ಮುಂಬಯಿ-ದಿಲ್ಲಿ ನಡುವೆ 2ನೇ ವಂದೇ ಭಾರತ್?
ದೇಶದ 2ನೇ ಸೆಮಿ ಹೈ ಸ್ಪೀಡ್ ರೈಲು
Team Udayavani, May 10, 2019, 4:25 PM IST
ಮುಂಬಯಿ: ಸ್ವದೇಶಿ ನಿರ್ಮಿತ ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ (ಟ್ರೈನ್ -18) ಪ್ರಸಕ್ತ ತಿಂಗಳ ಅಂತ್ಯದ ವೇಳೆಗೆ ಚೆನ್ನೈ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಿಂದ ಹೊರಬರಲಿದೆ.
ದೇಶದ 2ನೇ ಸೆಮಿ ಹೈ ಸ್ಪೀಡ್ ರೈಲು ಆಗಿರುವ ಇದು ದಿಲ್ಲಿ ಮತ್ತು ಮುಂಬಯಿ ನಡುವೆ ಓಡುವ ನಿರೀಕ್ಷೆಯಿದೆ. ವಂದೇ ಭಾರತ್ ಅನ್ನು ಮೂಲತಃ ಟ್ರೈನ್ 18 ಹೆಸರಿನಿಂದ ವಿನ್ಯಾಸಗೊಳಿಸಲಾಗಿತ್ತು. 2018ರ ಕಾರಣದಿಂದಾಗಿ ಅದಕ್ಕೆ ಈ ಹೆಸರು ಬಂದಿತ್ತು. ಇದಾದ ಬಳಿಕ ಟ್ರೈನ್-19 ಎಂಬ ಹೆಸರಿನೊಂದಿಗೆ ಈ ವರ್ಷ ಒಂದು ಹೊಸ ರೀತಿಯ ರೈಲಿನ ಸೆಟ್ ಅನ್ನು ತರಲು ಯೋಚಿಸಲಾಗಿತ್ತು. ಆದರೆ ಈಗ ಆ ಯೋಜನೆಯನ್ನು ರದ್ದುಗೊಳಿಸಲಾಗಿದ್ದು, ಟ್ರೈನ್-19 ಬದಲಿಗೆ ಟ್ರೈನ್-18 ಮಾದರಿಯ ಹೆಚ್ಚುವರಿ ರೈಲುಗಳನ್ನು ತರಲು ನಿರ್ಣಯಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೊಸ ರೈಲಿನ ವಿನ್ಯಾಸದಲ್ಲಿ ಬದಲಾವಣೆ
ಹೊಸ ವಂದೇ ಭಾರತ್ ರೈಲಿನ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಇದರಲ್ಲಿ ಮೊದಲು ಊಟಕ್ಕೆ ಸಾಕಷ್ಟು ಸ್ಥಳಾವಕಾಶ ಇದ್ದಿರಲಿಲ್ಲ. ಆದರೆ, ಈಗ ಸಾಕಷ್ಟು ಸ್ಥಳವನ್ನು ಉಪಲಬ್ಧಗೊಳಿಸಲಾಗಿದೆ. ರೈಲು ಹರಿದು ಜಾನುವಾರುಗಳು ಕತ್ತರಿಸಲ್ಪಡುವಂ ತಹ ಘಟನೆಗಳನ್ನು ತಪ್ಪಿಸಲು ಈ ರೈಲಿನಲ್ಲಿ ಕ್ಯಾಟಲ್ ಗಾರ್ಡ್‌ನೂ° ಅಳವಡಿಸಲಾಗಿದೆ.
ವಂದೇ ಭಾರತ್‌ನ ಹೊಸ ರೈಲುಗಳ ಸೆಟ್ಟು ಅಸ್ತಿತ್ವದಲ್ಲಿರುವ ರೈಲಿನ ತುಲನೆಯಲ್ಲಿ ಹಲವು ರೀತಿಯಲ್ಲಿ ಭಿನ್ನ ಮತ್ತು ಉತ್ತಮವಾಗಿರಲಿದೆ. ಉದಾಹರಣೆಗೆ, ಇದರ ಸೀಟುಗಳನ್ನು ಶತಾಬ್ದಿ ರೈಲಿನ ಸೀಟುಗಳಿಗಿಂತಲೂ ಹೆಚ್ಚು ಹಿಂದಕ್ಕೆ ಬಾಗಿಸಬಹುದಾಗಿದೆ. ಅಷ್ಟೇ ಅಲ್ಲದೆ, ಸ್ವಯಂಚಾಲಿತ ಬಾಗಿಲುಗಳು ಜಾಮ್ ಆಗುವ ಸಂದರ್ಭದಲ್ಲಿ ಅದನ್ನು ಕೈಯಾರೆ ತೆರೆಯಲು ಕೂಡ ಇದರಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ.
2 ಎಕ್ಸಿಕ್ಯೂಟಿವ್ ಬೋಗಿ
ಇದು 16 ಎಸಿ ಬೋಗಿಗಳು, 2 ಎಕ್ಸ್‌ಕ್ಯೂಟಿವ್ ಬೋಗಿಗಳನ್ನು ಹೊಂದರಲಿದೆ. ಡ್ರೈವಿಂಗ್ ಬೋಗಿಯಲ್ಲಿ 44 ಸೀಟುಗಳಿದ್ದರೆ, ಟ್ರೇಲರ್ ಬೋಗಿಯಲ್ಲಿ 78 ಸೀಟುಗಳಿರಲಿವೆ. ಎಕ್ಸಿಕ್ಯೂಟಿವ್ ಚೇರ್ ಕಾರ್‌ನಲ್ಲಿ 52 ಸೀಟುಗಳಿರಲಿವೆ. ರೈಲಿನ ಗರಿಷ್ಠ ವೇಗ ಗಂಟೆಗೆ 220 ಕಿ.ಮೀ. ಆಗಿದೆ. ಶತಾಬ್ದಿ ಅಥವಾ ರಾಜಧಾನಿ ಎಕ್ಸ್‌ಪ್ರೆಸ್‌ಗಿಂತ ಇದರ ವೇಗ ಶೇ.10ರಿಂದ 15ರಷ್ಟು ಹೆಚ್ಚಾಗಿದೆ. ಅಂದಹಾಗೆ ಈ ರೈಲು ಲೋಕೋಮೋಟಿವ್ ಅಲ್ಲ ಎಂಬುದು ಗಮನಿಸಬೇಕಾದ ಅಂಶ. ಯಂತ್ರಗಳ ಸಹಾಯದಿಂದ ಚಲಿಸುತ್ತದೆ.
ಸಮಯದ ಉಳಿತಾಯ
ಎರಡನೇ ಸೆಮಿ ಹೈ ಸ್ಪೀಡ್ ಟ್ರೈನ್ ವಂದೇ ಭಾರತ್ ಮುಂಬಯಿ-ಹೊಸದಿಲ್ಲಿ ಮಾರ್ಗದ ನಡುವೆ ಓಡಲಿರುವ ಬಗ್ಗೆ ರೈಲ್ವೇ ಮಂಡಳಿಯು ಸಂಕೇತವನ್ನು ನೀಡಿದೆ. ಈ ರೈಲು ಮುಂಬಯಿಯಿಂದ ದಿಲ್ಲಿಯನ್ನು ತಲುಪಲು 12 ಗಂಟೆಗಳನ್ನು ತೆಗೆದುಕೊಳ್ಳಲಿದೆ. ಅದೇ, ಮುಂಬಯಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ದಿಲ್ಲಿ ಮತ್ತು ಮುಂಬಯಿ ನಡುವಿನ ಅಂತರವನ್ನು ಕ್ರಮಿಸಲು 16 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇಂಥದರಲ್ಲಿ ವಂದೇ ಭಾರತ್ ಪ್ರಯಾಣಿಕರನ್ನು 4 ಗಂಟೆಗಳ ಮೊದಲೇ ಅವರ ಗಮ್ಯ ಸ್ಥಾನಕ್ಕೆ ತಲುಪಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.