ಯೋಧನ ತಾಯಿಯ ಶವ ಹೊತ್ತು 30 ಕಿಮೀ ನಡಿಗೆ!
Team Udayavani, Feb 4, 2017, 3:45 AM IST
ಶ್ರೀನಗರ: ಅಲ್ಲೆಲ್ಲೋ ಒರಿಸ್ಸಾದ ಹಳ್ಳಿಯಲ್ಲಿ ಪತ್ನಿಯ ಶವ ಹೊತ್ತು 10 ಕಿ.ಮೀ. ಸಾಗಿದ ಕತೆ ಇನ್ನೂ ಕಣ್ಣೆದುರು ಮಾಸಿಲ್ಲ. ಇಂಥದ್ದೇ ಮನ ಕಲಕುವ ಘಟನೆ ಕಾಶ್ಮೀರದಲ್ಲಿ ನಡೆದಿದೆ. ಯೋಧನ ತಾಯಿಯ ಶವವನ್ನು ಹೊತ್ತ ಹಳ್ಳಿಯ ಮಂದಿ 10 ಅಡಿಯ ಮಂಜುಗಡ್ಡೆಯ ಪ್ರದೇಶದಲ್ಲಿ ಭಾರದ ಹೆಜ್ಜೆಗಳನ್ನು ಹಾಕಿ, ಬರೋಬ್ಬರಿ 30 ಕಿ.ಮೀ. ಸಾಗಿದ್ದಾರೆ!
ಕಣಿವೆಯಲ್ಲಿನ ನಿರಂತರ ಹಿಮಪಾತ ಈಗಾಗಲೇ 20 ಯೋಧ ಪ್ರಾಣ ಕಸಿದಿದೆ. ಕುಪ್ವಾರದ ಹಳ್ಳಿಯಲ್ಲಿ ಯೋಧನೊಂದಿಗೆ ವಾಸವಿದ್ದ ತಾಯಿ ಜನವರಿ 28ರಂದು ನಿಧನರಾಗಿದ್ದರು. ತೀವ್ರ ಚಳಿಯಿಂದ ಹೃದಯದ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ಯೋಧನ ತಾಯಿ ನಿಧನರಾಗಿದ್ದರು. ಪಠಾಣ್‌ಕೋಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಮ್ಮದ್ ಅಬ್ಟಾಸ್ ಮರುದಿನವೇ ಸೇನಾಧಿಕಾರಿಗಳಿಗೆ ಈ ಸಂಗತಿ ತಿಳಿಸಿ, ತಮ್ಮ ಹಳ್ಳಿ ಕರ್ನಾಹ್‌ಗೆ ಶವ ಸಾಗಿಸಲು ಹೆಲಿಕಾಪ್ಟರ್ ನೆರವು ಕೇಳಿದ್ದಾರೆ. “ದಟ್ಟ ಹಿಮವಿದ್ದ ಕಾರಣ ಹೆಲಿಕಾಪ್ಟರ್ ಕಳುಹಿಸಿ ಕೊಡಲು ಕಷ್ಟವಾಗುತ್ತದೆ. ಹಿಮಪಾತ ಕಡಿಮೆಯಾದರೆ ಸೌಲಭ್ಯ ನೀಡುತ್ತೇವೆ’ ಎಂದು ಭರವಸೆ ನೀಡಿದ್ದಾರೆ. ಆದರೆ, ಮೂರ್ನಾಲ್ಕು ದಿನವಾದರೂ ಹೆಲಿಕಾಪ್ಟರ್ ಬರಲು ಸಾಧ್ಯವೇ ಆಗಲಿಲ್ಲ.
ಕರೆ ಸ್ವೀಕರಿಸದ ಅಬ್ಟಾಸ್: ದ್ರಂಗ್ಯಾರಿ ಹಳ್ಳಿಧಿಧಿಯಲ್ಲಿ ಹಿಮಪಾತ ಕಡಿಮೆ ಇದ್ದಿದ್ದರಿಂದ ಅಬ್ಟಾಸ್, ಕುಪ್ವಾರದ ಅಧಿಕಾರಿಗಳಿಗೆ ಇನ್ನಾಧಿದರೂ ಹೆಲಿಕಾಪ್ಟರ್ ಕಳುಹಿಸಿಧಿಕೊಡುವಂತೆ ಮನವಿ ಮಾಡಿದರು. ಅಧಿಕಾರಿಗಳು ಪುನಃ ಅದೇ ಉತ್ತರ ನೀಡಿದ್ದರಿಂದ ಕೋಪಗೊಂಡ ಅಬ್ಟಾಸ್ ಅಲ್ಲಿಂದ ಪುನಃ ತಮ್ಮ ತಾಯಿಯ ಶವಯಾತ್ರೆ ಮುಂದುವರಿಸಿದರು. ನಡುವೆ ಸೇನಾಧಿಕಾರಿಗಳು ಕರೆ ಮಾಡಿದರೂ ಅಬ್ಟಾಸ್ ಸ್ವೀಕರಿಸಲಿಲ್ಲ. ಅಬ್ಟಾಸ್ ಕುಟುಂಧಿಬವೂ ಸೇನೆಯ ನೆರವನ್ನು ತಿರಸ್ಕರಿಸಿತು. ಕರ್ನಾಹ್‌ನಲ್ಲಿ ಅಬ್ಟಾಸ್ ತಾಯಿಯ ಅಂತ್ಯ ಸಂಸ್ಕಾರಕ್ಕೆ ನೂರಾರು ಹಳ್ಳಿಮಂದಿ ಸಾಕ್ಷಿಯಾಗಿಧಿದ್ದರು. ಎಲ್ಲ ವಿಧಿವಿಧಾನ ಮುಗಿದ ಮೇಲೆ ಸೇನಾಧಿಕಾರಿಗಳು ಕರ್ನಾಹ್‌ಗೆ ಬಂದಿದ್ದರು!
ಹೆಗಲಾದ ಹಳ್ಳಿ ಮಂದಿ
ಇನ್ನು ಕಾದು ಕುಳಿತರೆ ಪ್ರಯೋಜನವಿಲ್ಲ ಎಂದುಕೊಂಡು ಅಬ್ಟಾಸ್, ಆ ಹಳ್ಳಿ ಮಂದಿಯ ಜೊತೆಗೂಡಿ ಶವ ಹೊರಲು ನಿರ್ಧರಿಸಿದರು. ಕಣಿವೆಯ 30 ಕಿಲೋಮೀಟರ್ ಹಾದಿಯಲ್ಲಿ ಹಿಮ 10 ಅಡಿ ಎತ್ತರ ದಟ್ಟವಾಗಿ ಆವರಿಸಿತ್ತು. ಹಿಮಗಾಳಿ ಪ್ರಪಾತಕ್ಕೆ ತಳ್ಳಲೆತ್ನಿಸುತ್ತಿತ್ತು. ಆ ಸವಾಲನ್ನೆಲ್ಲ ಮೆಟ್ಟಿ ಶವಯಾತ್ರೆ ಸಾಗಿತು. ಅಬ್ಟಾಸ್ ಸೇರಿದಂತೆ ಶವ ಹೊತ್ತ ಹತ್ತಾರು ಮಂದಿ ದ್ರಂಗ್ಯಾರಿ ಎಂಬ ಹಳ್ಳಿಗೆ ಬರುವಾಗ ಕತ್ತಲಾಗಿತ್ತು. ಅಲ್ಲಿನ ಜನ ಇವರಿಗೆಲ್ಲ ಊಟ- ವಸತಿಯ ವ್ಯವಸ್ಥೆ ಕಲ್ಪಿಸಿ ನೆರವಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.