ಕ್ರೌರ್ಯ ಮೆರೆದ ಉಗ್ರರು ಮೂವರು ಪೊಲೀಸರ ಹತ್ಯೆ
Team Udayavani, Sep 22, 2018, 6:00 AM IST
ಶ್ರೀನಗರ: ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕರು ಈಗ ಪೊಲೀಸರನ್ನೇ ಗುರಿಯಾಗಿಸಿಕೊಂಡಿದ್ದು, ಶುಕ್ರವಾರ ಶೋಪಿಯಾನ್ ಜಿಲ್ಲೆಯಲ್ಲಿ ಮೂವರು ಪೊಲೀಸರನ್ನು ಅವರ ಮನೆ ಗಳಿಂದ ಅಪಹರಿಸಿಕೊಂಡು ಹೋಗಿ, ಹತ್ಯೆ ಗೈದಿದ್ದಾರೆ. ಇದು ಶ್ರೀನಗರದಲ್ಲಿ ಭಾರಿ ಆತಂಕ ಮೂಡಿಸಿದ್ದು, ಈ ಕೃತ್ಯ ಮಾಡಿದ್ದು ನಾವೇ ಎಂದು ಸಾಮಾಜಿಕ ಮಾಧ್ಯಮ ಗಳಲ್ಲಿ ಉಗ್ರ ಸಂಘಟನೆ ಹೇಳಿಕೊಂಡಿದೆ. ಅಷ್ಟೇ ಅಲ್ಲ, ಎಲ್ಲ ಪೊಲೀಸರನ್ನೂ ಇದೇ ರೀತಿ ಹತ್ಯೆಗೈಯಲಾಗುತ್ತದೆ. ಜೀವ ಉಳಿಸಿಕೊಳ್ಳಬೇಕಿದ್ದರೆ ರಾಜೀನಾಮೆ ನೀಡಿ ಎಂದು ಬೆದರಿಕೆ ಹಾಕಿದ್ದಾರೆ. ಇದರ ಬೆನ್ನಲ್ಲೇ 7 ಮಂದಿ ಪೊಲೀಸರು ರಾಜೀ ನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಸುದ್ದಿ ಸುಳ್ಳು ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿದೆ.
ಅಟ್ಟಾಡಿಸಿದ ಸ್ಥಳೀಯರು: ಕಾನ್‌ಸ್ಟೆಬಲ್ ನಿಸಾರ್ ಅಹಮದ್, ವಿಶೇಷ ಪೊಲೀಸ್ ಅಧಿಕಾರಿಗಳಾದ ಫಿರ್ದೋಸ್ ಅಹಮದ್ ಮತ್ತು ಕುಲ್ವಂತ್ ಸಿಂಗ್‌ರನ್ನು ಉಗ್ರರು ಅಪಹರಿಸಿ ಹತ್ಯೆಗೈದಿದ್ದಾರೆ. ಶುಕ್ರವಾರ ಬೆಳಗ್ಗೆ ಬಟಾಗುಂಡ್ ಗ್ರಾಮಕ್ಕೆ ಉಗ್ರರು ಬಂದು ಓರ್ವ ಪೊಲೀಸ್ ಸಿಬ್ಬಂದಿಯ ಅಪಹರಿಸಿ ವಾಹನದಲ್ಲಿ ಕರೆದೊಯ್ಯು ತ್ತಿದ್ದಾಗ ಸ್ಥಳೀಯರು ತಡೆಯಲು ಯತ್ನಿಸಿದ್ದಾರೆ. ಸ್ವಲ್ಪ ದೂರದವರೆಗೆ ಉಗ್ರ ರನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಆದರೆ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿ, ಸ್ಥಳೀಯರನ್ನು ಚದುರಿಸಿದ್ದಾರೆ. ನಂತರ ಗ್ರಾಮದಲ್ಲಿರುವ ನದಿಯ ಇನ್ನೊಂದು ದಡಕ್ಕೆ ಪೊಲೀಸರನ್ನು ಕರೆದು ಕೊಂಡು ಹೋಗಿ ಗುಂಡು ಹಾರಿಸಿ ಹತ್ಯೆ ಗೈದಿದ್ದಾರೆ. ನಂತರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿಕೊಂಡು ಈ ಘಟನೆಗೆ ನಾವೇ ಕಾರಣ ಎಂದು ಹೇಳಿಕೊಂಡಿದ್ದಾರೆ.
ಪೊಲೀಸರೇ ಟಾರ್ಗೆಟ್: ಹಿಂದೆಲ್ಲ ಜನಸಾಮಾನ್ಯರು ಹಾಗೂ ಸೇನಾ ನೆಲೆ ಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಹಿಜ್ಬುಲ್ ಮುಜಾ ಹಿ ದೀ ನ್ ಉಗ್ರರು ಈಗ ಪೊಲೀಸರನ್ನು ಗುರಿಯಾಗಿಸಿಕೊಂಡಿದ್ದಾರೆ. ಪೊಲೀಸರು ಕರ್ತವ್ಯದಲ್ಲಿದ್ದಾಗ ಅಥವಾ ಅವರು ಮನೆಗೆ ತೆರಳುತ್ತಿರುವಾಗ ದಾಳಿ ನಡೆಸಬೇಕು ಎಂದು ಉಗ್ರರಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಹಿಜ್ಬುಲ್ ಕಮಾಂಡರ್ ರಿಯಾಜ್ ನಾಯೂR ಕೂಡ ಹಲವು ಬಾರಿ ವಿಶೇಷ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಬೇಕು. ಅವರನ್ನು ಸರಕಾರ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದ.
ಐವರು ಉಗ್ರರು ಹತ್ಯೆ: ಬಂಡಿಪೋರಾ ದಲ್ಲಿ ಶುಕ್ರವಾರ ನಡೆದ ಕಾರ್ಯಾಚರಣೆ ಯಲ್ಲಿ ಲಷ್ಕರ್‌ಗೆ ಸೇರಿದ ಐವರು ಉಗ್ರರನ್ನು ಹತ್ಯೆಗೈಯಲಾಗಿದೆ. ಗುರುವಾರವೇ ಒಬ್ಬ ಉಗ್ರನನ್ನು ಹತ್ಯೆಗೈಯಲಾಗಿತ್ತಾದರೂ, ಆತನ ಮೃತದೇಹ ಶುಕ್ರವಾರ ಸಿಕ್ಕಿದೆ. ಉತ್ತರ ಕಾಶ್ಮೀರದ ಸುಮ್ಲರ್ ಪ್ರದೇಶದ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ಅಲ್ಲಿ ಅಡಗಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದರು.
ರಾಜೀನಾಮೆ ವಿಡಿಯೋ ನಕಲಿ?
ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿದ್ದೇವೆ ಎಂದು ಹೇಳುತ್ತಿರುವ ವಿಡಿಯೋ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇವರು ಪೊಲೀಸರೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಅಲ್ಲದೆ, ಇದು ಸುಳ್ಳು ಸುದ್ದಿ ಹಬ್ಬಿಸಲು ಉಗ್ರರ ಸಂಚು ಎಂದೂ ರಾಜ್ಯ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ. ಯಾರೂ ರಾಜೀನಾಮೆ ನೀಡಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಎಸ್‌ಪಿಒಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಇವರ ಅವಧಿಯನ್ನು ನವೀಕರಿಸಲಾಗುತ್ತಿದೆ. ಆದರೆ ಕೆಲವರನ್ನು ಕಾರಣಾಂತರಗಳಿಂದ ನವೀಕರಿಸಿಲ್ಲ. ಅಂಥವರನ್ನು ಬಳಸಿಕೊಂಡು ಉಗ್ರರು ವಿಡಿಯೋ ಪ್ರಕಟಿಸಿ, ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಗೃಹ ಇಲಾಖೆ ವಿವರಿಸಿದೆ. ಜಮ್ಮು ಕಾಶ್ಮೀರದ ಪೊಲೀಸರ ಶ್ರಮದಿಂದಾಗಿ ಉಗ್ರರು ಹಿಮ್ಮೆಟ್ಟಿದ್ದಾರೆ. ಶೋಪಿಯಾನ್‌ನಲ್ಲೇ ಈ ವರ್ಷ 28 ಉಗ್ರರನ್ನು ಹತ್ಯೆಗೈಯಲಾಗಿದೆ. ಇದು ಅವರನ್ನು ಚಿಂತೆಗೀಡು ಮಾಡಿದ್ದು, ಪೊಲೀಸರನ್ನು ಟಾರ್ಗೆಟ್ ಮಾಡಲಾಗುತ್ತಿದೆ.
ಉಗ್ರರ ಹೀನ ಕೃತ್ಯದಲ್ಲಿ ನಮ್ಮ ಮೂವರು ಸಹೋದ್ಯೋಗಿಗಳು ಹುತಾತ್ಮರಾಗಿದ್ದಾರೆ. ಉಗ್ರರನ್ನು ಶೀಘ್ರ ದಲ್ಲೇ ಬಂಧಿಸಿ, ಹೆಡೆಮುರಿ ಕಟ್ಟುತ್ತೇವೆ
ಸ್ವಯಂ ಪ್ರಕಾಶ್ ಪನಿ, ಕಾಶ್ಮೀರದ ಐಜಿಪಿ
ಕೇಂದ್ರದ ಬಲಪ್ರಯೋಗ ಕೆಲಸ ಮಾಡುತ್ತಿಲ್ಲ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಇನ್ನು ಮಾತುಕತೆ ಯಂತೂ ದೂರದ ಮಾತೇ ಸರಿ.
ಮೆಹಬೂಬಾ ಮುಫ್ತಿ, ಜಮ್ಮು ಕಾಶ್ಮೀರ ಮಾಜಿ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.