ಕೋವಿಡ್ ಅವಧಿಯಲ್ಲಿ 3 ಕೋಟಿ ಹೊಸ ಜನ್‌ಧನ್ ಖಾತೆ; ಶೇ. 60 ಏರಿಕೆ
Team Udayavani, Oct 27, 2020, 7:55 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಣಿಪಾಲ: ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜನ್‌ಧನ್ ಬ್ಯಾಂಕ್ ಖಾತೆಗಳನ್ನು ತೆರೆದವರ ಸಂಖ್ಯೆ ಹೆಚ್ಚಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಡೆಸಿದ ಅಧ್ಯಯನ ಪ್ರಕಾರ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜನ ಧನ್ ಖಾತೆ ತೆರೆಯುವ ಪ್ರಮಾಣವು ಶೇ. 60 ಹೆಚ್ಚಾಗಿದೆ.
ಎಪ್ರಿಲ್ 1 ಮತ್ತು ಅಕ್ಟೋಬರ್ 14ರ ನಡುವೆ ಸುಮಾರು 3 ಕೋಟಿ ಹೊಸ ಖಾತೆಗಳನ್ನು ತೆರೆಯಲಾಗಿದೆ. ಠೇವಣಿ 11,600 ಕೋಟಿ ರೂ. ಇರಿಸಲಾಗಿದೆ. ಇದರೊಂದಿಗೆ ಒಟ್ಟು ಜನ ಧನ್ ಖಾತೆಗಳ ಸಂಖ್ಯೆ 41.05 ಕೋಟಿಗೆ ಏರಿಕೆಯಾಗಿದೆ. ಈ ಖಾತೆಗಳಲ್ಲಿ ಒಟ್ಟು 1.31 ಲಕ್ಷ ಕೋಟಿ ರೂ. ಇದೆ.
ಎಸ್‌ಬಿಐ ಇಕೋರಾಪ್ ಸಂಶೋಧನಾ ವರದಿಯ ಪ್ರಕಾರ, ಜನ್ ಧನ್ ಎಪ್ರಿಲ್‌ನಲ್ಲಿ ಸರಾಸರಿ 3,400 ರೂ. ಉಳಿತಾಯ ಇತ್ತು. ಇದು ಸೆಪ್ಟೆಂಬರ್‌ನಲ್ಲಿ 3,168 ರೂ.ಗೆ ಇಳಿಕೆಯಾಗಿದೆ. ಆದರೆ ಬಳಿಕ ಅಕ್ಟೋಬರ್‌ನಲ್ಲಿ ಮತ್ತೆ ಸ್ವಲ್ಪ ಹೆಚ್ಚಳದೊಂದಿಗೆ ಸರಾಸರಿ ಉಳಿತಾಯ 3185 ರೂ.ಗೆ ಏರಿಕೆಯಾಗಿದೆ.
ಪ್ರಧಾನ್ ಮಂತ್ರಿ ಧನ್ ಯೋಜನೆ (PMJDY) ಅನ್ನು ಆಗಸ್ಟ್ 2014ರಲ್ಲಿ ಪ್ರಾರಂಭಿಸಲಾಯಿತು.ಯೋಜನೆಯಡಿ ಪ್ರತಿ ಕುಟುಂಬದಿಂದ ಖಾತೆ ತೆರೆಯುವ ಗುರಿಯನ್ನು ನಿಗದಿಪಡಿಸಲಾಗಿದೆ. ಈ ಖಾತೆಗಳಲ್ಲಿ 10,000 ರೂ. ಓವರ್‌ಡ್ರಾಫ್ಟ್ ಸೌಲಭ್ಯ ಲಭ್ಯವಿದೆ.
2.5 ಮಿಲಿಯನ್ ಹೊಸ ಇಪಿಎಫ್ ಚಂದಾದಾರರು
ಹೆಚ್ಚುವರಿಯಾಗಿ ಎಪ್ರಿಲ್-ಆಗಸ್ಟ್ ಅವಧಿಯಲ್ಲಿ, 2.5 ಮಿಲಿಯನ್ ಹೊಸ ಇಪಿಎಫ್ ಚಂದಾದಾರರು ಸೇರಿಕೊಂಡಿದ್ದಾರೆ. ಅದರಲ್ಲಿ 12.4 ಲಕ್ಷ ಜನರು ಮೊದಲ ಬಾರಿ ಪೇರೋಲ್ ಪಡೆಯುತ್ತಿರುವವರಾಗಿದ್ದಾರೆ. ಎಸ್‌ಬಿಐ ವರದಿಯು ಮೂರನೇ ಹಣಕಾಸಿನ ಉತ್ತೇಜನ (ಪರಿಹಾರ ಪ್ಯಾಕೇಜ್) ನಂತಹ ಖಾತೆಗಳಿಗೆ ಹೆಚ್ಚಿನ ಹಣವನ್ನು ಸೇರಿಸಲು ಸರಕಾಕ್ಕೆ ಸೂಚಿಸಿದೆ. ಉದಾಹರಣೆಗೆ, NREGA ಯೋಜನೆಯನ್ನು ಮತ್ತಷ್ಟು ಹೆಚ್ಚಿಸಬೇಕು. ಅಲ್ಲದೆ ನಗರದಲ್ಲಿ ವಾಸಿಸುವ ಬಡ ಜನರಿಗೆ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಕು ಎಂದು ಸಲಹೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.