ಹೈದರಾಬಾದ್‌ನ ಕಿಂಗ್ ಕೋಠಿ ಕಟ್ಟಡದ ಅವ್ಯವಹಾರ ; ನಕಲಿ ದಾಖಲೆ ಸೃಷ್ಟಿಸಿ ಮಾರಾಟ
Team Udayavani, Nov 12, 2019, 1:32 AM IST
ಮುಂಬಯಿ: ಹೈದರಾಬಾದ್‌ನ ನವಾಬರ ಅರಮನೆಯ ಆವರಣದಲ್ಲಿರುವ ‘ಕಿಂಗ್ ಕೋಠಿ’ ಎಂಬ ಪಾರಂಪರಿಕ ಕಟ್ಟಡ ವನ್ನು, ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಖಾಸಗಿ ಕಂಪೆನಿಯೊಂದಕ್ಕೆ 300 ಕೋಟಿ ರೂ.ಗಳಿಗೆ ಮಾರಿದ್ದ ಹೈದರಾಬಾದ್ ನಿವಾಸಿ ಸುಂದರಂ ಕೋರ್ಲುಕುಡ್ರೊ ರವೀಂದ್ರನ್ (64) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇತರ ಆರೋಪಿಗಳಾದ ಪಿ. ಸುರೇಶ್ ಕುಮಾರ್, ಮೊಹಮ್ಮದ್ ಉಸ್ಮಾನ್, ಮುಖೇಶ್ ಗುಪ್ತಾಗಾಗಿ ಹುಡುಕಾಟ ಮುಂದುವರಿದಿದೆ.
ಏನಿದು ಪ್ರಕರಣ?: ಹೈದರಾಬಾದ್ ಅರಮನೆಯ ಬಳಿಯಿರುವ 100 ವರ್ಷಗಳಷ್ಟು ಹಳೆಯ 28,106 ಚದರ ಯಾರ್ಡ್‌ಗಳ ಕಟ್ಟಡವನ್ನು, ‘ಮುಂಬಯಿನ ನಿಹಾರಿಕಾ ಇನ್‌ಫ್ರಾಸ್ಟಕ್ಚರ್ಸ್’ ಎಂಬ ಕಂಪೆನಿ, 3 ವರ್ಷಗಳ ಹಿಂದೆ ಕೊಂಡಿತ್ತು. ಆದರೆ, ಇದೇ ಜನವರಿಯಲ್ಲಿ ಕಾಶ್ಮೀರ ಮೂಲದ ಕಂಪೆನಿಯೊಂದಕ್ಕೆ ಈ ಕಟ್ಟಡ ಪರಭಾರೆ ಮಾಡಲಾಗಿರುವುದು ಬೆಳಕಿಗೆ ಬಂದಿತ್ತು.
ಪ್ರಕರಣದ ತನಿಖೆಯಲ್ಲಿ, ನಿಹಾರಿಕಾ ಕಂಪೆನಿಯ ಇಬ್ಬರು ಮಾಜಿ ಉದ್ಯೋಗಿಗಳು, ಕಂಪೆನಿಯ ಸೇವೆಯಲ್ಲಿದ್ದಾಗ, ಪಾರಂಪರಿಕ ಕಟ್ಟಡದ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕಂಪನಿಯ ಪರವಾಗಿ ಮಾರಾಟ ಮಾಡಿದ್ದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ, ಆರೋ ಪಿಗಳ ವಿರುದ್ಧ ಲುಕ್‌ಔಟ್ ನೋಟಿಸ್ ನೀಡಲಾಗಿದ್ದರಿಂದ, ನ. 10ರಂದು ಭಾರತದಿಂದ ಸಿಂಗಾಪುರಕ್ಕೆ ಓಡಿಹೋಗುವ ಯತ್ನದಲ್ಲಿದ್ದ ರವೀಂದ್ರನ್ ಸಿಕ್ಕಿಬಿದ್ದಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚೆನ್ನೈ ಲೈಂಗಿಕ ಕಿರುಕುಳ ಕೇಸ್: ಎಸ್‌ಐಟಿ ತನಿಖೆಗೆ ಹೈಕೋರ್ಟ್ ಆದೇಶ
Pinarayi Vijayan: ಸಿಂಗ್ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ
Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.