ಮೂರು ವರ್ಷದ ಬುದ್ದಿ ನೂರು ವರ್ಷದವರೆಗೆ : ಒಬ್ಬಳೇ ಆಸ್ಪತ್ರೆಗೆ ಆಗಮಿಸಿದ ಪುಟ್ಟ ಪೋರಿ
Team Udayavani, Jun 4, 2021, 3:37 PM IST
ನಾಗಾಲ್ಯಾಂಡ್ : ಕೋವಿಡ್ ಸೋಂಕು ಸೃಷ್ಟಿಸಿರುವ ಆತಂಕದ ವಾತಾವರಣದಲ್ಲಿ ನೆಗಡಿ-ಕೆಮ್ಮು ಬಂದರೆ ಜನರು ಆಸ್ಪತ್ರೆಯ ಮೆಟ್ಟಿಲು ತುಳಿಯಲು ಹಿಂದೇಟು ಹಾಕುತ್ತಿದ್ದಾರೆ. ಭಯದಿಂದ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದಾರೆ. ಆದರೆ, ಇಲ್ಲೊಬ್ಬಳು ಪುಟ್ಟ ಬಾಲೆ ಒಬ್ಬಳೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುವ ಮೂಲಕ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.
ಈ ಅಪರೂಪದ ಘಟನೆ ನಡೆದಿರುವುದು ನಾಗಲ್ಯಾಂಡಿನಲ್ಲಿ. ತನಗೆ ನೆಗಡಿಯ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಯಾರ ಸಹಾಯವೂ ಇಲ್ಲದೆ ತಾನೋಬ್ಬಳೆ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾಳೆ ಈ ಬಾಲಕಿ . ಹೀಗೆ ತನ್ನ ಆರೋಗ್ಯದ ಬಗ್ಗೆ ತಾನೇ ಕಾಳಜಿ ವಹಿಸಿದ ಕಂದನ ಹೆಸರು ಲಿಪಾವಿ. ಈಕೆಯ ವಯಸ್ಸು ಕೇವಲ ಮೂರೇ ಮೂರು ವರ್ಷ. ಬೆಳೆಯುವ ಸಿರಿ ಮೊಳೆಯಲ್ಲಿ ಎಂದ ಗಾದೆ ಮಾತಿನಂತೆ ಈ ಚಿಕ್ಕ ವಯಸ್ಸಿನಲ್ಲಿಯೆ ಲಿಪಾವಿ ಹಿರಿಯರಂತೆ ನಡೆದುಕೊಂಡಿದ್ದಾಳೆ.
ಲಿಪಾವಿಗೆ ಸಣ್ಣದಾಗಿ ಕೆಮ್ಮು ಹಾಗೂ ನೆಗಡಿ ಕಾಣಿಸಿಕೊಂಡಿತ್ತು. ಈ ಕುರಿತು ತನ್ನ ಪೋಷಕರ ಗಮನಕ್ಕೆ ತಂದಿದ್ದಳು. ಆದರೆ, ಈ ಬಗ್ಗೆ ನಿರ್ಲಕ್ಷ್ಯ ತೋರಿದ ಆಕೆಯ ತಂದೆ-ತಾಯಿ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಆದರೆ, ಲಿಪಾವಿ ಸುಮ್ಮನೆ ಮನೆಯಲ್ಲಿ ಕೂರದೆ ಹತ್ತಿರದ ‘ಹೆಬೊಲಿಮಿ ಹೆಸರಿನ ಆರೋಗ್ಯ ಕೇಂದ್ರ’ಕ್ಕೆ ತೆರಳಿದ್ದಾಳೆ.
ಈ ಪುಟ್ಟ ಕಂದ ಆಸ್ಪತ್ರೆಗೆ ಬಂದಿರುವುದನ್ನ ನೋಡಿ ಅಚ್ಚರಿಗೊಂಡ ಅಲ್ಲಿಯ ವೈದ್ಯರು, ಆಕೆಯ ಸಮಸ್ಯೆ ಆಲಿಸಿ, ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಜೊತೆಗೆ ಈ ವಿಷಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ಪುಟ್ಟ ಬಾಲೆಗಿರುವ ಆರೋಗ್ಯ ಕಾಳಜಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಈ ಪೊಸ್ಟ್ ಅಪಾರ ಮೆಚ್ಚುಗೆ ಪಡೆದುಕೊಂಡಿದೆ.
The medical staff were in for a pleasant surprise when 3-year old Miss Lipavi,showed up at the health centre.She reportedly had cold symptoms but since her parents had left for the paddy field,she decided to come all by herself for a checkup at the health center.@narendramodi pic.twitter.com/hPzLZg6OCi
— Benjamin Yepthomi (@YepthomiBen) June 3, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.