2ಜಿ ಹಗರಣ: ಎಲ್ಲರ ಖುಲಾಸೆ
Team Udayavani, Dec 22, 2017, 6:00 AM IST
ಹೊಸದಿಲ್ಲಿ: ಹೆಚ್ಚು ಕಡಿಮೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಭಾರೀ ಸೋಲಿಗೆ ಕಾರಣವಾಗಿದ್ದ, ಇಡೀ ದೇಶದ ಪ್ರತಿಯೊಬ್ಬರೂ ಚರ್ಚಿಸಿದ ಬಹುದೊಡ್ಡ “2ಜಿ ಸ್ಪೆಕ್ಟ್ರಂ’ ಹಗರಣ ಕೋರ್ಟ್‌ನಲ್ಲಿ ಬಿದ್ದು ಹೋಗಿದೆ.
ಡಿಎಂಕೆ ನಾಯಕರಾದ ಎ. ರಾಜಾ ಮತ್ತು ಕನ್ನಿಮೋಳಿ ಸಹಿತ 19 ಆರೋಪಿ ಗಳನ್ನು ನಿರಪರಾಧಿ ಎಂದು ಘೋಷಿಸಿರುವ ಸಿಬಿಐ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಒ.ಪಿ. ಸೈನಿ, ಇದೊಂದು ಹಗರಣವೇ ಅಲ್ಲ ಎಂದು ತೀರ್ಪು ನೀಡಿದ್ದಾರೆ. ಕಳೆದ ಏಳು ವರ್ಷಗಳಿಂದ ಪ್ರತಿದಿನವೂ ಸಿಬಿಐ ಏನಾದರೂ ಸಾಕ್ಷ é ತಂದುಕೊಡುತ್ತದೆ ಎಂದು ಕಾದುಕುಳಿತಿದ್ದೆ. ಆದರೆ ಕೇಂದ್ರ ತನಿಖಾ ಸಂಸ್ಥೆ ಯಾವುದೇ ಸಾಕ್ಷ é ನೀಡುವಲ್ಲಿ ವಿಫಲ ವಾಗಿದ್ದು, 19 ಮಂದಿ ಮೇಲಿನ ಯಾವುದೇ ಆರೋಪವೂ ಸಾಬೀತಾಗಿಲ್ಲ ಎಂದು ನ್ಯಾ| ಸೈನಿ ಅವರು ಸಿಬಿಐಗೆ ಝಾಡಿಸಿದ್ದಾರೆ.
2014ರ ಲೋಕಸಭೆ ಚುನಾವಣೆ ವೇಳೆ
ಬಿಜೆಪಿ ಇದೇ ಹಗರಣವನ್ನೇ ಮುಂದಿಟ್ಟು ಕೊಂಡು ಯುಪಿಎ-2ರ ವಿರುದ್ಧ ವಾಕ್ಸಮರ ವನ್ನೇ ನಡೆಸಿತ್ತು. ಜತೆಗೆ ಈ ಹಗರಣದ ಕಾರಣದಿಂದಾಗಿಯೇ ಕಾಂಗ್ರೆಸ್ ಕೂಡ ಆರೋಪ ಎದುರಿಸಿ ತೀರಾ ಕಳಪೆಯಾಗಿಯೇ ಸೋಲನುಭವಿಸಿತ್ತು. ಈಗ ಸಿಬಿಐ ಕೋರ್ಟ್‌ನ ತೀರ್ಪು ಹೊರಬಂದ ತತ್‌ಕ್ಷಣ, ಕಾಂಗ್ರೆಸ್ ನಾಯಕರು ಹಗರಣವೇ ಆಗಿಲ್ಲವೆಂಬ ತಮ್ಮ ಮಾತಿಗೆ ಈಗ ಪುಷ್ಠಿ ದೊರೆತಿದೆ ಎಂದು ಹೇಳಿದ್ದಾರೆ. ಯುಪಿಎ ಸರಕಾರದ ವಿರುದ್ಧ ಬಿಜೆಪಿ ಅಪಪ್ರಚಾರ ನಡೆಸಿತು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ದೂರಸಂಪರ್ಕ ಇಲಾಖೆ ಮಾಜಿ ಸಚಿವ ಕಪಿಲ್ ಸಿಬಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಳಗ್ಗೆಯೇ ತೀರ್ಪು ಹೊರಬೀಳುವ ಸಲುವಾಗಿ ಪಟಿಯಾಲಾ ಹೌಸ್‌ನಲ್ಲಿರುವ ಕೋರ್ಟ್ ರೂಂನಲ್ಲಿ ಜನಸ್ತೋಮವೇ ನೆರೆದಿತ್ತು. ವಿಚಿತ್ರ ವೆಂದರೆ 19 ಮಂದಿ ಆರೋಪಿಗಳಿಗೇ ಕೋರ್ಟ್‌ನ ಒಳಗೆ ಬರಲು ಜಾಗವಿರದಷ್ಟು ಜನ ತುಂಬಿಕೊಂಡಿದ್ದರು. ಈ ಸಂದರ್ಭದಲ್ಲೇ ಒಂದು ವಾಕ್ಯದ ತೀರ್ಪು ಪ್ರಕಟಿಸಿದ ನ್ಯಾ| ಒ.ಪಿ. ಸೈನಿ ಅವರು, “ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ತನ್ನ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಲು ನನಗೆ ಯಾವುದೇ ಮುಜುಗರವಿಲ್ಲ’ ಎಂದರು. ಒಟ್ಟು 1,552 ಪುಟಗಳ ತೀರ್ಪು ಪ್ರಕಟಿಸಿದ ಅವರು, ಉದ್ದೇಶ ಪೂರ್ವಕವಾಗಿಯೇ ಕೆಲವು ಅಂಕಿಸಂಖ್ಯೆಗಳನ್ನು ತೆಗೆದುಕೊಂಡು “ಏನೂ ಆಗದೆಯೇ ಏನೋ ಆಗಿ’ ಬಹುದೊಡ್ಡ ಹಗರಣವಾಗಿದೆ ಎಂದು ಬಿಂಬಿಸಲಾಗಿದೆ ಎಂದು ಹೇಳಿದರು. ಆದರೆ ಸಿಬಿಐನ ಎರಡು ಹಾಗೂ ಜಾರಿ ನಿರ್ದೇಶನಾಲಯದ ಒಂದು ಪ್ರಕರಣವಿದ್ದುದರಿಂದ ಎಲ್ಲವನ್ನೂ ಸೇರಿ ಒಟ್ಟು 2,183 ಪುಟಗಳ ಮೂರು ತೀರ್ಪು ಬರೆದಿದ್ದಾರೆ.
ಮೇಲ್ಮನವಿಗೆ ಸಿದ್ಧತೆ: ಸಿಬಿಐ ವಿಶೇಷ ಕೋರ್ಟ್‌ನ ಈ ತೀರ್ಪು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸಿಬಿಐ ಮತ್ತು ಜಾರಿ ನಿರ್ದೇಶ ನಾಲಯದ ಅಧಿಕಾರಿಗಳು ಹೇಳಿದ್ದಾರೆ.
15 ತಿಂಗಳ ಸೆರೆವಾಸ: ಹಗರಣದ ಸಂಬಂಧ ಮಾಜಿ ಸಚಿವ ಎ. ರಾಜಾ ಅವರು 15 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದರು. ಕನ್ನಿಮೋಳಿ ಕೂಡ ಆರು ತಿಂಗಳು ಜೈಲಲ್ಲಿದ್ದರು. ಉಳಿದ ಆರೋಪಿಗಳು ವಿವಿಧ ಅವಧಿವರೆಗೆ ಜೈಲಲ್ಲಿದ್ದು, ಕಡೆಗೆ ಜಾಮೀನು ಪಡೆದು ಹೊರಬಂದಿದ್ದರು.
ಏನಿದು ಹಗರಣ?
2007-08ರ ವೇಳೆಗೆ ಯುಪಿಎ ಸರಕಾರದ ಸಚಿವರು ಮತ್ತು ಅಧಿಕಾರಿಗಳು ಸಂಚು ರೂಪಿಸಿ ಕೆಲವೊಂದು ಟೆಲಿಕಾಂ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕಡಿಮೆ ಹಣಕ್ಕೆ ಸ್ಪೆಕ್ಟ್ರಂ (ತರಂಗಾಂತರ)ಗಳನ್ನು ಮಾರಿ ದೇಶದ ಬೊಕ್ಕಸಕ್ಕೆ ಹಾನಿಯುಂಟು ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.