಸುತ್ತದೆ. ಕಾರಿಡಾರ್ ಸಂಸ್ಕೃತಿಯು ಎಲ್ಲರನ್ನು ಒಂದುಗೂಡಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.